ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೇರಳದಲ್ಲಿ ಶೇ. 93 ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ': ವೀಣಾ ಜಾರ್ಜ್

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್‌ 08: "ಕೇರಳ ರಾಜ್ಯದಲ್ಲಿ ಸುಮಾರು ಶೇಕಡ 93.16 ಜನರಿಗೆ ಮೊದಲ ಡೋಸ್‌ ಕೊರೊನಾ ವೈರಸ್‌ ವಿರುದ್ಧದ ಲಸಿಕೆಯನ್ನು ನೀಡಲಾಗಿದೆ," ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

2,48,81,688 ಮಂದಿಗೆ ಮೊದಲ ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಇನ್ನು ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಶೇಕಡ 43.14 ಮಂದಿಗೆ ನೀಡಲಾಗಿದೆ. ಒಂದು ಡೋಸ್‌ ಹಾಗೂ ಎರಡೂ ಡೋಸ್‌ ಲಸಿಕೆ ಪಡೆದವರನ್ನು ಸೇರಿ ಈವರೆಗೆ ಒಟ್ಟು 3,64,04,946 ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಕೋವಿಡ್ ನಿಯಮ ಜಾರಿ ಮಾಡಿದ ಕೇರಳ ಸರ್ಕಾರಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಕೋವಿಡ್ ನಿಯಮ ಜಾರಿ ಮಾಡಿದ ಕೇರಳ ಸರ್ಕಾರ

ಈ ನಡುವೆ ಒಟ್ಟು ಹತ್ತು ಲಕ್ಷದಷ್ಟು ಜನರು ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ಇವರಿಗೆ ಮೂರು ತಿಂಗಳುಗಳ ನಂತರ ಕೋವಿಡ್‌ ಲಸಿಕೆಯನ್ನು ನೀಡಲಾಗುತ್ತದೆ. ಈ ನಡುವೆ ಒಟ್ಟು ಎಂಟು ಲಕ್ಷ ಮಂದಿಗೆ ಮಾತ್ರ ಮೊದಲ ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡಲು ಇನ್ನು ಬಾಕಿ ಉಳಿದಿದೆ.

 Over 93 percent of population in Kerala jabbed with first dose of Covid vaccine, Says Veena George

ಇನ್ನು ಈ ಸಂದರ್ಭದಲ್ಲಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, "ಯಾರು ಈವರೆಗೆ ಕೋವಿಡ್‌ ಲಸಿಕೆಯನ್ನು ಪಡೆದಿಲ್ಲ, ಅವರು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಳ್ಳಿ," ಎಂದು ಮನವಿ ಮಾಡಿದ್ದಾರೆ. "ಯಾರು ಕೋವಿಡ್‌ ಲಸಿಕೆಯನ್ನು ಈವೆರೆಗೂ ಪಡೆದಿಲ್ಲ, ಅವರು ಕೂಡಲೇ ಕೋವಿನ್‌ ಆಪ್‌ ಮೂಲಕ ಕೋವಿಡ್‌ ಲಸಿಕೆಗಾಗಿ ರಿಜಿಸ್ಟರ್‌ ಮಾಡಿಕೊಳ್ಳಿ ಅಥವಾ ತಮ್ಮ ಸಮೀಪದ ಕೋವಿಡ್‌ ಲಸಿಕಾ ಕೇಂದ್ರದಲ್ಲಿ ನೇರವಾಗಿ ಹೋಗಿ ಲಸಿಕೆಯನ್ನು ಪಡೆದುಕೊಳ್ಳಿ," ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಕೇರಳದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಶೇಕಡ 97 ರಷ್ಟು ಜನರು ಮೊದಲ ಡೋಸ್‌ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಹಾಗೆಯೇ ಶೇಕಡ 61 ರಷ್ಟು ಮಂದಿ ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಈ ನಡುವೆ ಕೇರಳದಲ್ಲಿ ನೂರು ಶೇಕಡ ಕೋವಿಡ್‌ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್‌ ಕೋವಿಡ್‌ ಲಸಿಕೆಯನ್ನು ಹಾಕಿಸಿದ್ದಾರೆ. ಇನ್ನು ಶೇಕಡ 90 ರಷ್ಟು ಮಂದಿ ಕೋವಿಡ್‌ ವಾರಿಯರ್‌ಗಳು ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದು, ಇನ್ನು ಶೇಕಡ ಹತ್ತರಷ್ಟು ಕೋವಿಡ್‌ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆಯುವುದು ಬಾಕಿ ಉಳಿದಿದೆ.

