• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನ ಪ್ರವೇಶ ಬಿಜೆಪಿಗೆ ಬೇರೆಯದೇ ವರ್ಚಸ್ಸು ತಂದುಕೊಟ್ಟಿದೆ; ಮೆಟ್ರೋ ಮ್ಯಾನ್ ಇ ಶ್ರೀಧರನ್

|

ಪಾಲಕ್ಕಾಡ್, ಏಪ್ರಿಲ್ 6: ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅತ್ಯುತ್ತಮ ಹಾಗೂ ಪ್ರಭಾವಶಾಲಿ ಪ್ರದರ್ಶನ ನೀಡಲಿದೆ ಎಂದು ಮೆಟ್ರೋ ಮ್ಯಾನ್ ಇ ಶ್ರೀಧರನ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಕೇರಳ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ ಇ ಶ್ರೀಧರನ್ ಅವರು ಪೊನ್ನೈನಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತದಾನದ ನಂತರ ಮಾತನಾಡಿದ ಅವರು, "ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಲಿದೆ. ಆ ಬಗ್ಗೆ ಸಂಶಯವೇ ಬೇಡ" ಎಂದಿದ್ದಾರೆ.

ಮೆಟ್ರೊ ಮ್ಯಾನ್ ಕೇರಳದ ರಾಜಕೀಯ ಬದಲಾಯಿಸುತ್ತಾರೆ; ಮೋದಿಮೆಟ್ರೊ ಮ್ಯಾನ್ ಕೇರಳದ ರಾಜಕೀಯ ಬದಲಾಯಿಸುತ್ತಾರೆ; ಮೋದಿ

ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಇ ಶ್ರೀಧರನ್, ಪಾಲಕ್ಕಾಡ್‌ನಲ್ಲಿ ತಾವು ದೊಡ್ಡ ಅಂತರದಿಂದ ಗೆಲುವು ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ನನ್ನ ಪ್ರವೇಶ ಪಕ್ಷಕ್ಕೆ ಭಿನ್ನ ವರ್ಚಸ್ಸು ತಂದುಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಕೇರಳದ ಪಾಲಕ್ಕಾಡ್‌ ಕ್ಷೇತ್ರದಲ್ಲಿ ಇ ಶ್ರೀಧರನ್ ಸ್ಪರ್ಧೆಯಿಂದ ಭಾರಿ ಪೈಪೋಟಿ ಇದೆ. ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರ ರಾಜಕೀಯ ಪ್ರವೇಶ ಈ ಕ್ಷೇತ್ರದತ್ತ ಎಲ್ಲರ ಚಿತ್ತ ನೆಡಲು ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಕೇರಳದ 140 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

English summary
BJP will have an impressive show this time, there's no doubt about it. My entry into BJP has given a different image to the party says 'Metro Man' E Sreedharan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X