ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ವಿವಾದ ರಾಜಕೀಯ ಬಳಕೆಗಿಲ್ಲ: ಚುನಾವಣಾ ಆಯೋಗ

|
Google Oneindia Kannada News

ತಿರುವನಂತಪುರಂ, ಮಾರ್ಚ್‌ 11: ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೆ ಕೇರಳ ಚುನಾವಣಾ ಆಯೋಗವು ಮಹತ್ವದ ಆದೇಶ ಹೊರಡಿಸಿದ್ದು, ಶಬರಿಮಲೆ ವಿವಾದವನ್ನು ಪ್ರಚಾರಕ್ಕಾಗಿ ಯಾವುದೇ ರಾಜಕೀಯ ಪಕ್ಷಗಳು ಬಳಸುವಂತಿಲ್ಲ ಎಂದಿದೆ.

ಶಬರಿಮಲೆ ವಿವಾದವನ್ನು ಚುನಾವಣಾ ಭಾಷಣಗಳಲ್ಲಿ ಬಳಸುವುದು ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಕೇರಳ ಚುನಾವಣಾ ಆಯೋಗ ಇಂದು ಹೇಳಿದ್ದು, ಶಬರಿಮಲೆ ವಿವಾದವನ್ನು ಪ್ರಚಾರಕ್ಕೆ ಬಳಸುವವರು ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.

ಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾ

ಕೇರಳದಲ್ಲಿ ಲೋಕಸಭೆ ಚುನಾವಣೆಯ ಅತಿ ಮುಖ್ಯ ವಿಷಯವೇ ಶಬರಿಮಲೆ ಎನ್ನಲಾಗಿತ್ತು. ಬಿಜೆಪಿಯು ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿರುದ್ಧವಾಗಿದ್ದರೆ, ಆಡಳಿತಾರೂಡ ಕಮ್ಯುನಿಸ್ಟ್ ಪಕ್ಷವು ಸುಪ್ರಿಂ ತೀರ್ಪಿನ ಪರವಾಗಿತ್ತು, ಕಾಂಗ್ರೆಸ್ ಬಹುತೇಕ ತಟಸ್ಥವಾಗಿತ್ತು.

ಭಕ್ತರಿಗೆ ಅಭಯ ನೀಡಿದ್ದ ಅಮಿತ್ ಶಾ

ಭಕ್ತರಿಗೆ ಅಭಯ ನೀಡಿದ್ದ ಅಮಿತ್ ಶಾ

ಕೇರಳಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರಂತೂ ಬಹಿರಂಗವಾಗಿಯೇ, 'ಬಿಜೆಪಿಯು ಶಬರಿಮಲೆ ಭಕ್ತರ ಪರ ಇದೆ' ಎಂದು ಹೇಳಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ಅಲ್ಲದೆ ಈ ಬಾರಿಯ ಚುನಾವಣೆ ಹಿಂದೂಗಳು, ಹಿಂದೂ ವಿರೋಧಿಗಳ ನಡುವೆ ಎಂದು ಸಹ ಬಿಜೆಪಿ ಬಹಿರಂಗವಾಗಿ ಕೇರಳದಲ್ಲಿ ಹೇಳಿತ್ತು.

ಚುನಾವಣೆ ದಿನಾಂಕ ಘೋಷಣೆ : ಫಾರಂ 26 ಎಂದರೇನು? ಚುನಾವಣೆ ದಿನಾಂಕ ಘೋಷಣೆ : ಫಾರಂ 26 ಎಂದರೇನು?

ಶಬರಿಮಲೆ ಹೆಸರಲ್ಲಿ ಮತ ಕೇಳುವಂತಿಲ್ಲ

ಶಬರಿಮಲೆ ಹೆಸರಲ್ಲಿ ಮತ ಕೇಳುವಂತಿಲ್ಲ

ಆದರೆ ಈಗ ಚುನಾವಣಾ ಆಯೋಗವು ಶಬರಿಮಲೆ ವಿಷಯವನ್ನು ಇಟ್ಟುಕೊಂಡು ಮತಭೇಟೆ ಆಡಲು ಖಡ್ಡಾಯವಾಗಿ ನಿಷೇಧ ಹೇರಿದೆ. ಇದು ಮೂರೂ ಪ್ರಮುಖ ಪಕ್ಷಗಳಿಗೂ ಹಿನ್ನಡೆ ಉಂಟು ಮಾಡಲಿದೆ. ಇದೇ ವಿಷಯವನ್ನು ಕೇರಳದಲ್ಲಿ ಚುನಾವಣಾ ವಿಷಯವನ್ನಾಗಿಸಿಕೊಳ್ಳಲು ಉದ್ದೇಶಿಸಿದ್ದ ಬಿಜೆಪಿಗಂತೂ ಇದು ಭಾರಿ ಹಿನ್ನಡೆ ಆಗಲಿದೆ.

ನಾಲ್ಕು ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಾಲ್ಕು ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ

ರಣರಂಗವಾಗಿದ್ದ ಶಬರಿಮಲೆ

ರಣರಂಗವಾಗಿದ್ದ ಶಬರಿಮಲೆ

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿತು. ಆ ನಂತರ ಶಬರಿಮಲೆಯು ರಣರಂಗವಾಗಿ ಮಾರ್ಪಾಟಾಗಿತ್ತು. ಭಕ್ತಾದಿಗಳು ಹಿಂದೂಪರ ಸಂಘಟನೆ ಸದಸ್ಯರು ಅಹೋರಾತ್ರಿ ಪ್ರತಿಭಟನೆಗಳನ್ನು ಮಾಡಿದರು. ಬಹು ದಿನಗಳವರೆಗೆ ನಡೆದ ಪ್ರತಿಭಟನೆ ಬಳಿಕ ಕೆಲವು ಮಹಿಳೆಯರು ಶಬರಿಮಲೆ ಪ್ರವೇಶ ಮಾಡಿದರು. ಈಗ ಪ್ರತಿಭಟನೆ ತಣ್ಣಗಾಗಿದ್ದು, ಪೂಜೆಗಳು ಮಾಮೂಲಿನಂತೆ ನಡೆಯುತ್ತಿವೆ.

ಕೇರಳದಲ್ಲಿ ತ್ರಿಕೋನ ಸ್ಪರ್ಧೆ ಇದೆ

ಕೇರಳದಲ್ಲಿ ತ್ರಿಕೋನ ಸ್ಪರ್ಧೆ ಇದೆ

ಲೋಕಸಭೆ ಚುನಾವಣೆಯು ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು, ಕೇರಳದಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಮುಗಿಯಲಿದೆ. ಕೇರಳದಲ್ಲಿ 20 ಲೋಕಸಭಾ ಕ್ಷೇತ್ರಗಳಿದ್ದು, ಈ ಬಾರಿ ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈ ವರೆಗೂ ಕೇರಳದಲ್ಲಿ ಬಿಜೆಪಿ ಗೆದ್ದಿಲ್ಲ ಆದರೆ ಈ ಬಾರಿ ಭರವಸೆ ಮೂಡಿಸಿದೆ.

English summary
Political parties can not use Sabarimala issue to ask votes says election commission of Kerala. EC Kerala chief said using Sabarimala issue in campaign is clear violation of code of conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X