ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಹಿಂದಿ ಪ್ರಚಾರ, ಕೇರಳದಲ್ಲಿ ಕನ್ನಡ ಬಳಕೆ: ಬಿಜೆಪಿ ವಿರುದ್ಧ ಟೀಕೆ

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 22: ಕೇರಳದಲ್ಲಿ ಶೀಘ್ರದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷ ಸಂಘಟನೆ ಹಾಗೂ ಪ್ರಚಾರದ ಕಾರ್ಯ ಚುರುಕುಗೊಳಿಸುತ್ತಿದೆ. ಈ ಸಂಬಂಧ ಕೇರಳದಲ್ಲಿ ಬಿಜೆಪಿ 'ವಿಜಯಯಾತ್ರೆ' ಆಯೋಜಿಸಿದ್ದು, ಅದಕ್ಕೆ ಭಾನುವಾರ ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದ್ದರು.

ಆದರೆ, ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸಲು ಕೇರಳ ಬಿಜೆಪಿ ಟ್ವಿಟ್ಟರ್ ಖಾತೆ ಮಾಡಿರುವ ಟ್ವೀಟ್ ಕೇರಳಿಗರ ಆಕ್ರೋಶಕ್ಕೆ ಕಾರಣವಾಗಿದೆ. 'ಕೇರಳ ವಿಜಯ ಯಾತ್ರೆಯ ಉದ್ಘಾಟನೆಗಾಗಿ ಸಪ್ತಭಾಷಾ ಸಂಗಮವಾದ ಕಾಸರಗೋಡಿಗೆ ಆಗಮಿಸಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಗೆ ಹಾರ್ದಿಕ ಸ್ವಾಗತ' ಎಂದು ಬಿಜೆಪಿ ಕೇರಳ ಘಟಕ ಟ್ವೀಟ್ ಮಾಡಿತ್ತು. ವಿಶೇಷವೆಂದರೆ ಈ ಸ್ವಾಗತ ಸಂಪೂರ್ಣವಾಗಿ ಕನ್ನಡದಲ್ಲಿ ಇರುವುದು.

ಅಯೋಧ್ಯೆ; ಕರ್ನಾಟಕದ ಯಾತ್ರಿನಿವಾಸ ನಿರ್ಮಾಣಕ್ಕೆ ಭೂಮಿ ಭರವಸೆ ಅಯೋಧ್ಯೆ; ಕರ್ನಾಟಕದ ಯಾತ್ರಿನಿವಾಸ ನಿರ್ಮಾಣಕ್ಕೆ ಭೂಮಿ ಭರವಸೆ

ಉತ್ತರ ಭಾರತದಲ್ಲಿನ ಐಟಿ ಘಟಕವು ದಕ್ಷಿಣ ಭಾರತದ ಟ್ವಿಟ್ಟರ್ ಖಾತೆ ನಿಭಾಯಿಸಿದರೆ ಏನಾಗುತ್ತದೆಯೆಂದು ಇದಕ್ಕೆ ಉದಾಹರಣೆ. ಯೋಗಿಯನ್ನು ಕೇರಳಕ್ಕೆ ಆಹ್ವಾನಿಸಲು ಬಿಜೆಪಿಯು ಕನ್ನಡ ಅಕ್ಷರಗಳನ್ನು ಬಳಸಿದೆ ಎಂದು ಅನೇಕರು ಟೀಕಿಸಿದ್ದಾರೆ. ಮುಂದೆ ಓದಿ.

ಕೇರಳದ ಭಾಷೆ ಮಲಯಾಳಂ

ಕೇರಳದ ಭಾಷೆ ಮಲಯಾಳಂ

ಕೇರಳದ ರಾಜ್ಯ ಭಾಷೆ ಮಲಯಾಳಂ ಹೊರತು ಕನ್ನಡವಲ್ಲ ಎಂದು ಕೇರಳದಲ್ಲಿನ ತನ್ನ ಘಟಕಕ್ಕೆ ಕೇಂದ್ರ ಬಿಜೆಪಿ ನಾಯಕತ್ವವು ಮಾಹಿತಿ ನೀಡಿ ತಿಳಿಹೇಳುತ್ತಾರೆ ಎಂದು ಭಾವಿಸೋಣ. ಒಂದು ರಾಜ್ಯದ ಭಾಷೆ ಯಾವುದು ಎಂದು ಗೊತ್ತಿಲ್ಲದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಲವರು ಕಿಡಿಕಾರಿದ್ದಾರೆ.

ಕೇರಳ: ಬಿಜೆಪಿಯಲ್ಲಿ ಪಿಟಿ ಉಷಾ ಓಟಕ್ಕೆ ಟ್ರ್ಯಾಕ್ ಸಿದ್ಧ!ಕೇರಳ: ಬಿಜೆಪಿಯಲ್ಲಿ ಪಿಟಿ ಉಷಾ ಓಟಕ್ಕೆ ಟ್ರ್ಯಾಕ್ ಸಿದ್ಧ!

