ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧ ಐಎಎಸ್ ಅಧಿಕಾರಿ ಪ್ರಾಂಜಲಾ ಈಗ ಉಪ ವಿಭಾಗಾಧಿಕಾರಿ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 15: ಅಂಧತ್ವವನ್ನು ಮೆಟ್ಟಿನಿಂತು ಐಎಎಸ್‌ ಹುದ್ದೆಗೇರಿದ್ದ ಪ್ರಾಂಜಲ್ ಪಾಟೀಲ್ ಈಗ ತಿರುವನಂದಪುರಂನ ವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಪ್ರಾಂಜಲ್ ಮಹಾರಾಷ್ಟ್ರದ ಉಲ್ಲಾಸ್‌ನಗರ ವಾಸಿಯಾಗಿದ್ದಾರೆ. 2016ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು 773ನೇ ಸ್ಥಾನದಲ್ಲಿದ್ದರು. ಅಲ್ಲದೆ 2017ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ 214ನೇ ಸ್ಥಾನ ಪಡೆದಿದ್ದರು.

ತಮ್ಮ ಸಹಾಯಕ ಅಧಿಕಾರಿ ಅನುಕುಮಾರಿ ಅವರ ಜೊಕೆ ಕಚೇರಿಗೆ ಬಂದ ಅವರು ಕಲೆಕ್ಟರ್ ಕೆ, ಗೋಪಾಲ ಕೃಷ್ಣನ್ ಅವರ ಚೇಂಬರ್ ನಲ್ಲಿ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ,. ಜನರ ಒಳಿತಾಗಿಗಿ ಉತ್ತಮ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.

Pranjal Patil Takes Over As Sub-Collector Of Thiruvananthapuram

ಆರನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಪ್ರಾಂಜಲ್ ಯಾವುದೇ ಐಎಎಸ್ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿರಲಿಲ್ಲ, ಅಧ್ಯಯನ ಮತ್ತು ತಮ್ಮ ಕೆಲಸಗಳಿಗಾಗಿ ದೃಷ್ಟಿ ಹೀನರಿಗಾಗಿ ಇರುವ ವಿಶೇಷ ಸಾಫ್ಟ್ ವೇರೆ ಬಳಸುತ್ತಾರೆ.

ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರಾಂಜಲ್ ಜೀವನದಲ್ಲಿ ಯಾವತ್ತೂ ಸೋಲೊಪ್ಪಿಕೊಳ್ಳಬಾರದು. ನಿರಂತರವಾಗಿ ಶ್ರಮ ವಹಿಸಿದರೆ ನಾವು ಅಂದುಕೊಂಡ ಗುರಿಯನ್ನು ತಲುಪಲು ಪ್ರತಿಯೊಬ್ಬರಿಗೂ ಸಾಧ್ಯ ಎಂದು ಹೇಳಿದರು.

ಐಎಎಸ್ ಅಧಿಕಾರಿಗಳ ರಾಜೀನಾಮೆ; ಸಂವಿಧಾನಕ್ಕೆ ಅಪ್ಪಳಿಸಿದ ಧೂಮಕೇತು?ಐಎಎಸ್ ಅಧಿಕಾರಿಗಳ ರಾಜೀನಾಮೆ; ಸಂವಿಧಾನಕ್ಕೆ ಅಪ್ಪಳಿಸಿದ ಧೂಮಕೇತು?

ಪ್ರಾಂಜಲ್ ಕೇವಲ ಆರು ವರ್ಷ ವಯಸ್ಸಿನವನಾಗಿದ್ದಾಗ ಅವರ ಸಹಪಾಠಿಯೊಬ್ಬರು ಕಣ್ಣಿನಲ್ಲಿ ಪೆನ್ಸಿಲ್ ನಿಂದ ಹೊಡೆದು ಗಾಯಗೊಳಿಸಿದ್ದರು.

English summary
Pranjal Patil, the young woman who battled great odds to become the country’s first visually challenged woman IAS officer, took over as Sub-Collector in Thiruvananthapuram, on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X