ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶುವೈದ್ಯೆ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಕೇರಳದಲ್ಲಿ ಶುರುವಾಗಿದೆ "ಪಿಂಕ್ ರೂಂ"

By Lekhaka
|
Google Oneindia Kannada News

ಕೇರಳ, ಡಿಸೆಂಬರ್ 3: ಒಂದಾದ ಮೇಲೊಂದರಂತೆ ವರದಿಯಾಗುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಗಳು ಮಹಿಳೆಯರಿಗೆ ಎಷ್ಟು ಭದ್ರತೆ ಇಲ್ಲಿದೆ ಎಂಬ ಪ್ರಶ್ನೆಯನ್ನು ಮುಂದಿಡುತ್ತಿವೆ. ಪ್ರತಿ ಪ್ರಕರಣ ನಡೆದಾಗಲೂ ಒಮ್ಮೆ ಎದುರಾಗಿ ಹಾಗೇ ಕರಗಿಹೋಗುವ ಈ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕೆಂದು ಕೇರಳದಲ್ಲಿ ಹೊಸ ಯೋಜನೆಯೊಂದು ರೂಪುಗೊಂಡಿದೆ.

ಮಹಿಳಾ ಪ್ರವಾಸಿಗರಿಗೆ ಅಥವಾ ಕೆಲಸದ ನಿಮಿತ್ತ ಬೇರೆ ಊರುಗಳಿಂದ ಕೇರಳಕ್ಕೆ ಬರುವ ಮಹಿಳೆಯರಿಗೆಂದೇ ಇಲ್ಲಿ ಸೆಲೆಕ್ಟ್ ರೂಂ ಎಂಬ ವಸತಿ ಆಯ್ಕೆಯನ್ನು ಮುಂದಿಟ್ಟಿದ್ದು, ಪಿಂಕ್ ರೂಂ ಎಂಬ ಸರ್ವೀಸ್ ಅಪಾರ್ಟ್ ಮೆಂಟ್ ತಲೆಎತ್ತುವ ಹಾದಿಯಲ್ಲಿದೆ.

 ಏನಿದು ಪಿಂಕ್ ರೂಂ?

ಏನಿದು ಪಿಂಕ್ ರೂಂ?

ಮಹಿಳೆಯರು, ಅದರಲ್ಲೂ ಒಬ್ಬಂಟಿಯಾಗಿ ಪ್ರಯಾಣ ಮಾಡುವ ಮಹಿಳೆಯರಿಗೆ ತಂಗಲು ವ್ಯವಸ್ಥೆಯೇ ಸರಿ ಇರುವುದಿಲ್ಲ. ಅದಕ್ಕೆಂದು ಪ್ರತ್ಯೇಕ ಆಯ್ಕೆಯೂ ಇಲ್ಲ. ಇನ್ನು ಭದ್ರತೆಯ ವಿಷಯದಲ್ಲಂತೂ ಕೇಳುವುದೇ ಬೇಡ. ಆದ್ದರಿಂದಲೇ ಕೇರಳದಲ್ಲಿ ಮಹಿಳಾ ಪ್ರವಾಸಿಗರಿಗೆಂದೇ "ಪಿಂಕ್ ರೂಂ"ಗಳನ್ನು ಪರಿಚಯಿಸಲಾಗಿದೆ. ಮಹಿಳಾ ಪ್ರಯಾಣಿಕರ ಭದ್ರತೆಯನ್ನೇ ಆದ್ಯತೆಯಾಗಿಟ್ಟುಕೊಂಡು ಇದನ್ನು ರೂಪಿಸಲಾಗುತ್ತಿದೆ.

ಪೊಲೀಸರಿಂದ ಮಹಿಳೆಯರಿಗೆ ಉಚಿತವಾಗಿ ಪಿಕ್‌ಅಪ್-ಡ್ರಾಪ್ ಸೇವೆಪೊಲೀಸರಿಂದ ಮಹಿಳೆಯರಿಗೆ ಉಚಿತವಾಗಿ ಪಿಕ್‌ಅಪ್-ಡ್ರಾಪ್ ಸೇವೆ

