ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಗೆ ಭಕ್ತರ ಆಗಮನ; ಉಚಿತ ಆಹಾರ ವ್ಯವಸ್ಥೆ

|
Google Oneindia Kannada News

ಶಬರಿಮಲೆ, ನವೆಂಬರ್ 24 : ಕೋವಿಡ್ ಭೀತಿಯ ನಡುವೆಯೇ ಕೇರಳದ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದೆ. ಭಕ್ತರು ಆಗಮಿಸುತ್ತಿದ್ದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಶಬರಿಮಲೆಯಲ್ಲಿ ಭಕ್ತರ ಭೇಟಿಗೆ ಅವಕಾಶ ನೀಡಿ ಒಂದು ವಾರ ಕಳೆದಿದೆ. ಶನಿವಾರ 2000 ಸಾವಿರ ಭಕ್ತರು ಅಯ್ಯಪ್ಪಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಈ ವರ್ಷದಲ್ಲಿ ಇಷ್ಟು ಭಕ್ತರು ಒಂದು ದಿನ ಭೇಟಿ ನೀಡಿದ್ದು ಇದೇ ಮೊದಲು.

ಶಬರಿಮಲೆ: 3 ಲಕ್ಷದಿಂದ 9 ಸಾವಿರಕ್ಕೆ ಇಳಿದ ಭಕ್ತರ ಸಂಖ್ಯೆಶಬರಿಮಲೆ: 3 ಲಕ್ಷದಿಂದ 9 ಸಾವಿರಕ್ಕೆ ಇಳಿದ ಭಕ್ತರ ಸಂಖ್ಯೆ

ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ದೇವಾಲಯದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಲು 351 ಬಾಕ್ಸ್‌ಗಳನ್ನು ಹಾಕಲಾಗಿದೆ. ಭಕ್ತರು ಕೈ ಮತ್ತು ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

450 ರೂ. ಕೊಟ್ಟರೆ ಮನೆ ಬಾಗಿಲಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ 450 ರೂ. ಕೊಟ್ಟರೆ ಮನೆ ಬಾಗಿಲಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ

Pilgrim Season In Sabarimala TDB Distributing Free Meals

ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸನ್ನಿಧಾನ, ಪಂಪಾ ಮತ್ತು ನಿಲಕಲ್‌ನಲ್ಲಿ ಭಕ್ತರಿಗಾಗಿ ಉಚಿತ ಆಹಾರದ ವ್ಯವಸ್ಥೆ ಮಾಡಿದೆ. ಸನ್ನಿಧಾನದಲ್ಲಿ ಬೆಳಗ್ಗೆ 5.30ರಿಂದ ರಾತ್ರಿ 9ರ ತನಕ ಆಹಾರ ವಿತರಣೆ ಮಾಡಲಾಗುತ್ತದೆ.

ಶಬರಿಮಲೆ ಭಕ್ತರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ನಿರ್ಲಕ್ಷ್ಯ: ಆರೋಪಶಬರಿಮಲೆ ಭಕ್ತರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ನಿರ್ಲಕ್ಷ್ಯ: ಆರೋಪ

ಸನ್ನಿಧಾನದ ಬಳಿ ಇರುವ ಅನ್ನದಾನ ಮಂಟಪದಲ್ಲಿ 40 ಸಿಬ್ಬಂದಿಗಳು ಆಹಾರ ತಯಾರಿಕೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಟಿಡಿಬಿಯ ಸಿಬ್ಬಂದಿ, ಗುತ್ತಿಗೆ ನೌಕರರರು ಸೇರಿದ್ದಾರೆ. ಆಹಾರ ವಿತರಣೆ ಸಮಯದಲ್ಲಿಯೂ ಸಾಮಾಜಿಕ ಅಂತರ ಕಾಪಾಡಬೇಕಿದೆ.

ಪಂಪಾದಲ್ಲಿ ಬೆಳಗ್ಗೆ ಸಂಜೆ 7 ರಿಂದ 10ರ ತನಕ ಆಹಾರ ವಿತರಣೆ ನಡೆಯಲಿದೆ. 20 ಸಿಬ್ಬಂದಿಗಳು ಆಹಾರ ತಯಾರು ಮಾಡುತ್ತಿದ್ದಾರೆ. ನಿಲಕಲ್‌ನಲ್ಲಿ 15 ಸಿಬ್ಬಂದಿಗಳು ಆಹಾರವನ್ನು ತಯಾರಿಸಿ ಭಕ್ತರಿಗೆ ವಿತರಣೆ ಮಾಡುತ್ತಿದ್ದಾರೆ.

Recommended Video

Mohammed Siraj ಅವರ ತಂದೆಗೆ ಈ ಸರಣಿ ಅರ್ಪಣೆಯಂತೆ | Oneindia Kannada

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ 6 ವಿವಿಧ ಸ್ಥಳಗಳಲ್ಲಿ 6 ಭಾಷೆಗಳಲ್ಲಿ ಭಕ್ತರಿಗೆ ಸೂಚನೆ ನೀಡಲು ಫಲಕಗಳನ್ನು ಆಳವಡಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಹೇಗೆ ಪಾಲನೆ ಮಾಡಬೇಕು? ಎಂದು ಮಾಹಿತಿ ನೀಡಲಾಗಿದೆ

English summary
Annual pilgrim season took off at Sabarimala temple, Kerala. Travancore Devaswom Board (TDB) is distributing free meals to the pilgrims at three place. Seats for devotees have been arranged in line with the COVID-19 protocol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X