• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KPSC ಪರೀಕ್ಷೆ ಒಟ್ಟಿಗೆ ಪಾಸು ಮಾಡಿದ ತಾಯಿ, ಮಗ

|
Google Oneindia Kannada News

ತಿರುವನಂತಪುರಂ,ಆಗಸ್ಟ್‌ 10: ಕೇರಳದ ಮಲಪ್ಪುರಂನ 42 ವರ್ಷದ ಮಹಿಳೆ ಮತ್ತು ಆಕೆಯ 24 ವರ್ಷದ ಮಗ ಕೇರಳ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು "ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದೆವು. ನನ್ನ ತಾಯಿ ನನ್ನನ್ನು ಕೋಚಿಂಗ್‌ಗೆ ಕರೆತಂದರು. ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮಗೆ ನಮ್ಮ ಶಿಕ್ಷಕರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ. ಆಶ್ಚರ್ಯವೆಂದರೆ ನಾವು ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ. ನಾಮಗಿಬ್ಬರಿಗೂ ತುಂಬಾ ಸಂತೋಷವಾಗಿದೆ ಎಂದು ಮಗ ವಿವೇಕ್ ಹೇಳಿದರು.

ಎಲ್ಲಾ ಧರ್ಮಗಳು ಪ್ರೀತಿಸಲು ಕಲಿಸುತ್ತದೆ: ರಾಮಾಯಣ ರಸಪ್ರಶ್ನೆ ಗೆದ್ದ ಮುಸ್ಲಿಂ ವಿದ್ಯಾರ್ಥಿಗಳುಎಲ್ಲಾ ಧರ್ಮಗಳು ಪ್ರೀತಿಸಲು ಕಲಿಸುತ್ತದೆ: ರಾಮಾಯಣ ರಸಪ್ರಶ್ನೆ ಗೆದ್ದ ಮುಸ್ಲಿಂ ವಿದ್ಯಾರ್ಥಿಗಳು

ಮಲಪ್ಪುರಂನ ಬಿಂದು ಎಂಬುವವರು ತನ್ನ ಮಗ 10ನೇ ತರಗತಿಯಲ್ಲಿದ್ದಾಗ ಅವನನ್ನು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಆದರೆ ಇದು ಕೇರಳ ಸಾರ್ವಜನಿಕ ಸೇವಾ ಪರೀಕ್ಷೆಗಳಿಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇದು ಒಂಬತ್ತು ವರ್ಷಗಳಲ್ಲಿ ಅವರು ಮತ್ತು ಅವರ ಮಗ ಒಟ್ಟಿಗೆ ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಲು ಸಿದ್ಧವಾಗುವಂತೆ ಮಾಡಿತು.

ಈಗ ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ ಪರೀಕ್ಷೆಯಲ್ಲಿ 38ನೇ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. ಹಾಗೇಯೆ ಅವರ ಮಗ 92ನೇ ಶ್ರೇಣಿಯೊಂದಿಗೆ ಕೊನೆಯ ದರ್ಜೆಯ ಸೇವಕರ (ಎಲ್‌ಜಿಎಸ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮೂರು ಪ್ರಯತ್ನಗಳ ನಂತರ ಎಲ್‌ಜಿಎಸ್‌ ಪರೀಕ್ಷೆಗೆ ವಿವೇಕ್‌ ಮತ್ತು ಲೋವರ್ ಡಿವಿಜನಲ್ ಕ್ಲರ್ಕ್ ಪರೀಕ್ಷೆಗೆ ಬಿಂದು ಅವರು ನಾಲ್ಕನೇ ಪ್ರಯತ್ನದೊಂದಿಗೆ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.

