ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ತೊರೆಯುವಂತೆ ನಾರ್ವೆ ಪ್ರಜೆಗೆ ಸೂಚನೆ ಕೊಟ್ಟಿದ್ದೇಕೆ?

|
Google Oneindia Kannada News

ಕೊಚ್ಚಿ, ಡಿಸೆಂಬರ್ 27: ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾರ್ವೆ ದೇಶದ ಪ್ರಜೆ ಜೇನ್ನ್-ಮೆಟ್ಟೆ ಜೊಹಾನ್ಸನ್ ಎಂಬಾಕೆಯನ್ನು ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ. ಆದರೆ, ಆಕೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಲಾಗಿಲ್ಲ ಎಂಡು ಅಧಿಕಾರಿಗಳು ಹೇಳಿದ್ದಾರೆ. ನಾರ್ವೆ ಪ್ರಜೆಯ ಟೂರಿಸ್ಟ್ ವೀಸಾ ಮಾರ್ಚ್ 2020ರಲ್ಲಿ ಕೊನೆಗೊಳ್ಳಲಿದೆ.

"ಇದು ಗಡೀಪಾರು ಅಲ್ಲ. ಆಕೆ ಪ್ರತಿಭಟನೆಯಲ್ಲಿ ಭಾಗವಹಿಸಿ ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಆದಷ್ಟು ಬೇಗ ಇಲ್ಲಿಂದ ತೆರಳುವಂತೆ ಆಕೆಗೆ ಸೂಚಿಸಿದ್ದೇವೆ. ಆಕೆಯೇ ಸ್ವತಃ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದರು,'' ಎಂದು ಎಫ್‍.ಆರ್.ಆರ್.ಒ ಅಧಿಕಾರಿ ಅನೂಪ್ ಕೃಷ್ಣನ್ ಹೇಳಿದ್ದಾರೆ.

ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆಯಲ್ಲಿ ನಾರ್ವೆ ದೇಶದ ಪ್ರಜೆ, 71 ವರ್ಷದ ಜೇನ್ನ್-ಮೆಟ್ಟೆ ಜೊಹಾನ್ಸನ್ ಎಂಬಾಕೆ ಭಾಗವಹಿಸಿದ್ದರು. ದೇಶದಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ನೋಂದಣಿ ಹಾಗೂ ಚಲನವಲನಗಳ ಮೇಲೆ ನಿಗಾ ಇಡುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‍.ಆರ್.ಆರ್.ಒ) ಈ ಸುದ್ದಿಯನ್ನು ದೃಢೀಕರಿಸಿದೆ.

Norwegian tourist Janne, who took part in anti-CAA protest in Kochi, asked to leave India

"ಶುಕ್ರವಾರ ಸಂಜೆ 6 ಗಂಟೆಯೊಳಗಾಗಿ ದೇಶ ಬಿಟ್ಟು ತೆರಳದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಲಿಖಿತ ಆದೇಶ ನೀಡುವಂತೆ ಅವರನ್ನು ಕೇಳಿದರೂ ಅವರು ನೀಡಿಲ್ಲ. ಇದು ಬ್ಲ್ಯಾಕ್ಮೇಲ್ ಮಾಡಿದ್ದಂತಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

English summary
Norwegian woman, Janne-Mette Johansson, who reportedly took part in anti-CAA protest in Kochi was asked by the immigration authorities to leave India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X