ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿಕ್ಕೋಡ್ ವಿಮಾನ ದುರಂತದಲ್ಲಿ ಮೃತಪಟ್ಟ ಓರ್ವನಿಗೆ ಕೊರೊನಾ!

|
Google Oneindia Kannada News

ತಿರುವನಂತಪುರಂ, ಆಗಸ್ಟ್ 8: ಶುಕ್ರವಾರ ರಾತ್ರಿ ದುಬೈನಿಂದ ಕೋಳಿಕ್ಕೋಡ್‌ಗೆ ಬರುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ವಿಮಾನ ಪತನಗೊಂಡಿದ್ದು, ಸುಮಾರು 18 ಜನರು ಮೃತಪಟ್ಟಿರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ.

Recommended Video

Kerala Flight crash ದುರಂತದಲ್ಲಿದ್ದ 40 ಮಂದಿಗೆ Corona | Oneindia Kannada

ಮೃತಪಟ್ಟ 18 ಜನರ ಪೈಕಿ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ಪಾಸಿಟಿವ್ ಇತ್ತು ಎನ್ನುವುದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಕೇರಳ ಸಚಿವ ಕೆಟಿ ಜಲೀಲ್ ಹೇಳಿದ್ದಾರೆ.

ವಿಶ್ವದಲ್ಲಿ ಸಂಭವಿಸಿದ ಇತರೆ ಪ್ರಮುಖ 10 ವಿಮಾನ ಅಪಘಾತಗಳುವಿಶ್ವದಲ್ಲಿ ಸಂಭವಿಸಿದ ಇತರೆ ಪ್ರಮುಖ 10 ವಿಮಾನ ಅಪಘಾತಗಳು

ಈ ಹಿನ್ನೆಲೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಬದುಕಿಳಿದವರೆಲ್ಲರೂ ಕ್ವಾರಂಟೈನ್‌ಗೆ ಹೋಗಬೇಕು. ಮತ್ತು ಎಲ್ಲರಿಗೂ ಕೊರೊನಾ ಪರೀಕ್ಷೆ ಕಡ್ಡಾಯ ಎಂದು ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್ ಹೇಳಿದ್ದಾರೆ.

One of the 18 passengers who died in Kozhikode flight crash has tested COVID 19 positive

ಇಬ್ಬರು ಪೈಲೆಟ್ ಹಾಗೂ ನಾಲ್ಕು ಸಿಬ್ಬಂದಿ ಒಟ್ಟು 190 ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಗಾಯಗೊಂಡ 149 ಪ್ರಯಾಣಿಕರನ್ನು ಮಲಪ್ಪುರಂ ಮತ್ತು ಕೋಳಿಕ್ಕೋಡ್ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಅದರಲ್ಲಿ 22 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಪ್ರಥಮ ಚಿಕಿತ್ಸಾ ನಂತರ 22 ಜನರನ್ನು ಬಿಡುಗಡೆ ಮಾಡಲಾಗಿದೆ.

ಕೇರಳ ಗವರ್ನರ್, ಆರಿಫ್ ಮೊಹಮ್ಮದ್ ಖಾನ್ ಇಂದು ಬೆಳಗ್ಗೆ ಕೋಳಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊರೊನಾ ಲಾಕ್‌ಡೌನ್ ಆದ ಹಿನ್ನೆಲೆ ಭಾರತಕ್ಕೆ ಬರಲಾಗದೆ ದುಬೈನಲ್ಲಿ ಉಳಿದುಕೊಂಡಿದ್ದವರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಾಪಸ್ ಕರೆತರಲಾಗುತ್ತಿತ್ತು. ದುರಾದೃಷ್ಟವಶಾತ್ ಲ್ಯಾಂಡಿಂಗ್ ವೇಳೆ ಅನಾಹುತ ಸಂಭವಿಸಿದೆ.

English summary
One of the 18 passengers who died in Kozhikode flight crash has tested COVID 19 positive: Kerala minister K T Jaleel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X