ಬಿಂದು ಅವರು ಕಳೆದ 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಪಾಠ ಮಾಡುತ್ತಿದ್ದಾರೆ. ಅವರಿಗೆ ಸ್ನೇಹಿತರು, ಆಕೆಯ ಮಗ ಮತ್ತು ತನ್ನ ಕೋಚಿಂಗ್ ಸೆಂಟರ್‌ನಲ್ಲಿರುವ ಬೋಧಕರು ಈ ಸಾಧನೆಯ ಜರ್ನಿಯಲ್ಲಿ ಸ್ಫೂರ್ತಿ ಮತ್ತು ಬೆಂಬಲವನ್ನು ತುಂಬಿದ್ದಾರೆ ಎಂದು ಅವರು ಹೇಳಿದರು. ಪಿಎಸ್‌ಸಿ ಅಭ್ಯರ್ಥಿಯಾಗಿದ್ದಾಗ ತಯಾರಿಯ ಬಗ್ಗೆ ಹೇಳಿದ ಅವರು, ತಾನು ನಿರಂತರವಾಗಿ ಓದಲಾಗಲಿಲ್ಲ. ಆದರೆ ಪರೀಕ್ಷೆಯ ದಿನಾಂಕದ ಆರು ತಿಂಗಳ ಮೊದಲಷ್ಟೇ ಅಧ್ಯಯನ ಮಾಡಲು ಪ್ರಾರಂಭಿಸುತ್ತಿದ್ದರು. ನಂತರ ಮುಂದಿನ ಸುತ್ತಿನ ಪರೀಕ್ಷೆಗಳ ಘೋಷಣೆಯಾಗುವವರೆಗೆ ಅವರು ಕಠಿಣ ಅಭ್ಯಾಸ ಮಾಡುತ್ತಿರಲಿಲ್ಲ ಎಂದರು.

Mother, son cleared kpsc exam together in kerala

ಪರೀಕ್ಷೆ ಘೋಷಣೆಯಾಗದ ಸಮಯದಲ್ಲಿ ಓದದೇ ಇದ್ದದ್ದು ಈ ಹಿಂದೆ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಲು ಕಾರಣ ಎಂದು ಅವರು ಹೇಳಿದರು. ಅದನ್ನು ಹೇಳಿದ ನಂತರ, ಪರಿಶ್ರಮವು ಅಂತಿಮವಾಗಿ ಹೇಗೆ ಫಲ ನೀಡುತ್ತದೆ ಎಂಬುದಕ್ಕೆ ಅವಳು ಪರಿಪೂರ್ಣ ಉದಾಹರಣೆ ಎಂದು ಅವರು ಹೇಳಿದರು.

ಕೇರಳದಲ್ಲಿ ಎರಡನೇ ದರ್ಜೆ ಹುದ್ದೆಗಳಿಗೆ ವಯಸ್ಸಿನ ಮಿತಿ 40. ಆದರೆ ನಿರ್ದಿಷ್ಟ ವರ್ಗಗಳಿಗೆ ಕೆಲವು ವಿನಾಯಿತಿಗಳಿವೆ. ಇತರೆ ಹಿಂದುಳಿದ ವರ್ಗಗಳ ಗುಂಪಿನಲ್ಲಿ ಮೂರು ವರ್ಷಗಳವರೆಗೆ ಸಡಿಲಿಕೆ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆಯರಿಗೆ ಇದು ಐದು ವರ್ಷಗಳವರೆಗೆ ಸಡಿಲಿಕೆ, ಮಾತು, ಶ್ರವಣದೋಷ ಮತ್ತು ದೃಷ್ಟಿ ದೋಷವುಳ್ಳವರಿಗೆ 15 ವರ್ಷಗಳು, ಇತರೆ ಅಂಗವಿಕಲರಿಗೆ 10 ವರ್ಷಗಳು ಸಡಲಿಕೆ ಇದೆ ಎಂದು ಅವರು ತಿಳಿಸಿದರು.

English summary
A 42-year-old woman and her 24-year-old son from Malappuram in Kerala have cleared the Public Service Commission (PSC) examination together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X