ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಪಿಎಂ, ಬಿಜೆಪಿ ವಿರುದ್ಧ ಕೇರಳದಲ್ಲಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

|
Google Oneindia Kannada News

ಕೋಳಿಕ್ಕೋಡ್(ಕೇರಳ), ಮಾರ್ಚ್ 14: ಬಿಜೆಪಿ, ಆರೆಸ್ಸೆಸ್ ಹಾಗೂ ಸಿಪಿಎಂ ಹಿಂಸೆ ಮಾರ್ಗವನ್ನು ಬಳಸುತ್ತವೆ. ದುರ್ಬಲರ ಪಾಲಿಗೆ ಹಿಂಸೆಯೇ ಶಸ್ತ್ರ. ಕಾಂಗ್ರೆಸ್ ಯಾವಾಗಲೂ ಹಿಂಸೆಯ ವಿರುದ್ಧ ಅಹಿಂಸೆಯಿಂದ ಹೋರಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ಕೋಳಿಕ್ಕೋಡ್ ನಲ್ಲಿ ಬುಧವಾರ ಹೇಳಿದ್ದಾರೆ.

ನಿಮಗೆ ನರೇಂದ್ರ ಮೋದಿ ಅವರ ಭಾಷಣ ಕೇಳಲಿಕ್ಕೆ ಅವಕಾಶ ಸಿಗಬಹುದು. ಅವರು ಮಾಡುವುದು ಏನೆಂದರೆ, ಜನರನ್ನು ಬಯ್ಯುತ್ತಾರೆ. ಅವರು ಯಾರ ಬಗ್ಗೆಯೂ ಎಂದಿಗೂ ಒಳ್ಳೆ ವಿಚಾರ ಹೇಳುವುದಿಲ್ಲ ಎಂದು ರಾಹುಲ್ ಗಾಂಧಿ ಆರೋಪ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜದ್ರೋಹ ಕಾನೂನು ಕಸದಬುಟ್ಟಿಗೆ!ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜದ್ರೋಹ ಕಾನೂನು ಕಸದಬುಟ್ಟಿಗೆ!

ನರೇಂದ್ರ ಮೋದಿ ಅವರು ವಾಜಪೇಯಿ ಅವರ ಬಗ್ಗೆ ಭಾಷಣ ಮಾಡುವುದನ್ನು ಕೇಳಬಹುದು. ಅಡ್ವಾಣಿ ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಅನ್ನೋದನ್ನು ನೋಡಬಹುದು. ಮೋದಿ ಅವರು ಗೌರವ ನೀಡುವುದು ತಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ಮಾತ್ರ ಎಂದು ಲೇವಡಿ ಮಾಡಿದರು.

Narendra Modi has never said anything nice about anybody, Rahul Gandhi

ಕೇರಳದಲ್ಲಿ ನೆರೆ ಪರಿಸ್ಥಿತಿ ಎದುರಾದಾಗ ಎಲ್ಲಿದ್ದರು ಎಂದು ಸಿಪಿಎಂನವರನ್ನು ಕೇಳಲು ಬಯಸುತ್ತೀನಿ. ನೆರೆಯಿಂದ ತೊಂದರೆಗೆ ಒಳಗಾದ ಹತ್ತು ಸಾವಿರ ಕುಟುಂಬಗಳಿಗೆ ಸಿಪಿಎಂನಿಂದ ಏನು ಮಾಡಿದರು? ಹಿಂಸಾತ್ಮಕವಾಗಿ ನಡೆದುಕೊಳ್ಳುವುದು ಮಾತ್ರ ಸಿಪಿಎಂಗೆ ಮಾಡಲು ಸಾಧ್ಯ. ಉದ್ಯೋಗ ಸೃಷ್ಟಿಯ ವಿಚಾರಕ್ಕೆ ಬಂದರೆ ಸಿಪಿಎಂ ಬಳಿ ಉತ್ತರವೇ ಇಲ್ಲ ಎಂದರು.

ದುರ್ಬಲ ಮೋದಿ ಚೀನಾ ಅಧ್ಯಕ್ಷರಿಗೆ ಹೆದರಿದ್ದಾರೆ, ರಾಹುಲ್ ಲೇವಡಿದುರ್ಬಲ ಮೋದಿ ಚೀನಾ ಅಧ್ಯಕ್ಷರಿಗೆ ಹೆದರಿದ್ದಾರೆ, ರಾಹುಲ್ ಲೇವಡಿ

ತಮ್ಮ ಸಿದ್ಧಾಂತಗಳು ಕೆಲಸಕ್ಕೆ ಬರುವುದಿಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಸಿಪಿಎಂಗೆ ಇನ್ನೂ ಸಮಯ ಬೇಕು ಅನಿಸುತ್ತದೆ. ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲು ಕಡ್ಡಿ ಆಸರೆ ಎಂಬಂತಾಗಿದೆ ಅವರ ಸ್ಥಿತಿ ಎಂದು ರಾಹುಲ್ ಹೇಳಿದರು.

English summary
In a way,BJP-RSS and CPM use violence. Violence is weapon of the weak. Congress has always fought violence with non-violence. You might get a chance to listen to Mr Narendra Modi' speeches. All he does is abuse people. He has never said anything nice about anybody, said AICC president Rahul Gandhi in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X