ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲಾ ನಗರಸಭೆ ಚುನಾವಣೆ: ಯುಡಿಎಫ್‌ಗೆ ಮಣ್ಣು ಮುಕ್ಕಿಸಿದ ಎಲ್‌ಡಿಎಫ್

|
Google Oneindia Kannada News

ಕೊಟ್ಟಾಯಂ, ಡಿಸೆಂಬರ್ 16: ಪ್ರತಿಷ್ಠಿತ ಪಾಲಾ ನಗರಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ ಯುಡಿಎಫ್‌ಗೆ ಮಣ್ಣು ಮುಕ್ಕಿಸಿದೆ.

ಎಲ್‌ಡಿಎಫ್ 9 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು ಅದರ ಫಲಿತಾಂಶ ಹೊರಬಂದಿದ್ದು, ಎಂಟು ಸ್ಥಾನಗಳಲ್ಲಿ ಎಲ್‌ಡಿಎಫ್ ಜಯಗಳಿಸಿದೆ,ಯುಡಿಎಫ್ ಕೇವಲ ಒಂದೇ ಒಂದು ಸ್ಥಾನವನ್ನು ಗಳಿಸುವಲ್ಲಿ ಸಫಲವಾಗಿದೆ.

ತಿರುವನಂತಪುರಂ ಮೇಯರ್ ಸೋಲಿಸಿದ ಬಿಜೆಪಿ ಅಭ್ಯರ್ಥಿತಿರುವನಂತಪುರಂ ಮೇಯರ್ ಸೋಲಿಸಿದ ಬಿಜೆಪಿ ಅಭ್ಯರ್ಥಿ

ಇನ್ನುಳಿದ ಸ್ಥಾನಗಳಲ್ಲೂ ಎಲ್‌ಡಿಎಫ್ ಮುನ್ನಡೆ ಕಾಯ್ದುಕೊಂಡಿದೆ, ಗೆಲ್ಲುವ ಸಾಧ್ಯತೆಯೂ ಹೆಚ್ಚಿದೆ. ಪಾಲಾ ನಗರಸಭೆಯಲ್ಲಿ ನಡೆದ ಆಸಕ್ತಿದಾಯಕ ಸ್ಪರ್ಧೆಯಲ್ಲಿ ಕೇರಳ ಕಾಂಗ್ರೆಸ್(ಜೋಸೆಫ್‌)ನ ಕುರಿಯಕೋಸ್ ಪವಡನ್ ಅವರು ಕೇರಳ ಕಾಂಗ್ರೆಸ್ (ಎಂ)ನ ಆಂಟೋ ಪಡಿಜರಕರ ವಿರುದ್ಧ 41 ಮತಗಳಿಂದ ಸೋತಿದ್ದಾರೆ.

 Pala Muncipality Result 2020: LDF Makes Huge Strides In Pala Municipality

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಎಲ್‌ಡಿಎಫ್ ಸೇರಿಕೊಂಡ ಜೋಸ್ ಕೆ ಮಣಿಗೆ ಈ ಫಲಿತಾಂಶ ನಿಟ್ಟುಸಿರುವ ಬಿಡುವಂತಾಗಿದೆ.

ಚುನಾವಣಾ ಪ್ರಚಾರದ ಸಮಯದಲ್ಲಿ ಮುಖ್ಯ ಚರ್ಚೆಯ ಅಂಶವೆಂದರೆ ಜೋಸ್ ಕೆ ಮಣಿ ಬಣವು ನಗರಸಭೆಯಲ್ಲಿ ಆಡಳಿತವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದು.

15 ವರ್ಷಗಳ ಕಾಲ ನಗರಸಭೆಯನ್ನು ನಿಯಂತ್ರಿಸುತ್ತಿದ್ದ ಕೇರಳ ಕಾಂಗ್ರೆಸ್ ಜೋಸೆಫ್ ಬಣವನ್ನು ದಾಟಿ ಮುಂದೆ ಬಂದಿದೆ.

ಜೋಸ್ ಕೆ ಮಣಿಯವರು ಎಲ್‌ಡಿಎಫ್‌ ಸೇರಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವವರು, ಪಕ್ಷದ ಕಾರ್ಯಕರ್ತರಿಂದ ಮಾತ್ರ ಮತವನ್ನು ಪಡೆಯುವಲ್ಲಿ ಯುಡಿಎಫ್ ಸಫಲವಾಗಿದೆ.

11 ಗಂಟೆಯ ಮತ ಎಣಿಕೆ ವರದಿ ಪ್ರಕಾರ ಎಲ್‌ಡಿಎಲ್ 941 ಪಂಚಾಯಿತಿಗಳಲ್ಲಿ 442ರಲ್ಲಿ ಮುನ್ನಡೆ ಸಾಧಿಸಿದೆ. ಯುಡಿಎಫ್ 344, ಎನ್‌ಡಿಎ 33 ಸ್ಥಾನಗಳಲ್ಲಿ ಮುಂದಿದೆ.

ಸ್ಥಳೀಯ ಸಂಸ್ಥೆ ಚುನಾವಣೆ: 941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.

English summary
Pala Muncipality Result 2020: The LDF has made significant strides in K M Mani's bastion Kottayam municipality on Jose K Mani's strength.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X