• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಸ್ಥಳೀಯ ಭಾಷೆ ಮಲಯಾಳಂನಲ್ಲಿ ಕರಡು ನಿಬಂಧನೆ ಪ್ರಕಟ ಅಗತ್ಯವಿಲ್ಲ': ಕೇರಳ 'ಹೈ' ಗೆ ಲಕ್ಷದ್ವೀಪ

|
Google Oneindia Kannada News

ತಿರುವನಂತಪುರಂ, ಜು.13: ''ಮಲಯಾಳಂ ಲಕ್ಷದ್ವೀಪದ ಅಧಿಕೃತ ಭಾಷೆಯಲ್ಲ, ಹಾಗಾಗಿ ನಿಬಂಧನೆಗಳ ಕರಡನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸುವ ಅಗತ್ಯವಿಲ್ಲ,'' ಎಂದು ಲಕ್ಷದ್ವೀಪ ಆಡಳಿತ ಕೇರಳ ಹೈಕೋರ್ಟ್‌ಗೆ ತಿಳಿಸಿದೆ.

ಯುಟಿಯ ಕರಡು ನಿಯಮಗಳನ್ನು ಕೋರಿ ಲಕ್ಷದ್ವೀಪ ಆಡಳಿತವು ಕೇರಳ ಹೈಕೋರ್ಟ್‌ಗೆ ಪ್ರತಿ ಅಫಿಡವಿಟ್ ಸಲ್ಲಿಸಿದೆ. ಲಕ್ಷದ್ವೀಪದ ಸಂಸದ ಪಿ ಪಿ ಮೊಹಮ್ಮದ್‌ ಫೈಜಲ್‌ ಸಲ್ಲಿಸಿರುವ ಮನವಿಗೆ ಪ್ರತಿಯಾಗಿ ಅಫಿಡವಿಟ್‌ ಸಲ್ಲಿಕೆಯಾಗಿದೆ.

'ಶಾಂತಿಗೆ ಭಂಗ ತರುವ ಯತ್ನ' ಎಂದು ಕೇರಳ ಕಾಂಗ್ರೆಸ್ ನಾಯಕರ ಪ್ರವೇಶಕ್ಕೆ ಲಕ್ಷದ್ವೀಪ ನಿರಾಕರಣೆ'ಶಾಂತಿಗೆ ಭಂಗ ತರುವ ಯತ್ನ' ಎಂದು ಕೇರಳ ಕಾಂಗ್ರೆಸ್ ನಾಯಕರ ಪ್ರವೇಶಕ್ಕೆ ಲಕ್ಷದ್ವೀಪ ನಿರಾಕರಣೆ

ಲಕ್ಷದ್ವೀಪದ ಆಡಳಿತದ ಪರವಾಗಿ ಹಿರಿಯ ಸ್ಥಾಯಿ ಸಲಹೆಗಾರ ಎಸ್. ಮನು, ಲಕ್ಷದ್ವೀಪದ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾಗುತ್ತದೆ. ಇಂತಹ ಅರ್ಜಿಗೆ ಯಾವುದೇ ಹುರುಳಿಲ್ಲ,'' ಎಂದು ವಾದಿಸಿದ್ದಾರೆ.

''ಭಾರತ ಸಂವಿಧಾನದ 345ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ ಕೇಂದ್ರಾಡಳಿತ ಪ್ರದೇಶದಲ್ಲಿ ಮಲೆಯಾಳಂ ಅನ್ನು ಅಧಿಕೃತ ಭಾಷೆ ಎಂದು ಘೋಷಿಸಲಾಗಿಲ್ಲ. ಲಕ್ಷದ್ವೀಪದ ಹೆಚ್ಚಿನ ಮಂದಿ ಜೆಸೆರಿ ಎಂಬ ಭಾಷೆಯನ್ನು ಮಾತನಾಡುತ್ತಾರೆ. ಆದರೆ ಇದಕ್ಕೆ ಯಾವುದೇ ಲಿಪಿ ಇಲ್ಲ. ಆದರೆ ಲಕ್ಷದ್ವೀಪದ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾಗುತ್ತದೆ,'' ಎಂದು ಅಫಿಡವಿಟ್‌ನಲ್ಲಿ ಆಡಳಿತ ತಿಳಿಸಿದೆ.