 ಸ್ವಿಡ್ಜರ್ಲೆಂಡ್ ಮೂಲದ ಮಹಿಳೆಯ ಪರಿಕಲ್ಪನೆ

ಸ್ವಿಡ್ಜರ್ಲೆಂಡ್ ಮೂಲದ ಮಹಿಳೆಯ ಪರಿಕಲ್ಪನೆ

ಸ್ವಿಟ್ಜರ್ಲೆಂಡ್ ನಿಂದ ಬಂದು ಕೇರಳದ ತಿರುವನಂತಪುರಂನಲ್ಲಿ ನೆಲೆಯೂರಿರುವ ಕ್ರೈಸ್ಟ್ ಜಾನ್ಸನ್ ಈ ಒಂದು ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಸರ್ವೀಸ್ ಅಪಾರ್ಟ್ ಮೆಂಟ್ ಇದಾಗಿದ್ದು, ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಸಂಗತಿಯೇ ಈ ಒಂದು ಪರಿಕಲ್ಪನೆ ಪರಿಚಯಿಸಲು ಅವರಿಗೆ ಕಾರಣವಾಗಿದ್ದು. "ಈ ಪಿಂಕ್ ರೂಂನಲ್ಲಿ ಮಹಿಳೆಯರ ಭದ್ರತೆಗೆ ಆದ್ಯತೆ ನೀಡಲಾಗಿದೆ. ಅವರು ಆರಾಮಾಗಿ ನಿಶ್ಚಿಂತೆಯಿಂದ, ಸುರಕ್ಷಿತವಾಗಿ ಇರುವಂತೆ ಅವರಿಗೆ ಅನ್ನಿಸುವಂಥ ಸೇವೆ ನೀಡುವುದು ಇದರ ಉದ್ದೇಶ" ಎಂದು ತಿಳಿಸಿದ್ದಾರೆ ಕ್ರೈಸ್ಟ್ ಜಾನ್ಸನ್.

 ಐಟಿ ಕಂಪನಿ ಮಹಿಳಾ ಉದ್ಯೋಗಿಗಳಿಗೆ ಅನುಕೂಲ

ಐಟಿ ಕಂಪನಿ ಮಹಿಳಾ ಉದ್ಯೋಗಿಗಳಿಗೆ ಅನುಕೂಲ

ಈ ಪರಿಕಲ್ಪನೆಯ ಸರ್ವೀಸ್ ಅಪಾರ್ಟ್ ಮೆಂಟ್ ಗಳಿಗೆ "ಪಿಂಕ್ ರೂಂ" ಎಂದು ಹೆಸರಿಡಲಾಗಿದೆ. ಮಹಿಳಾ ಸಬಲೀಕರಣದ ಉದ್ದೇಶವೂ ಈ ಯೋಜನೆಯಲ್ಲಿ ಅಡಗಿದೆ. ಮಹಿಳಾ ಪ್ರಯಾಣಿಕರಿಗಷ್ಟೇ ಅಲ್ಲದೇ, ಬೇರೆ ಊರಿನಿಂದ ಒಬ್ಬರೇ ಬಂದು ತಂಗುವವರಿಗೂ ಈ ಸೇವೆ ಲಭ್ಯವಿದೆ. ಅಕುಲಂ ಟೂರಿಸ್ಟ್ ವಿಲೇಜ್ ನಲ್ಲಿ ಸದ್ಯಕ್ಕೆ ಇದನ್ನು ಆರಂಭಿಸಲಾಗಿದೆ. ಐಟಿ ಪಾರ್ಕ್ ಗಳಿಗೆ ಹತ್ತಿರವಿರುವಂತೆ ಈ ಯೋಜನೆ ರೂಪಿತಗೊಂಡಿದೆ.

ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಹಿಳಾ ಸುರಕ್ಷತೆ ಬಗ್ಗೆ ಎರಡೇ ಪ್ರಶ್ನೆ!ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಹಿಳಾ ಸುರಕ್ಷತೆ ಬಗ್ಗೆ ಎರಡೇ ಪ್ರಶ್ನೆ!

 ಎಲ್ಲರೂ ಮಹಿಳಾ ಸಿಬ್ಬಂದಿ

ಎಲ್ಲರೂ ಮಹಿಳಾ ಸಿಬ್ಬಂದಿ

ಮಹಿಳೆಯರ ಭದ್ರತೆಯೇ ಇಲ್ಲಿ ಆದ್ಯತೆಯಾಗಿರುವುದರಿಂದ ಇಡೀ ಪಿಂಕ್ ರೂಂನಲ್ಲಿ ಮಹಿಳಾ ಸಿಬ್ಬಂದಿಯಷ್ಟೇ ಇರುತ್ತಾರೆ. ಎಲ್ಲಾ ಕಡೆ ಸಿಸಿ ಟಿವಿ, ದಿನದ 24 ಗಂಟೆಯೂ ಎಲ್ಲಾ ಸೇವೆಗಳು, ಆಹಾರ, ಲಾಂಡ್ರಿ ಇನ್ನಿತರ ಸೇವೆಗಳು ಅಪಾರ್ಟ್ ಮೆಂಟ್ ನಲ್ಲೇ ಲಭ್ಯವಿರುತ್ತದೆ. ತಾತ್ಕಾಲಿಕವಾಗಿ ನೆಲೆ ಬಯಸುವವರಿಗೂ ಈ ಅಪಾರ್ಟ್ ಮೆಂಟ್ ಅನುಕೂಲಕ್ಕೆ ಬರುತ್ತದೆ.

English summary
'Pink Rooms' introduced in kerala Exclusively For Women Travellers Ensuring Their Security
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X