ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮನ್ನು ಗೆಲ್ಲಿಸದವರೂ ನಮ್ಮವರೇ: ಕೇರಳದಲ್ಲಿ ಮೋದಿ ಮಾತು

|
Google Oneindia Kannada News

ತಿರುವನಂತಪುರಂ, ಜೂನ್ 08: "ಕೆಲವು ಪಂಡಿತರಿಗೆ ಅನ್ನಿಸುತ್ತಿರಬಹುದು. ಬಿಜೆಪಿಯನ್ನು ಗೆಲ್ಲಿಸದ ಕೇರಳಕ್ಕೇಕೆ ಮೋದಿ ಹೋಗುತ್ತಿದ್ದಾರೆ ಎಂದು. ಹೌದು, ಇಲ್ಲಿ ಬಿಜೆಪ ಖಾತೆ ತೆರೆದಿಲ್ಲ. ಆದರೂ ಇಲ್ಲಿಗೆ ಭೇಟಿ ನೀಡುವುದು ನಮ್ಮ ಸಂಸ್ಕೃತಿ, ಸಂಸ್ಕಾರ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ನಂತರ ಮೊದಲ ಬಾರಿಗೆ ಕೇರಳದ ತ್ರಿಶೂರ್ ನಲ್ಲಿರುವ ಐತಿಹಾಸಿಕ ಪ್ರಸಿದ್ಧ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದ್ದ ಮೋದಿ, ನಂತರ ಸಭೆಯಲ್ಲಿ ಮಾತನಾಡುತ್ತಿದ್ದರು.

ದೇವಾಲಯದಲ್ಲಿ ಮೋದಿ ಅವರಿಗೆ ಕಮಲದಿಂದಲೇ ತುಲಾಭಾರ ಮಾಡಿದ್ದು ವಿಶೇಷವಾಗಿತ್ತು. ಕೇರಳದಲ್ಲಿ ಬಿಜೆಪಿ ಯಾವುದೇ ಕ್ಷೇತ್ರದಲ್ಲಿ ಜಯಗಳಿಸದೆ ಇದ್ದರೂ ಇಲ್ಲಿಗೆ ನಾವು ಭೇಟಿ ನೀಡಿದ್ದೇವೆ. ಏಕೆಂದರೆ ಅದು ನಮ್ಮ ಸಂಸ್ಕೃತಿ, ಸಂಸ್ಕಾರ ಎಂದು ಮೋದಿ ಹೇಳಿದರು. ಕೇರಳದ ಜನರಿಗೆ ಕೃತಜ್ಞತೆ ಸಲ್ಲಿಸಿದ ಮೋದಿ, ಆಯುಷ್ಮಾನ್ ಭಾರತ ಯೋಜನೆಯನ್ನು ಒಪ್ಪಿಕೊಳ್ಳಲು ಕೇರಳ ಸರ್ಕಾರ ಸಿದ್ಧವಿಲ್ಲ. ಆದರೆ ನಾನಿಂದು ಸಾರ್ವಜನಿಕವಾಗಿ ನಿಮ್ಮಲ್ಲಿ ಮನವಿ ಮಾಡುತ್ತೇನೆ, ಈ ಯೋಜನೆಯ ಫಲಾನುಭವಿಗಳಾಗಿ ಎಂದು ಮೋದಿ ಮನವಿ ಮಾಡಿದರು.

ನರೇಂದ್ರ ಮೋದಿ ದ್ವೇಷದ ವಿಷ ಬಿತ್ತುತ್ತಿದ್ದಾರೆ : ವಯನಾಡಿನಲ್ಲಿ ಸಿಟ್ಟು ಕಾರಿದ ರಾಹುಲ್ ಗಾಂಧಿ ನರೇಂದ್ರ ಮೋದಿ ದ್ವೇಷದ ವಿಷ ಬಿತ್ತುತ್ತಿದ್ದಾರೆ : ವಯನಾಡಿನಲ್ಲಿ ಸಿಟ್ಟು ಕಾರಿದ ರಾಹುಲ್ ಗಾಂಧಿ

ಇತ್ತ ಕೇರಳದ ವಯನಾಡಿಗೆ ಬೇಟಿ ನೀಡಿದ್ದ ಕ್ಷೇತ್ರದ ಸಂಸದ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಂದಿನಂತೆಯೇ ನರೇಂದ್ರ ಮೊದಿ ಅವರ ವಿರುದ್ಧ ಕಿಡಿಕಾರಿ, 'ಅವರು ದ್ವೇಷದ ವಿಷಬೀಜ ಬಿತ್ತುತ್ತಿದ್ದಾರೆ' ಎಂದರು. ಆದರೆ ವಿಪಕ್ಷಗಳ ಮೇಲಾಗಲೀ, ರಾಜಕೀಯ ವಿರೋಧಿಗಳ ಬಗ್ಗೆಯಾಗಲೀ ಮಾತನಾಡದೆ, ನರೇಂದ್ರ ಮೋದಿ ಅವರು ಕೇರಳದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಅವರ ಮಾತಿನ ಮುಖ್ಯಾಂಶ ಇಲ್ಲಿದೆ.

ವಾರಣಾಸಿಯಂತೆ ಕೇರಳವೂ ನನ್ನದೇ!

