ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೈದಿಗಳ ಪೆಟ್ರೋಲ್ ಬಂಕ್ ಶೀಘ್ರ ಆರಂಭ

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 19: ಕೈದಿಗಳಿಂದ ಪೆಟ್ರೋಲ್ ಬಂಕ್ ನಡೆಸುವ ನೂತನ ಪ್ರಯತ್ನಕ್ಕೆ ಕೇರಳ ಸರ್ಕಾರ ಮುಂದಾಗಿದೆ.

ಕೈದಿಗಳಿಂದ ರುಚಿಕರ ಆಹಾರ ತಯಾರಿಸಿ ಮಾರಾಟ ಮಾಡುವ ಯೋಜನೆ ಯಶಸ್ವಿಯಾದ ಬಳಿಕ , ಕೈದಿಗಳಿಂದಲೇ ಪೆಟ್ರೋಲ್ ಬಂಕ್ ನಡೆಸುವ ಪ್ರಯತ್ನ ಇದಾಗಿದೆ.

ತಮಿಳುನಾಡು ಹಾಗೂ ಪಂಜಾಬ್‌ನಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ನವೆಂಬರ್ -ಡಿಸೆಂಬರ್ ವೇಳೆಗೆ ಕೇರಳದಲ್ಲಿ ಕೈದಿಗಳಿಂದಲೇ ನಡೆಸಲ್ಪಡುವ ಪೆಟ್ರೋಲ್‌ಬಂಕ್ ಅಸ್ತಿತ್ವಕ್ಕೆ ಬರಲಿದೆ.

Prisoners Petrol Bunk Open Soon In Kerala

ತಿರುವನಂತಪುರನ ಜಪ್ಪುರ, ತ್ರಿಶೂರ್ ನ ವಿಯ್ಯೂರ್ ಹಾಗೂ ಕಣ್ಣೂರು ಕೇಂದ್ರ ಕಾರಾಗೃಹಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಕಾರಾಗೃಹ ಇಲಾಖೆ ಗೊತ್ತುಪಡಿಸಿದ ಸ್ಥಳದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬಂಕ್ ಗಳನ್ನು ತೆರೆಯಲಿದೆ.

ಪ್ರತಿ ಬಂಕ್‌ಗಳಲ್ಲಿ ವಿವಿಧ ಶಿಫ್ಟ್ ಗಳಲ್ಲಿ 15 ಕೈದಿಗಳು ಕೆಲಸ ನಿರ್ವಹಿಸಲಿದ್ದಾರೆ. ಕಾರಾಗೃಹ ನಿಯಮಾವಳಿಯಂತೆ ದಿನಗೂಲಿ ನೀಡಲಾಗುತ್ತದೆ ಎಂದು ಕಣ್ಣೂರು ಕಾರಾಗೃಹ ಅಧಿಕಾರಿ ರಿಷಿರಾಜ್ ಸಿಂಗ್ ಹೇಳಿದ್ದಾರೆ.

English summary
Prisoners Petrol Bunk Open Soon In Kerala, The Kerala prisons department is all set to open petrol pumps in which prisoners and those who have completed their jail term would work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X