''ಲಕ್ಷದ್ವೀಪಕ್ಕೆ ಯಾವುದೇ ಶಾಸಕಾಂಗವಿಲ್ಲ ಎಂಬ ಕಾರಣಕ್ಕಾಗಿ ಸ್ಥಳೀಯ ಮಧ್ಯಸ್ಥಗಾರರ ಅನುಕೂಲಕ್ಕಾಗಿ ಇತ್ತೀಚೆಗೆ ಪ್ರಸ್ತಾಪಿಸಲಾದ ಕರಡು ನಿಯಮಗಳನ್ನು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯ,'' ಎಂದು ಲಕ್ಷದ್ವೀಪದ ಸಂಸದ ಪಿ ಪಿ ಮೊಹಮ್ಮದ್‌ ಫೈಜಲ್‌ ಅರ್ಜಿ ಸಲ್ಲಿಸಿದ್ದರು. ''ಕಾನೂನು ರಚಿಸುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಇದು ಬಹಳ ಮಹತ್ವದ್ದಾಗಿದೆ,'' ಎಂದು ಈ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಲಕ್ಷದ್ವೀಪ ಆಡಳಿತ ಸುಧಾರಣೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್ಲಕ್ಷದ್ವೀಪ ಆಡಳಿತ ಸುಧಾರಣೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್

ಈ ಅರ್ಜಿಗೆ ಪ್ರತಿಯಾಗಿ ಅಫಿಡವಿಟ್‌ ಸಲ್ಲಿಕೆ ಮಾಡಿರುವ ಲಕ್ಷದ್ವೀಪ ಆಡಳಿತ, ''ಅರ್ಜಿದಾರರು ವಾದ ಮಾಡಿರುವಂತೆ ಸ್ಥಳೀಯ ಭಾಷೆಯಲ್ಲಿ ಕರಡು ನಿಬಂಧನೆಯನ್ನು ಪ್ರಕಟಿಸುವ ಅಗತ್ಯವಿಲ್ಲ. ಸಂವಿಧಾನದ 348 (1) (ಬಿ) (ii) ಅಡಿಯಲ್ಲಿ ಹೊರಡಿಸಲಾದ ಎಲ್ಲಾ ಆದೇಶಗಳು, ನಿಯಮಗಳು, ನಿಬಂಧನೆಗಳು ಮತ್ತು ಬೈಲಾಗಳು ಅಧಿಕೃತ ಪಠ್ಯ ಅಥವಾ ಸಂಸತ್ತು ಅಥವಾ ರಾಜ್ಯದ ಶಾಸನ ಸಭೆ ರೂಪಿಸಿದ ಕಾನೂನಿನ ಅಡಿಯ ಅಧಿಕೃತ ಪಠ್ಯ ಇಂಗ್ಲಿಷ್ ಭಾಷೆಯಲ್ಲಿರಬೇಕು. ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ,'' ಎಂದು ಸರ್ಕಾರ ಹೇಳಿದೆ.

ಇದೇ ಸಂದರ್ಭ ಲಕ್ಷ ದ್ವೀಪ ಆಡಳಿತವು ದ್ವೀಪ ಪ್ರದೇಶದಲ್ಲಿ ಇಂಟರ್‌ನೆಟ್‌ ವ್ಯವಸ್ಥೆಯ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದೆ. ಆದರೆ ಕರಡಿನ ಸಾರ್ವಜನಿಕ ನೋಟಿಸ್‌ಗೆ ಸಂಬಂಧಿಸಿದ ಆಕ್ಷೇಪಣೆ ಮತ್ತು ಸಲಹೆಗಳು ಅಂಚೆಯಲ್ಲಿ ಬಂದಿರುವುದ್ದಕ್ಕಿಂತ ಎರಡು ಪಟ್ಟು ಹೆಚ್ಚು ಇಮೇಲ್‌ ಮೂಲಕ ಬಂದಿವೆ ಎಂದು ಹೇಳಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Malayalam not official language of Lakshadweep, no requirement to publish draft regulations in vernacular: Lakashdweep admin to Kerala High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X