ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋಗೆ ಜಾಮೀನು ರದ್ದು

|
Google Oneindia Kannada News

ತಿರುವನಂತಪುರಂ, ಜುಲೈ 13: ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಲಾಕಲ್‌ ಜಾಮೀನನ್ನು ಕೊಟ್ಟಾಯಂ ಕೋರ್ಟ್ ರದ್ದುಗೊಳಿಸಿದೆ.

Recommended Video

Rameshwaram - A Spiritual Journey To The Divine Site Of Tamil Nadu | Oneindia Kannada

ಬಿಷಪ್ ವಿಚಾರಣೆಗೆ ಕೂಡ ಹಾಜರಾಗಿರಲಿಲ್ಲ, ಹೀಗಾಗಿ ಜಾಮೀನು ರದ್ದುಗೊಳಿಸಿದ್ದಷ್ಟೇ ಅಲ್ಲದೆ ಆತನ ಮೇಲೆ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ಅವರ ಆಪ್ತ ವಕೀಲರೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿರುವ ಕಾರಣ ಅವರು ಕ್ವಾರಂಟೈನ್‌ನಲ್ಲಿರುವುದಾಗಿ ಕೋರ್ಟ್‌ ತಿಳಿಸಲಾಗಿದೆ.

ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ

ಜುಲೈ 1 ರಂದು ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಕಂಟೈನ್ಮೆಂಟ್ ಜೋನ್‌ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಕಾರಣ ಕೊಟ್ಟಿದ್ದರು. ಬಳಿಕ ಅವರ ಮನೆಯಿದ್ದ ಪ್ರದೇಶ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಇಂದು ವಾದ ಮಾಡಿದ್ದರು.

Nun Rape Case Kerala Bishop Franco Mulakkals Bail Cancelled

2018 ಕ್ರೈಸ್ತ ಸನ್ಯಾಸಿಯೊಬ್ಬರ ಮೇಲೆ ನಿರಂತರ ಅತ್ಯಾಚಾರ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ.2014ರಲ್ಲಿ ಮೊದಲ ಬಾರಿಗೆ ಅತ್ಯಾಚಾರವೆಸಗಿದ್ದ ಬಳಿಕ 2016ರವರೆಗೂ ನಿರಂತರ ಅತ್ಯಾಚಾರವೆಸಗಿದ್ದ ಎಂದು ದೂರು ನೀಡಲಾಗಿತ್ತು.

ಸಂತ್ರಸ್ತೆ ಹಾಗೂ ಇನ್ನಿತರೆ ನನ್‌ ಗಳು ಹಾಸ್ಟೆಲ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು, ಬಳಿಕ ತಮಗೂ ಇಂತಹ ಗತಿ ಬಂದರೆ ಎಂದು ಬಿಷಪ್‌ ಬಂಧನಕ್ಕೆ ಒತ್ತಾಯಿಸಿದ್ದರು.

English summary
Rape accused Bishop Franco Mulakkal's bail has been canceled by Kottayam Additional District Court and a no-bail arrest warrant has been issued against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X