ಚುನಾವಣೆಯ ಸಮಯವೇ ಬೇರೆ, ಉಳಿದ ಸಮಯವೇ ಬೇರೆ. ಚುನಾವಣೆಯಲ್ಲಿ ಜನರು ತಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಬಹುದು. ಆದರೆ ಚುನಾವಣೆಯ ನಂತರ 130 ಕೋಟಿ ಜನರ ಜವಾಬ್ದಾರಿಯೂ ಸರ್ಕಾರದ ಮೇಲಿರುತ್ತದೆ. ಅಂದರೆ ನಮ್ಮ ಮೇಲೆ ಕೇವಲ ನಮ್ಮನ್ನು ಗೆಲ್ಲಿಸಿದವರ ಜವಾಬ್ದಾರಿ ಮಾತ್ರವಿಲ್ಲ. ನಮ್ಮನ್ನು ಗೆಲ್ಲಿಸದವರೂ ನಮ್ಮವರೇ. ವಾರಣಾಸಿಯಂತೆಯೇ ಕೇರಳವೂ ನನ್ನದೇ ಎಂದು ನಾನು ಭಾವಿಸಿದ್ದೇನೆ - ನರೇಂದ್ರ ಮೋದಿ

ದೇಶದೆಲ್ಲೆಡೆ ಕಮಲ ಅರಳಿಸಿದ ಮೋದಿಗೆ ತಾವರೆಯ ತುಲಾಭಾರದೇಶದೆಲ್ಲೆಡೆ ಕಮಲ ಅರಳಿಸಿದ ಮೋದಿಗೆ ತಾವರೆಯ ತುಲಾಭಾರ

ಬಿಜೆಪಿ ಕಾರ್ಯಕರ್ತರಿಗೆ ಶ್ಲಾಘನೆ

ಬಿಜೆಪಿ ಕಾರ್ಯಕರ್ತರಿಗೆ ಶ್ಲಾಘನೆ

"ಬಿಜೆಪಿ ಕಾರ್ಯಕರ್ರು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನಸೇವೆ ಮಅಡುವುದಿಲ್ಲ. ಅವರು 365 ದಿನಗಳ ಕಾಲ ಜನರ ಸೇವೆಯಲ್ಲಿರುತ್ತಾರೆ. ನಾವು ದೇಶ ಕಟ್ಟುವುದನ್ನು ಕಾಯಕ ಎಂದುಕೊಂಡಿದ್ದೇವೆ. ಅದನ್ನು ತಪ್ಪಸ್ಸೆಂದುಕೊಂಡು ವಿಶ್ವದಲ್ಲಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸುತ್ತೇವೆ" -ನರೇಂದ್ರ ಮೋದಿ

ನಾವು ಜನ ಸೇವಕರು

ನಾವು ಜನ ಸೇವಕರು

"ಜನರು ಐದು ವರ್ಷಗಳಿಗಾಗಿ ತಮ್ಮ ಜನಪ್ರತಿನಿಧಿಯನ್ನು ಆರಿಸಬಹುದು. ಆದರೆ ನಾವು(ಬಿಜೆಪಿ ಕಾರ್ಯಕರ್ತರು) ನಮ್ಮ ಜೀವನದ ಕೊನೆಯವರೆಗೂ ಜನ ಸೇವಕರಾಗಿಯೇ ಇರುತ್ತೇವೆ"- ನರೇಂದ್ರ ಮೋದಿ

ಮೀನುಗಾರರಿಗಾಗಿ ಪ್ರತ್ಯೇಕ ಇಲಾಖೆ

ಮೀನುಗಾರರಿಗಾಗಿ ಪ್ರತ್ಯೇಕ ಇಲಾಖೆ

ಭಾರತೀಯ ಸರ್ಕಾರ ಈ ಬಾರಿ ಮೀನುಗಾರರು, ಜಾನುವಾರು ಸಾಕಾಣಿಕೆಗಾಗಿ ಪ್ರತ್ಯೇಕ ಇಲಾಖೆಯನ್ನೇ ಆರಂಭಿಸಿದೆ. ಕರಾವಳಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬೆಳೆಸುವುದು ನಮ್ಮ ಉದ್ದೇಶ. ಅಷ್ಟೇ ಅಲ್ಲ, ದೇಶದಾದ್ಯಂತ ಜಾನುವಾರುಗಳಿಗೆ ಚುಚ್ಚುಮದ್ದು ನೀಡುವ ಅಭಿಯಾನವನ್ನೂ ಆರಂಭಿಸುತ್ತೇವೆ- ನರೇಂದ್ರ ಮೋದಿ

ನಾವು ನಿಮ್ಮೊಂದಿಗಿದ್ದೇವೆ

ನಾವು ನಿಮ್ಮೊಂದಿಗಿದ್ದೇವೆ

"ಭಾರತ ಸರ್ಕಾರ ನಿಮ್ಮೊಂದಿಗಿದೆ ಎಂದು ನಾನು ನಿಮಗೆ ಅಭಯ ನೀಡಬಲ್ಲೆ. ನಿಪಾಹ್ ವೈರಸ್ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ವತಿಯಿಂದ ನಾವು ನೀಡುತ್ತೇವೆ"- ನರೇಂದ್ರ ಮೋದಿ

English summary
PM Narendra Modi is addressing people of Kerala on saturday after his visit to historical Guruvayur temple. He tells, We believe that elections have a place of their own but after elections the more important responsibility is towards the 130 crore citizens. Those who made us win our ours, those who did not make us win are also ours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X