• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶದೆಲ್ಲೆಡೆ ಕಮಲ ಅರಳಿಸಿದ ಮೋದಿಗೆ ತಾವರೆಯ ತುಲಾಭಾರ

|
   ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಮೋದಿಯಿಂದ ವಿಶೇಷ ಪೂಜೆ | Oneindia Kannada

   ತಿರುವನಂತಪುರಂ, ಜೂನ್ 08: ಇತ್ತೀಚೆಗಷ್ಟೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ದೇಶದೆಲ್ಲೆಡೆ ಕಮಲ ಅರಳಿಸಿದ ನರೇಂದ್ರ ಮೋದಿ ಅವರಿಗೆ ಇಂದು ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು.

   ಕೇರಳದ ಶ್ರಿಶೂರ್‌ನ ಪ್ರಸಿದ್ಧ ಗುರುವಾಯುರ್ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರಿಗೆ ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು. ಜೊತೆಗೆ ಮೋದಿ ಅವರು ಇಲ್ಲಿ ವಿಶೇಷ ಪೂಜೆಯಲ್ಲಿಯೂ ಪಾಲ್ಗೊಂಡಿದ್ದರು.

   ಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರ ಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರ

   ಮೋದಿ ಅವರು ದೇವಾಲಯದಲ್ಲಿ ಭಕ್ತಿ-ಭಾವದಿಂದ ಪೂಜೆ ಮಾಡುತ್ತಿರುವ, ದೇವಾಲಯ ಪ್ರದಕ್ಷಿಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಅವರು ಸಹ ಪೂಜೆಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

   ಮೋದಿ ಅವರು ಕೇರಳ ಶೈಲಿಯಲ್ಲಿಯೇ ಪಂಚೆ, ಶಲ್ಯ ಧರಿಸಿ ದೇವರ ದರ್ಶನದಲ್ಲಿ ಭಾಗಿಯಾಗಿದ್ದಾರೆ. ಮೋದಿ ಅವರೊಂದಿಗೆ ಕೆಲವು ಕೇಂದ್ರ ಸಚಿವರು, ಪಕ್ಷದ ವರಿಷ್ಠರು ಭಾಗಿಯಾಗಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

   ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆದ ನಂತರ ಮೋದಿ ಅವರದ್ದು ಇದು ಮೊದಲ ದೇವಸ್ಥಾನ ಭೇಟಿಯಾಗಿದೆ. ಲೋಕಸಭೆ ಚುನಾವಣೆಯ ಮತದಾನ ಮುಗಿದ ಬಳಿಕ ಅವರು ಕೇದಾರನಾಥ ದೇವಾಲಯಕ್ಕೆ ಹೋಗಿದ್ದರು. ಆ ನಂತರ ಈಗ ಅವರು ಕೇರಳದ ಗುರುವಾಯೂರ್ ದೇವಾಲಯಕ್ಕೆ ಆಗಮಿಸಿದ್ದಾರೆ.

   ನಮ್ಮ ಹೈಸ್ಕೂಲ್ ಹೆಡ್ ಮಾಸ್ಟ್ರನ್ನು ಮತ್ತೆ ನೆನಪಿಗೆ ತಂದ ಮೋದಿ!ನಮ್ಮ ಹೈಸ್ಕೂಲ್ ಹೆಡ್ ಮಾಸ್ಟ್ರನ್ನು ಮತ್ತೆ ನೆನಪಿಗೆ ತಂದ ಮೋದಿ!

   ವಿಶೇಷವೆಂದರೆ ರಾಹುಲ್ ಗಾಂಧಿ ಅವರು ಸಹ ಇದೇ ಸಮಯದಲ್ಲಿ ಕೇರಳದಲ್ಲಿಯೇ ಇದ್ದಾರೆ. ಅವರ ಮೂರು ದಿನದ ಕೇರಳ ಭೇಟಿ ನಿನ್ನೆ ಶುರುವಾಗಿದ್ದು, ಇಂದು ಎರಡನೇಯ ದಿನ ಕಲ್ಪೆಟ್ಟಾನಲ್ಲಿ ರೋಡ್‌ ಶೋ ನಡೆಸುತ್ತಿದ್ದಾರೆ.

   English summary
   Prime Minister Narendra Modi offers prayers at Sri Krishna Temple in Guruvayur of Thrissur. This is his first temple visit after he take oath as prime minister second time.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X