ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಗೆ ಬಂದ ನಿರ್ಮಲಾ ಸೀತಾರಾಮನ್ ಸೌಜನ್ಯಕ್ಕೆ ಕರಗಿಹೋದ ಶಶಿ ತರೂರ್

|
Google Oneindia Kannada News

Recommended Video

ಭಾರತದ ರಾಜಕೀಯದಲ್ಲಿ ಇಂಥ ಪ್ರಬುದ್ಧ ವರ್ತನೆ ಅಪರೂಪ | Oneindia Kannada

ತಿರುವನಂತಪುರಂ, ಏಪ್ರಿಲ್ 16: "ಭಾರತದ ರಾಜಕೀಯದಲ್ಲಿ ಇಂಥ ಪ್ರಬುದ್ಧ ವರ್ತನೆ ಅಪರೂಪ. ಆಕೆಯ ಸೌಜನ್ಯ ನನ್ನನ್ನು ತಟ್ಟಿತು" ಹೀಗೆಂದು ಕಾಂಗ್ರೆಸ್ ಮುಖಂಡ ಶಶಿ ತರೂರ್, ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಹೊಗಳಿಕೆಯ ಮಾತನ್ನಾಡಿದ್ದಾರೆ.

ಕೇರಳದ ಗಾಂಧಾರಿ ಅಮನ್ ಕೋವಿಲ್ ದೇವಸ್ಥಾನದಲ್ಲಿ ಅಚಾನಕ್ಕಾಗಿ ಬಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Nirmala Sitharaman meets Shashi Taroor in hospital in Kerala

ಶಶಿ ತರೂರ್ ತಲೆಗೆ ತೀವ್ರ ಪೆಟ್ಟು, 6 ಹೊಲಿಗೆ ಹಾಕಿದ ವೈದ್ಯರುಶಶಿ ತರೂರ್ ತಲೆಗೆ ತೀವ್ರ ಪೆಟ್ಟು, 6 ಹೊಲಿಗೆ ಹಾಕಿದ ವೈದ್ಯರು

ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಕೇರಳಕ್ಕೆ ತೆರಳಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಶಿ ತರೂರ್ ಅವರಿದ್ದ ಆಸ್ಪತ್ರೆಗೆ ತೆರಳಿ, ಅವರ ಕುಶಲ ವಿಚಾರಿಸಿದರು. ಕೈಕುಲುಕಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಅವರ ಅನಿರೀಕ್ಷಿತ ಭೇಟಿಯ ನಂತರ ಮನದುಂಬಿ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

"ಚುನಾವಣೆಯ ಬಿಡುವಿಲ್ಲದ ಶೆಡ್ಯೂಲ್ ನಡುವೆಯೂ ನನ್ನನ್ನು ಆಸ್ಪತ್ರೆಗೆ ಬಂದು ಭೇಟಿ ಮಾಡಿ, ವಿಚಾರಿಸಿದ ನಿರ್ಮಲಾ ಸೀತಾರಾಮನ್ ಅವರ ಸೌಜನ್ಯದ ನಡೆ ನನ್ನನ್ನು ತಟ್ಟಿತು. ಭಾರತೀಯ ರಾಜಕೀಯದಲ್ಲಿ ಇಂಥ ಪ್ರಬುದ್ಧ ವರ್ತನೆ ಅಪರೂಪ. ಆದರೆ ಅದನ್ನು ಈಗಲೂ ಪಾಲಿಸುತ್ತಿರುವುದು ನಿರ್ಮಲಾ ಅವರ ದೊಡ್ಡಗುಣ" ಎಂದು ಶಶಿ ತರೂರ್ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಶಶಿ ತರೂರ್, ಏಪ್ರಿಲ್ 23 ರಂದು ಚುನಾವಣೆ ಎದುರಿಸಲಿದ್ದಾರೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Defence minister Nirmala Sitharaman met Congress leader Shashi Taroor in Kerala hospital. He is undergoing a treatment in a hospital. He was injured while offering prayer in a temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X