ಇನ್ನೂ 30 ಜಿಲ್ಲೆಗಳಲ್ಲಿ ತಗ್ಗಿಲ್ಲ ಕೋವಿಡ್ ಪಾಸಿಟಿವಿಟಿ ದರ; ವರದಿಇನ್ನೂ 30 ಜಿಲ್ಲೆಗಳಲ್ಲಿ ತಗ್ಗಿಲ್ಲ ಕೋವಿಡ್ ಪಾಸಿಟಿವಿಟಿ ದರ; ವರದಿ

18 ರಿಂದ 44 ವರ್ಷದ ವಯಸ್ಸಿನ ಲಸಿಕೆ ಫಲಾನುಭವಿಗಳ ಪೈಕಿ ಶೇಕಡ 80 ರಷ್ಟು ಮಂದಿ ಮೊದಲ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. 18 ಶೇಕಡದಷ್ಟು ಮಂದಿ ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅಂದರೆ ಇನ್ನೂ ಕೂಡಾ ಶೇಕಡ 82 ರಷ್ಟು 18 ರಿಂದ 44 ವರ್ಷದ ವಯಸ್ಸಿನ ಮಂದಿ ಕೋವಿಡ್‌ನ ಎರಡನೇ ಡೋಸ್‌ ಲಸಿಕೆಯನ್ನು ಹಾಕಿಸಿಕೊಳ್ಳಬೇಕಾಗಿದೆ.

ಈ ನಡುವೆ ಕೇರಳದಲ್ಲಿ ಪುರುಷರಿಗಿಂತ ಅಧಿಕವಾಗಿ ಮಹಿಳೆಯರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಮಹಿಳೆಯರು 1,88,71,205 ಡೋಸ್‌ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದು ಪುರುಷರು 1,75,24,970 ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದಿದ್ದಾರೆ.

ಇನ್ನು 1698 ಲಸಿಕಾ ಕೇಂದ್ರಗಳು ಕೇರಳದಲ್ಲಿ ಪ್ರಸ್ತುತ ಇದ್ದು, ಈ ಪೈಕಿ 1408 ಸರ್ಕಾರಿ ಕೋವಿಡ್‌ ಲಸಿಕಾ ಕೇಂದ್ರಗಳು ಆಗಿದೆ. 290 ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳು ಆಗಿದೆ. ಇದೇ ಸಂದರ್ಭದಲ್ಲಿ ಕೇರಳ ರಾಜ್ಯಕ್ಕೆ ಐದು ಲಕ್ಷ ಕೋವಿಶೀಲ್ಡ್‌ ಲಸಿಕೆಯು ಲಭ್ಯವಾಗಿದೆ. ತಿರುವನಂತಪುರಂಗೆ 1,69,300 ಡೋಸ್‌ ಕೋವಿಡ್‌ ಲಸಿಕೆಯಾದರೆ, ಎರ್ನಾಂಕುಲಂಗೆ 1,96,830 ಡೋಸ್‌ ಕೋವಿಡ್‌ ಲಸಿಕೆ ಆಗಿದೆ. ಕೋಝಿಕೋಡ್‌ಗೆ 1,33,870 ಡೋಸ್‌ ಕೋವಿಡ್‌ ಲಸಿಕೆಯು ಲಭ್ಯವಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Over 93 percent of population in Kerala jabbed with first dose of Covid vaccine, Says Health Minister Veena George. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X