ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತ ಪದವಿಗೇರಿದ ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 13: ಕೇರಳದ ಸಿಸ್ಟರ್(nun) ಮರಿಯಂ ತ್ರೇಸಿಯಾ ಚಿರಾಮಲ್ ಮಂಕಿಡಿಯಾನ್ ಅವರನ್ನು ಸಂತ ಪದವಿಗೇರಿಸಲಾಗಿದೆ ಎಂದು ವ್ಯಾಟಿಕನ್ ಸಿಟಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್ ಘೋಷಿಸಿದರು.

1876ರ ಏಪ್ರಿಲ್ 26ರಂದು ಕೇರಳದ ತ್ರಿಶೂರಿನಲ್ಲಿ ಜನಿಸಿದ ಸಿಸ್ಟರ್ ತ್ರೇಸಿಯಾ ಅವರು 1914ರಲ್ಲಿ ತ್ರಿಶೂರಿನಲ್ಲಿ ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಪ್ರಾರ್ಥನಾ ಸಭೆ (CHF) ಯನ್ನು ಆರಂಭಿಸಿದರು. ರೋಮ್ ನ ಸಂತ ಪೀಟರ್ ಸ್ಕ್ವೇರ್ ನಲ್ಲಿ ನಡೆದ ಸೊಲೆಮನ್ ಯುಚಾರಿಶಿಸ್ಟಿಟ್ ಸೆಲೆಬ್ರೇಷನ್ ನಲ್ಲಿ ತ್ರೇಸಿಯಾ ಸೇರಿ ನಾಲ್ವರನ್ನು ಸಂತ ಪದವಿಗೇರಿಸಲಾಯಿತು ಎಂದು ವ್ಯಾಟಿಕನ್ ನ್ಯೂಸ್ ಹೇಳಿದೆ.

ಶುಕ್ರವಾರ 13ನೇ ದಿನಾಂಕ ಯಾರಿಗೆ ಶುಭ, ಯಾರಿಗೆ ಅಶುಭಶುಕ್ರವಾರ 13ನೇ ದಿನಾಂಕ ಯಾರಿಗೆ ಶುಭ, ಯಾರಿಗೆ ಅಶುಭ

ಇಂಗ್ಲೆಂಡಿನ ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್, ಸ್ವಿಸ್ ಲೇವುಮೆನ್ ಮಾರ್ಗುರೇಟ್ ಬೇಯ್ಸ್, ಬ್ರೆಜಿಲ್ಲಿನ ಸಿಸ್ಟರ್ ಡೂಲ್ಸ್ ಲೋಪ್ಸ್ ಹಾಗೂ ಇಟಾಲಿಯನ್ ಸಿಸ್ಟರ್ ಜಿಯೋಸೆಪ್ಪಿನ ವಾನಿನಿ ಅವರು ಸಂತ ಪದವಿ ಪಡೆದಿದ್ದಾರೆ. 1926ರಲ್ಲಿ 50ನೇ ವಯಸ್ಸಿನಲ್ಲಿ ಸಿಸ್ಟರ್ ತ್ರೇಸಿಯಾ ಮೃತರಾದರು.

Pope Francis declares Kerala nun Mariam Thresia as Saint

ಮರಿಯಂ ತ್ರೇಸಿಯಾ ಅವರು ತ್ರೇಸಿಯಾ ಎಂಬ ಹೆಸರಿನಲ್ಲಿ ಜನಿಸಿ, 1904ರಲ್ಲಿ ಕನ್ಯಾ ಮೇರಿ ಕೃಪೆಯಿಂದ ಮರಿಯಂ ತ್ರೇಸಿಯಾ ಎಂಬ ಹೆಸರು ಬಳಸಲು ಆಜ್ಞೆ ಆಗಿದೆ ಎಂದು ಪ್ರಕಟಿಸಿದರು. ನಂತರ ದೀನ ದಲಿತರ ಸೇವೆ, ಮಾಂತ್ರಿಕ ಸ್ಪರ್ಶದ ಮೂಲಕ ಅನೇಕರ ಸಂಕಷ್ಟಗಲನ್ನು ದೂರಾಗಿಸಿದರು ಎಂದು ವ್ಯಾಟಿಕನ್ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29ರಂದು 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಸಿಸ್ಟರ್ ಮರಿಯಂ ತ್ರೇಸಿಯಾ ಅವರ ಹೆಸರನ್ನು ಉಲ್ಲೇಖಿಸಿ, ಸಮಾಜಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದರು.

English summary
Kerala nun Mariam Thresia Chiramel Mankidiyan was declared a saint by Pope Francis at a grand ceremony at the Vatican City on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X