ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ: ಭಕ್ತರಿಂದ 40 ನಕಲಿ ಕೋವಿಡ್ ಪರೀಕ್ಷೆ ಪ್ರಮಾಣ ಪತ್ರ ವಶ

|
Google Oneindia Kannada News

ತಿರುವನಂತಪುರಂ, ಜನವರಿ 1: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳುವ ಭಕ್ತರ ನಿರ್ವಹಣೆಯ ಕಾರ್ಯಕ್ಕೆ ಮಕರವಿಳಕ್ಕು ಅವಧಿಯ ಮೊದಲ ದಿನ ಅನೇಕ ಸಮಸ್ಯೆಗಳು ಎದುರಾಗಿವೆ. ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆ ಸನ್ನಿಧಾನಕ್ಕೆ ತೆರಳುವ ಭಕ್ತರ ಸಂಖ್ಯೆಯನ್ನು 5,000ಕ್ಕೆ ಹೆಚ್ಚಿಸಲಾಗಿದೆ. ಆದರೆ ಮೂಲ ನೆಲೆಯಾದ ನಿಳಕ್ಕಳ್‌ನಲ್ಲಿ ಆರ್‌ಟಿ-ಪಿಸಿಆರ್, ಆರ್‌ಟಿ-ಲ್ಯಾಂಪ್ ಮತ್ತು ಟ್ರೂನಾಟ್ ಮಾದರಿಯಲ್ಲಿ ಕೊರೊನಾ ವೈರಸ್ ಪರೀಕ್ಷೆಗಳನ್ನು ನಡೆಸಲು ಪ್ರಯೋಗಾಲಯ ಸ್ಥಾಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಭಕ್ತರ ಸರಾಗ ಪ್ರವೇಶ ಚಟುವಟಿಕೆಗೆ ಹಿನ್ನಡೆಯಾಗಿದೆ.

ಹೆಚ್ಚಿದ ಕೋವಿಡ್ ಪ್ರಕರಣ: ಕಂಟೇನ್ಮೆಂಟ್ ವಲಯವಾಗುತ್ತದೆಯೇ ಶಬರಿಮಲೆ ಸನ್ನಿಧಿ?ಹೆಚ್ಚಿದ ಕೋವಿಡ್ ಪ್ರಕರಣ: ಕಂಟೇನ್ಮೆಂಟ್ ವಲಯವಾಗುತ್ತದೆಯೇ ಶಬರಿಮಲೆ ಸನ್ನಿಧಿ?

ಶಬರಿಮಲೆಯನ್ನು ಪ್ರವೇಶಿಸುವವರು ಕನಿಷ್ಠ 48 ಗಂಟೆಗಳ ಮುನ್ನ ಪರೀಕ್ಷೆಗೊಳಗಾಗಿ ಕೋವಿಡ್ ನೆಗೆಟಿವ್ ವರದಿಯ ಪ್ರಮಾಣಪತ್ರವನ್ನು ತರುವುದು ಕಡ್ಡಾಯವಾಗಿದೆ. ಮಕರವಿಳಕ್ಕು ಅವಧಿಯಲ್ಲಿ ಭಕ್ತರ ಸಂಖ್ಯೆಯನ್ನು 5,000ಕ್ಕೆ ಹೆಚ್ಚಿಸುವಂತೆ ಹೈಕೋರ್ಟ್ ಆದೇಶಿಸಿದ್ದರೂ, ಗುರುವಾರ ನಿಳಕ್ಕಳ್‌ನ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ದಾಖಲಾದ ಭಕ್ತರ ಸಂಖ್ಯೆ 3,225 ಮಾತ್ರ. ಹೆಚ್ಚಿನವರಿಗೆ ಕೋವಿಡ್ ಟೆಸ್ಟ್ ಪ್ರಮಾಣಪತ್ರದ ಕಾರಣ ಪ್ರವೇಶಾವಕಾಶ ಸಿಕ್ಕಿಲ್ಲ.

ಶಬರಿಮಲೆ ಪೂಜೆ ಪುನರಾರಂಭ: ಮುಖ್ಯ ಅರ್ಚಕ ಕ್ವಾರೆಂಟೈನ್ಶಬರಿಮಲೆ ಪೂಜೆ ಪುನರಾರಂಭ: ಮುಖ್ಯ ಅರ್ಚಕ ಕ್ವಾರೆಂಟೈನ್

ನಿಳಕ್ಕಳ್‌ನಲ್ಲಿ ಕೋವಿಡ್ ಪರೀಕ್ಷೆ ಪ್ರಯೋಗಾಲಯ ತೆರೆಯಲು ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಅಧಿಕಾರಿಗಳು ಅನುಮೋದನೆ ನೀಡುವಲ್ಲಿ ವಿಫಲವಾಗಿರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಆದರೆ ನಿಳಕ್ಕಳ್‌ನಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಕೋವಿಡ್ ಪರೀಕ್ಷೆ ಪ್ರಯೋಗಾಲಯ ಆರಂಭವಾಗಲಿದೆ ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ.

Police Seizes 40 Fake Covid Test Certificates From Sabarimala Pilgrims At Nilakkal

ಗುರುವಾರ ಒಂದೇ ದಿನ ನಿಳಕ್ಕಳ್‌ನಲ್ಲಿ ಕಂಟ್ರೋಲ್ ರೂಂನ ಪೊಲೀಸರು ಭಕ್ತರಿಂದ ಸುಮಾರು 40 ನಕಲಿ ಕೋವಿಡ್ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ನಿಳಕ್ಕಳ್‌ನಲ್ಲಿ ಅಧಿಕೃತ ಕೋವಿಡ್ ಪರೀಕ್ಷೆ ಪ್ರಮಾಣಪತ್ರ ಒದಗಿಸುವ ವ್ಯವಸ್ಥೆ ಇಲ್ಲದಿರುವುದರ ಲಾಭ ಪಡೆದುಕೊಂಡಿರುವ ಅನಧಿಕೃತ ಪ್ರಯೋಗಾಲಯಗಳು ಭಕ್ತರಿಂದ ಹೆಚ್ಚುವರಿ ಹಣ ಪಡೆದು ನಕಲಿ ಪ್ರಮಾಣಪತ್ರಗಳನ್ನು ನೀಡುತ್ತಿವೆ.

English summary
Police at the control room at Nilakkal have seized 40 fake Covid test certificates from Sabarimala pilgrims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X