ಕರ್ನಾಟಕದಲ್ಲಿ ಹಿಂದಿ...

ಕರ್ನಾಟಕದಲ್ಲಿ ಹಿಂದಿ...

ಬಿಜೆಪಿಯವರು ಕರ್ನಾಟಕದಲ್ಲಿ ಹಿಂದಿಯನ್ನು ಪ್ರಚಾರ ಮಾಡುತ್ತಾರೆ. ಕೇರಳದಲ್ಲಿ ಕನ್ನಡವನ್ನು ಪ್ರಚಾರ ಮಾಡುತ್ತಾರೆ. ವಾಹ್ ಮೋದಿ ಜಿ ವಾಹ್ ಎಂದು ಟ್ವಿಟ್ಟರ್ ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಇದು ಕೇರಳದಲ್ಲಿನ ಕನ್ನಡ ಭಾಷಿಕರನ್ನು ಸೆಳೆಯುವ ತಂತ್ರ ಎಂದು ಆರೋಪಿಸಲಾಗಿದೆ.

ಕಾಸರಗೋಡು ಕರ್ನಾಟಕದ್ದು

ಕಾಸರಗೋಡು ಕರ್ನಾಟಕದ್ದು

ಕಾಸರಗೋಡಿಗೆ ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸುವ ಪೋಸ್ಟರ್‌ಅನ್ನು ಕನ್ನಡದಲ್ಲಿ ಹಾಕಿರುವುದನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಅಲ್ಲಿ ಹೆಚ್ಚಾಗಿ ಕನ್ನಡ ಭಾಷಿಕರು ಇದ್ದಾರೆ. ಕಾಸರಗೋಡು ಕರ್ನಾಟಕಕ್ಕೆ ಸೇರಿದ್ದು ಎಂಬುದನ್ನು ಕೇಂದ್ರದ ನಾಯಕರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಪರ ಬಿಜೆಪಿ ಪರ "ಮೆಟ್ರೋ ಮ್ಯಾನ್" ಶ್ರೀಧರನ್ ಮೊದಲ ಮಾತು

ಮಲಯಾಳಂ ಕೂಡ ಇರಬೇಕಿತ್ತು

ಮಲಯಾಳಂ ಕೂಡ ಇರಬೇಕಿತ್ತು

ಕಾಸರಗೋಡಿನಲ್ಲಿ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಧಿಕೃತವಾಗಿ ಅದು ಕೇರಳಕ್ಕೆ ಸೇರಿದೆ. ಹೀಗಾಗಿ ಆ ಪೋಸ್ಟರ್ ಮಲಯಾಳಂನಲ್ಲಿಯೇ ಇರಬೇಕಿತ್ತು. ಕನ್ನಡ ಮಾತನಾಡುವವರನ್ನು ಸೆಳೆಯಲು ಅಲ್ಲಿ ಕನ್ನಡ ಬಳಸಬಹುದು. ಆದರೆ ಮಲಯಾಳಂ ಕೂಡ ಇರಬೇಕಿತ್ತು. ಕನ್ನಡಿಗನಾಗಿ ಇದನ್ನು ವಿರೋಧಿಸುತ್ತೇನೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಖಂಡಿಸಿದ್ದಾರೆ.

ರಾಜ್ಯ ಸರ್ಕಾರ ನಿದ್ರಿಸುತ್ತಿದೆ

ರಾಜ್ಯ ಸರ್ಕಾರ ನಿದ್ರಿಸುತ್ತಿದೆ

ಕಾಸರಗೋಡಿನಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, 'ಕೇರಳವನ್ನು ಲವ್ ಜಿಹಾದ್ ಇಸ್ಲಾಮಿಕ್ ರಾಜ್ಯವನ್ನಾಗಿ ಬದಲಿಸಲಿದೆ ಎಂದು 2009ರಲ್ಲಿ ಕೇರಳ ಹೈಕೋರ್ಟ್ ಹೇಳಿತ್ತು. ಅಷ್ಟಾಗಿಯೂ ರಾಜ್ಯ ಸರ್ಕಾರ ನಿದ್ರಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಕಾನೂನನ್ನು ತರಲು ಸೂಕ್ತ ಹೆಜ್ಜೆಗಳನ್ನು ಇರಿಸಲು ಸರ್ಕಾರ ವಿಫಲವಾಗಿದೆ' ಎಂದು ಆರೋಪಿಸಿದರು.

English summary
People of Kerala slams BJP for using Kannada poster to welcome Uttar Pradesh CM Yogi Adityanath for its Vijay Yatra in Kasargod, instead of Malayalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X