ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಮತ್ತೊಬ್ಬ ವಿದೇಶಿ ಭಾರತದಿಂದ ಹೊರಕ್ಕೆ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 28: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡಿದ್ದಕ್ಕೆ ಮತ್ತೊಬ್ಬ ವಿದೇಶಿಗರನ್ನು ಭಾರತದಿಂದ ಹೊರಕ್ಕೆ ಕಳುಹಿಸಲಾಗಿದೆ.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ನಾರ್ವೆ ದೇಶದ ಜಾನೆ ಮ್ಯಾಟಿ ಜಾನ್ಸನ್ ಎಂಬ ಮಹಿಳೆ ಭಾಗವಹಿಸಿದ್ದರು, ಹೀಗಾಗಿ ಅವರನ್ನು ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ.

ಕೊಚ್ಚಿಯಲ್ಲಿ ಜಾನೆ ಮ್ಯಾಟಿ ಜಾನ್ಸನ್ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರು ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಸಾಬೀತಾದ ಕಾರಣ, ಅವರು ತಂಗಿದ್ದ ಹೊಟೆಲ್‌ಗೆ ಸೂಚನಾ ಪತ್ರದೊಂದಿಗೆ ತೆರಳಿದ್ದ ವಲಸೆ ಅಧಿಕಾರಿಗಳು ಕೂಡಲೇ ಭಾರತ ಬಿಟ್ಟು ತೆರಳುವಂತೆ ಸೂಚನೆ ನೀಡಿದ್ದಾರೆ.

Narve Citizen Asked To Leave India For Participating In CAA Protest

ಜಾನೆ ಮ್ಯಾಟಿ ಜಾನ್ಸನ್ ಅವರು ಕೊಚ್ಚಿಯಲ್ಲಿ ನಡೆದ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದರು.

ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಯನ್ನು ದೇಶದಿಂದಲೇ ಹೊರಹಾಕಿದರು!ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಯನ್ನು ದೇಶದಿಂದಲೇ ಹೊರಹಾಕಿದರು!

ವೀಸಾ ನಿಯಮಗಳ ಪ್ರಕಾರ ವಿದೇಶಿಗರು ಭಾರತ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಸುವಂತಿಲ್ಲ, ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ, ಹಾಗೊಮ್ಮೆ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಲಾಗುವುದು.

ಇತ್ತೀಚೆಗಷ್ಟೆ ಜರ್ಮನಿಯಿಂದ ಓದಲು ಬಂದಿದ್ದ ವಿದ್ಯಾರ್ಥಿಯೊಬ್ಬ ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಭಿತ್ತಿ ಪತ್ರ ಪ್ರದರ್ಶಿಸಿದ್ದ, ಆತನನ್ನು ಸಹ ಭಾರತ ಬಿಟ್ಟು ಹೊರಗಟ್ಟಲಾಗಿತ್ತು.

English summary
Narve citizen Jane Myati Janson asked to leave India for participating in CAA protest in Kochi. She came to India on tourist visa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X