ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪರಂಬಿಕುಲಂ ಡ್ಯಾಂ ಗೇಟ್‌ ಸೋರಿಕೆ: ಕೇರಳದಲ್ಲಿ ಹೈ ಅಲರ್ಟ್‌

|
Google Oneindia Kannada News

ತಿರುವನಂತಪುರಂ, ಸೆ.21: ಕೇರಳದ ಪರಂಬಿಕುಲಂ ಡ್ಯಾಂನ ಮೂರು ಶಟರ್‌ಗಳ ಪೈಕಿ ಒಂದು ಗೇಟ್‌ಗೆ ಹಾನಿಯಾದ ಹಿನ್ನೆಲೆಯಲ್ಲಿ ಚಾಲಕುಡಿ ನದಿಗೆ ಬುಧವಾರ ನೀರಿನ ಹರಿವು ಹೆಚ್ಚಾಗಿದೆ. ಚಲಕುಡಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಅಪಾಯಕಾರಿ ಏರಿಕೆಯಾಗಿದ್ದು, ಹೈ ಅಲರ್ಟ್‌ ಘೋಷಿಸಲಾಗಿದೆ.

ಸೋರಿಕೆಯನ್ನು ಮುಚ್ಚಲು ತೀವ್ರ ಪ್ರಯತ್ನಗಳು ನಡೆಯುತ್ತಿದ್ದು, ಅಣೆಕಟ್ಟಿನ ಬಳಿ ನದಿಗಳ ದಡದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವವರನ್ನು ಸ್ಥಳಾಂತರಿಸಲಾಗಿದೆ.

ಕೇರಳ: ಹೆದ್ದಾರಿ ಅಗಲೀಕರಣಕ್ಕಾಗಿ ಮರ ಕತ್ತರಿಸಿದ್ದರಿಂದ ಪಕ್ಷಿಗಳ ಸಾವು- ಗುತ್ತಿಗೆದಾರರ ವಿರುದ್ಧ ಕೇಸ್ಕೇರಳ: ಹೆದ್ದಾರಿ ಅಗಲೀಕರಣಕ್ಕಾಗಿ ಮರ ಕತ್ತರಿಸಿದ್ದರಿಂದ ಪಕ್ಷಿಗಳ ಸಾವು- ಗುತ್ತಿಗೆದಾರರ ವಿರುದ್ಧ ಕೇಸ್

ಪೆರಿಂಗಲ್ಕುತ್ತು ಅಣೆಕಟ್ಟಿನ ಶೆಟರ್‌ಗಳನ್ನು ಒತ್ತಡ ತಗ್ಗಿಸಲು ತೆರೆಯಲಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರವು ಎಲ್ಲಾ ಸ್ಲೂಸ್ (sluice )ಗೇಟ್‌ಗಳನ್ನು ತೆರೆಯುವಂತೆ ನೆರೆಯ ತಮಿಳುನಾಡಿಗೆ ಮನವಿ ಮಾಡಿದೆ.

Parambikulam dam shutter damaged, High alert in Kerala

ಸಾಮಾನ್ಯವಾಗಿ ಒಂದೇ ಬಾರಿಗೆ 10 ಸೆಂಟಿಮೀಟರ್‌ಗಳಷ್ಟು ಎತ್ತರಕ್ಕೆ ಏರುವ ಶೆಟರ್ ಬುಧವಾರ ಬೆಳಗಿನ ಜಾವ 2 ಗಂಟೆ ವೇಳೆಗೆ 25 ಅಡಿ ಎತ್ತರಕ್ಕೆ ಸ್ವಯಂಚಾಲಿತವಾಗಿ ತೆರೆದುಕೊಂಡಿದೆ. ಪ್ರಸ್ತುತ ಪೆರಿಂಗಲ್ಕುತ್ತು ಅಣೆಕಟ್ಟಿಗೆ ಸುಮಾರು 20,000 ಕ್ಯೂಸೆಕ್ (ಸೆಕೆಂಡಿಗೆ ಒಂದು ಘನ ಅಡಿ) ನೀರು ಹರಿಯುತ್ತಿದೆ.

ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಪರಂಬಿಕುಲಂ ಅಣೆಕಟ್ಟು ಕೊಯಮತ್ತೂರು ನಗರದ ಪ್ರಮುಖ ನೀರಿನ ಮೂಲಗಳಲ್ಲಿ ಒಂದಾಗಿದೆ. ಅನಿರೀಕ್ಷಿತ ಘಟನೆಯಿಂದ ಪಾಲಕ್ಕಾಡ್ ಮತ್ತು ತ್ರಿಶೂರ್‌ನ ಎರಡು ಜಿಲ್ಲೆಗಳಲ್ಲಿ ಎಲ್ಲಾ ನದಿಗಳಲ್ಲಿ ಮೀನುಗಾರಿಕೆ ಮತ್ತು ಪ್ರವಾಸ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಗಾಬರಿಪಡುವ ಅಗತ್ಯವಿಲ್ಲ ಎಂದು ಚಲಕುಡಿ ಶಾಸಕ ಕೆ.ಸನೀಶ್ ಸಮರ್ಥಿಸಿಕೊಂಡಿದ್ದಾರೆ. ಆದರೆ ಅತ್ಯಂತ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳಿದರು. ಮಧ್ಯರಾತ್ರಿ 1 ಗಂಟೆ ವೇಳೆಗೆ ಬಿರುಕು ಬಿದ್ದಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಸಮೀಪದ ಎಲ್ಲ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಮಳೆಯ ಪ್ರಮಾಣ ತಗ್ಗಿದ್ದು, ಅಧಿಕಾರಿಗಳು ಶೇಖರಣೆಗೊಂಡ ನೀರನ್ನೇ ನಿಭಾಯಿಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂಬುದು ತಜ್ಞರ ಅಭಿಪ್ರಾಯ.

English summary
Parambikulam dam shutter damaged, dangerous rise in water level in the Chalakudy river: high alert in Kerala. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X