ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೋವಿಡ್ ರೋಗಿಗಳ ಸಂಪರ್ಕ ಪತ್ತೆಗೆ ಕರೆ ವಿವರ ಸಂಗ್ರಹ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 13: ಕೊರೊನಾ ವೈರಸ್ ಸೋಂಕಿತರನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಿ ಸಂಪರ್ಕಿಸಲು ಕೇರಳ ಪೊಲೀಸರು ವಿನೂತನ ಮತ್ತು ವೈಜ್ಞಾನಿಕ ಮಾದರಿಯನ್ನು ಅಳವಡಿಸುವ ಭಾಗವಾಗಿ ಕೋವಿಡ್ 19 ರೋಗಿಗಳ ಫೋನ್ ಕರೆ ವಿವರ ದಾಖಲೆ (ಸಿಡಿಆರ್) ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಈ ಫೋನ್ ಕರೆಗಳ ದಾಖಲೆ ಸಂಗ್ರಹವನ್ನು ಬೇರೆ ಯಾವುದೇ ಉದ್ದೇಶಗಳಿಗೆ ಬಳಸಲಾಗುತ್ತಿಲ್ಲ. ಹಾಗೆಯೇ ಕೋವಿಡ್ ರೋಗಿಗಳ ಖಾಸಗಿತನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಪ್ರತಿ ಮಂಗಳವಾರ ಸಂಪೂರ್ಣ ಲಾಕ್ ಡೌನ್; ಸಿಎಂ ಘೋಷಣೆಪ್ರತಿ ಮಂಗಳವಾರ ಸಂಪೂರ್ಣ ಲಾಕ್ ಡೌನ್; ಸಿಎಂ ಘೋಷಣೆ

'ಕೋವಿಡ್ 19 ರೋಗಿಗಳ ಕರೆ ವಿವರಗಳ ದಾಖಲೆಗಳನ್ನು ಸಂಗ್ರಹಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಈ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳಲು ಕಾನೂನು ಜಾರಿ ಸಂಸ್ಥೆಗಳಿಗೆ ಅನುಮತಿ ಇದೆ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಿಡಿಆರ್‌ಗಳ ಮೂಲಕ ರೋಗಿಗಳ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Pinarayi Vijayan said Kerala Cops Using CDRs Of COVID Patients For Contact Tracing

ಈ ಮಾಹಿತಿಗಳನ್ನು ಬೇರೆ ಯಾರಿಗೂ ರವಾನಿಸಲು ಸಂಗ್ರಹಿಸುತ್ತಿಲ್ಲ. ಹಾಗೆಯೇ ಇದನ್ನು ಬೇರೆ ಯಾವುದೋ ಉದ್ದೇಶಕ್ಕೆ ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ರೋಗಿಗಳ ಖಾಸಗಿತನಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ಶೀಘ್ರ ಪತ್ತೆಗೆ ಆದ್ಯತೆ ನೀಡಲು ಸಚಿವ ಆರ್.ಅಶೋಕ್ ಸೂಚನೆಕೊರೊನಾ ಸೋಂಕು ಶೀಘ್ರ ಪತ್ತೆಗೆ ಆದ್ಯತೆ ನೀಡಲು ಸಚಿವ ಆರ್.ಅಶೋಕ್ ಸೂಚನೆ

ಕೆಲವು ತಿಂಗಳಿನಿಂದ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ. ಕರೆ ಜಾಡು ಹಿಡಿಯುವ ಈ ಉಪಾಯ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಜತೆಗೆ ಸಮುದಾಯ ಪೊಲೀಸ್ ಅಧಿಕಾರಿಗಳಿಗೆ ಆನ್‌ಲೈನ್ ನಡವಳಿಕೆಯ ತರಬೇತಿ ನೀಡಲಾಗುತ್ತಿದೆ ಎಂದಿದ್ದಾರೆ.

English summary
Kerala cops using Call Detail Records of COVID patients for contact tracing, Chief Minister Pinarayi Vijayan said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X