ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ; ಎರಡು ಬಗೆಯ ಬಾವಲಿಗಳಲ್ಲಿ ನಿಫಾ ಸೋಂಕಿನ ಪ್ರತಿಕಾಯ ಪತ್ತೆ

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 29: ಎರಡು ಬಗೆಯ ಬಾವಲಿಗಳಲ್ಲಿ ನಿಫಾ ವೈರಸ್ ವಿರುದ್ಧ ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

'ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ಕೋಯಿಕ್ಕೋಡ್‌ನಲ್ಲಿನ ವಿವಿಧ ಬಗೆಯ ಬಾವಲಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದೆ. ಅದರಲ್ಲಿ ಎರಡು ವಿಧದ ಬಾವಲಿಗಳಲ್ಲಿ ನಿಫಾ ಸೋಂಕಿನ ವಿರುದ್ಧ ಪ್ರತಿಕಾಯಗಳು ಕಂಡುಬಂದಿವೆ. ಬಾವಲಿಗಳಿಂದ ನಿಫಾ ಸೋಂಕು ಹರಡುತ್ತದೆ ಎಂಬ ವಾದಕ್ಕೆ ಬಲ ಬಂದಿದೆ' ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ನಿಪಾ ವೈರಸ್ ರೋಗಿಗಳಿಗೆ ಪ್ರತಿನಿತ್ಯ ಆರ್‌ಟಿ-ಪಿಸಿಆರ್ ಪರೀಕ್ಷೆ!ಕೇರಳದಲ್ಲಿ ನಿಪಾ ವೈರಸ್ ರೋಗಿಗಳಿಗೆ ಪ್ರತಿನಿತ್ಯ ಆರ್‌ಟಿ-ಪಿಸಿಆರ್ ಪರೀಕ್ಷೆ!

'ಬೇರೆ ವಿಧದ ಬಾವಲಿಗಳ ಪರೀಕ್ಷೆಯೂ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಪರೀಕ್ಷಾ ವರದಿ ಕೈ ಸೇರಲಿದೆ' ಎಂದು ತಿಳಿಸಿದ್ದಾರೆ.

Nipah Antibodies Found In 2 Varieties Of Bats Informs Kerala Health Minister

ಕೊರೊನಾ ಸೋಂಕು ಉಲ್ಬಣಗೊಂಡಿದ್ದ ಹೊತ್ತಿನಲ್ಲೇ ಕೇರಳದಲ್ಲಿ ನಿಫಾ ಆತಂಕ ಆರಂಭಗೊಂಡಿತ್ತು. ಸೆಪ್ಟೆಂಬರ್ ತಿಂಗಳ ಮೊದಲಲ್ಲಿ ಕೋಯಿಕ್ಕೋಡ್‌ನಲ್ಲಿ ನಿಫಾ ವೈರಸ್‌ನ ಮೊದಲ ಪ್ರಕರಣ ವರದಿಯಾಗಿತ್ತು. 12 ವರ್ಷದ ಬಾಲಕ ನಿಫಾ ವೈರಸ್‌ನಿಂದ ಮೃತಪಟ್ಟ ನಂತರ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು.

ಇದಾದ ನಂತರ ಮತ್ತಷ್ಟು ಮಂದಿಯಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಇಡೀ ರಾಜ್ಯದಲ್ಲಿ ಅಲರ್ಟ್ ಘೋಷಿಸಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ನೆರೆಹೊರೆಯ ರಾಜ್ಯಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಯಿತು.

ಕೇರಳದಲ್ಲಿ ನಿಪಾ ವೈರಸ್ ಸೋಂಕಿನೊಂದಿಗೆ 11 ಮಂದಿಯ ಸಂಪರ್ಕ!ಕೇರಳದಲ್ಲಿ ನಿಪಾ ವೈರಸ್ ಸೋಂಕಿನೊಂದಿಗೆ 11 ಮಂದಿಯ ಸಂಪರ್ಕ!

ಇದಾದ ನಂತರ ನಿಫಾ ಸೋಂಕಿನ ವಿಶ್ಲೇಷಣೆ ನಡೆದಿತ್ತು. ಕೋಯಿಕ್ಕೋಡ್‌ನಲ್ಲಿ ಎರಡು ರಂಬುಟಾನ್ ಮರಗಳಿರುವುದರಿಂದ ಬಾವಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಈ ಬಾವಲಿಗಳಿಂದಲೇ ನಿಫಾ ಸೋಂಕು ಹರಡಿದೆ ಎಂಬ ಕುರಿತು ಚರ್ಚೆಗಳು ಸಾಗಿದ್ದವು. ನಂತರ ಸೋಂಕು ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು.

ನಿಫಾ ಸೋಂಕಿತ ವ್ಯಕ್ತಿಗಳನ್ನು ಪ್ರತಿನಿತ್ಯ RT-PCR ಪರೀಕ್ಷೆಗೊಳಪಡಿಸಿ, ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೆ ಅಥವಾ ಐದು ದಿನಗಳಲ್ಲಿ ಎರಡು ಬಾರಿ ಮೂರು ಮಾದರಿಯಲ್ಲಿ ನಡೆಸಿದ RT-PCR ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಕೇಂದ್ರದ ನ್ಯಾಷನಲ್‌ ಸೆಂಟರ್‌ ಫಾರ್‌ ಡಿಸೀಸ್‌ನ ತಂಡವು ಕೇರಳಕ್ಕೆ ಭೇಟಿ ನೀಡಿ ಅಗತ್ಯ ಸಹಾಯ ನೀಡಿತ್ತು.

Nipah Antibodies Found In 2 Varieties Of Bats Informs Kerala Health Minister

ಈ ಮುನ್ನ, ಅಂದರೆ 2018ರಲ್ಲಿ ಕೊಯಿಕ್ಕೋಡ್ ನಲ್ಲಿ ಬಾವಲಿಗಳಿಂದ ಹರಡುವ ನಿಫಾ ವೈರಸ್ ಹಬ್ಬಿತ್ತು. ನಿಫಾ ವೈರಸ್ ನಿಂದಾಗಿ ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ 18 ಮಂದಿ ಸಾವನ್ನಪ್ಪಿದ್ದರು.

ನಿಫಾ ಸೋಂಕು ಹೇಗೆ ಹರಡುತ್ತದೆ?:
ಸಾಮಾನ್ಯವಾಗಿ ಈ ನಿಫಾ ಸೋಂಕು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್) ಹರಡಬಹುದಾಗಿದ್ದು, ಈ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ಸೋಂಕು ಬೇರೊಬ್ಬರಿಗೆ ಹರಡುತ್ತದೆ. ಅಂತೆಯೇ ಪ್ರಾಣಿ ಇಲ್ಲವೇ ಪಕ್ಷಿಗಳಿಂದಲೂ ಇದು ಹರಡುವ ಸಾಧ್ಯತೆ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ನಿಫಾ ಸೋಂಕಿನ ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಳ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೆ ಈ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಿಫಾ ಸೋಂಕಿಗೆ ನಿಗದಿತ ಔಷಧಿಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡುವುದು ಮಾತ್ರ ಈ ವೈರಸ್‌ಗೆ ಒಳಗಾದವರಿಗೆ ನೀಡುವ ಪ್ರಾಥಮಿಕ ಚಿಕಿತ್ಸೆಯಾಗಿದೆ.

English summary
Kerala Health Minister Veena George on Wednesday said antibodies against Nipah virus were found in the samples of two varieties of bats by National Institute of Virology (NIV) in Pune
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X