ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಚಕರಿಗೆ ಕೋವಿಡ್: ಪದ್ಮನಾಭೇಶ್ವರಿ ದೇವಸ್ಥಾನ ತಾತ್ಕಾಲಿಕ ಬಂದ್

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 9: ಕೇರಳದ ಪ್ರಸಿದ್ಧ ಪದ್ಮನಾಭೇಶ್ವರಿ ದೇವಸ್ಥಾನಕ್ಕೆ ಅಕ್ಟೋಬರ್ 15ರವರೆಗೂ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ದೇವಸ್ಥಾನದ 10 ಮಂದಿ ಅರ್ಚಕರು ಸೇರಿದಂತೆ 12 ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ದೇವಸ್ಥಾನದ ಪ್ರಧಾನ ಅರ್ಚಕ ಪೆರಿಯಾನಂಬಿ ಅವರಿಗೆ ಕೂಡ ಕೊರೊನಾ ವೈರಸ್ ಸೋಂಕು ತಗುಲಿದೆ. ಹೀಗಾಗಿ ತಂತ್ರಿ ಸರನನೆಲ್ಲೂರ್ ಸತೀಸನ್ ನಂಬೂದಿರಿಪ್ಪಡು ಅವರು ಪೂಜಾ ಕಾರ್ಯಗಳನ್ನು ನಡೆಸಲು ತೆರಳಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿ; ಆದರೆ ಭಕ್ತರಿಗೆ ನೋ ಎಂಟ್ರಿಹಾಸನಾಂಬೆ ದರ್ಶನಕ್ಕೆ ದಿನಾಂಕ ನಿಗದಿ; ಆದರೆ ಭಕ್ತರಿಗೆ ನೋ ಎಂಟ್ರಿ

'ತಂತ್ರಿಗಳು ದೈನಂದಿನ ಪೂಜೆಯನ್ನು ಮುಂದುವರಿಸಲಿದ್ದಾರೆ. ಆದರೆ ಭಕ್ತಾದಿಗಳಿಗೆ ದರ್ಶನ ಪ್ರವೇಶಕ್ಕೆ ಸಾವಕಾಶ ನೀಡುವುದಿಲ್ಲ' ಎಂದು ಪದ್ಮನಾಭೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರತೀಶನ್ ತಿಳಿಸಿದ್ದಾರೆ. ತಂತ್ರಿಗಳು ಸಾಮಾನ್ಯವಾಗಿ ವಿಶೇಷ ಸಮಾರಂಭಗಳಲ್ಲಿ ಮಾತ್ರವೇ ನೇತೃತ್ವ ವಹಿಸುತ್ತಾರೆ. ಆದರೆ ಪ್ರಮುಖ ಅರ್ಚಕರು ಸೇರಿದಂತೆ 10 ಮಂದಿ ಅರ್ಚಕರಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಅವರು ಪೂಜಾ ಕಾರ್ಯ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

 Padmanabhaswamy Temple In Thiruvananthapuram, Will Be Closed To Devotees Till Oct 15

ಇಬ್ಬರು ಪ್ರಧಾನ ಅರ್ಚಕರು, ಎಂಟು ಮಂದಿ ಸಹಾಯಕ ಅರ್ಚಕರು ಮತ್ತು ಒಬ್ಬರು ಕಾವಲುಗಾರರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಪದ್ಮನಾಭೇಶ್ವರಿ ದೇವಸ್ಥಾನದ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

17 ತಿಂಗಳ ನಂತರ ತೆರೆದ ಬಸವಣ್ಣನ ಐಕ್ಯ ಮಂಟಪ; ಭಕ್ತರಲ್ಲಿ ಸಂತಸ17 ತಿಂಗಳ ನಂತರ ತೆರೆದ ಬಸವಣ್ಣನ ಐಕ್ಯ ಮಂಟಪ; ಭಕ್ತರಲ್ಲಿ ಸಂತಸ

Recommended Video

RR Nagar ByElection : ಕುಮಾರಣ್ಣ ಸ್ಪಷ್ಟವಾಗಿ ಹೇಳಿದರು | Oneindia Kannada

ಕೊರೊನಾ ವೈರಸ್ ಲಾಕ್‌ಡೌನ್ ಘೋಷಣೆಯಾದ ಬಳಿಕ ಮುಚ್ಚಲಾಗಿದ್ದ ದೇವಸ್ಥಾನವನ್ನು ಆಗಸ್ಟ್ 26ರಂದು ಭಕ್ತರ ದರ್ಶನಕ್ಕೆ ತೆರೆಯಲಾಗಿತ್ತು.

English summary
Padmanabhaswamy Temple in Thiruvananthapuram, will be closed to devotees till Oct 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X