ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳಕ್ಕೆ ಅವಧಿ ಪೂರ್ವದಲ್ಲೇ ಮಾನ್ಸೂನ್ ಪ್ರವೇಶ; ಕರ್ನಾಟಕದ 14 ಕಡೆಗಳಲ್ಲಿ ಮಳೆ

|
Google Oneindia Kannada News

ತಿರುವನಂತಪುರಂ, ಮೇ 13: ಕೇರಳದಲ್ಲಿ ಈ ಬಾರಿ ಎಂದಿಗಿಂತ ಪೂರ್ವದಲ್ಲೇ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ಆರಂಭವಾಗುತ್ತದೆ. ಆದರೆ ಈ ಬಾರಿ ಬಹುಶಃ ಒಂದು ವಾರ ಮುಂಚಿತವಾಗಿ ರಾಜ್ಯದ ಮೇಲೆ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ.

ಮೇ 15ರ ಸುಮಾರಿಗೆ ನೈಋತ್ಯ ಮಾನ್ಸೂನ್ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊರಡಿಸಿದ ಹವಾಮಾನ ಬುಲೆಟಿನ್ ಪ್ರಕಟಿಸಿದೆ.

 ಅಸಾನಿ ದುರ್ಬಲ: ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ ಸಾಧ್ಯತೆ ಅಸಾನಿ ದುರ್ಬಲ: ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ ಸಾಧ್ಯತೆ

ಸಾಮಾನ್ಯವಾಗಿ, ಮಾನ್ಸೂನ್ ಮೇ 22ರಂದು ಸಂಪೂರ್ಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಆವರಿಸುತ್ತದೆ. ಜೂನ್ 1ರ ವೇಳೆಗೆ 5 ದಿನ ಹೆಚ್ಚು ಕಡಿಮೆಯ ಅಂತರದಲ್ಲಿ ಕೇರಳವನ್ನು ತಲುಪುತ್ತದೆ.

ಮಾನ್ಸೂನ್ ಮೇಲೆ ಅಸನಿ ಪ್ರಭಾವ

ಮಾನ್ಸೂನ್ ಮೇಲೆ ಅಸನಿ ಪ್ರಭಾವ

ಮಾನ್ಸೂನ್ ಮಾರುತಗಳ ಸಾಮಾನ್ಯ ಪ್ರಗತಿಗಿಂತ ಒಂದು ವಾರ ಮುಂಚಿತವಾಗಿ ಅಸನಿ ಚಂಡಮಾರುತವು ತೇವಾಂಶವನ್ನು ಅಂಡಮಾನ್ ಕಡೆಗೆ ಎಳೆದಿದೆ ಎಂದು ಹಿರಿಯ IMD ವಿಜ್ಞಾನಿ ಹೇಳಿದ್ದಾರೆ. "ಇದಲ್ಲದೆ, ಮೇ 19ರ ವೇಳೆಗೆ ದಕ್ಷಿಣ ಚೀನಾ ಸಮುದ್ರದ ಮೇಲೆ ಮತ್ತೊಂದು ಕಡಿಮೆ ಒತ್ತಡದ ವ್ಯವಸ್ಥೆಯು ರೂಪುಗೊಳ್ಳುತ್ತದೆ ಎಂದು ಹವಾಮಾನ ಮಾದರಿಗಳು ಸೂಚಿಸುತ್ತಿವೆ, ಇದು ಬಂಗಾಳ ಕೊಲ್ಲಿಗೆ ದಾಟಿದರೆ ಕೇರಳದ ಕಡೆಗೆ ಮಾನ್ಸೂನ್ ಮಾರುತಗಳನ್ನು ಸ್ಥಾಪಿಸಲು ಮತ್ತು ಬಲಪಡಿಸಲು ಸಹಾಯವಾಗುತ್ತದೆ," ಎಂದು ಅವರು ಹೇಳಿದ್ದಾರೆ.

ಮಾನ್ಸೂನ್ ಚಲನೆಯ ಬಗ್ಗೆ ತಜ್ಞರು ಹೇಳುವುದೇನು?

ಮಾನ್ಸೂನ್ ಚಲನೆಯ ಬಗ್ಗೆ ತಜ್ಞರು ಹೇಳುವುದೇನು?

ಹವಾಮಾನ ಸಂಸ್ಥೆಯು ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ. ಮೇ 15ರೊಳಗೆ ಪ್ರಾದೇಶಿಕ ವಿತರಣೆ ಮತ್ತು ಉತ್ತರದ ಕಡೆಗೆ ಅದರ ಪ್ರಗತಿಯನ್ನು ಒಳಗೊಂಡಂತೆ ಹೆಚ್ಚು ನಿಖರವಾದ ಮುನ್ಸೂಚನೆಯೊಂದಿಗೆ ಬರಲಿದೆ ಎಂದು ತಿರುವನಂತಪುರಂನಲ್ಲಿರುವ IMD ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕೆ ಸಂತೋಷ್ ಹೇಳಿದರು. ಕೇರಳದ ಮೇಲೆ ಮುಂಗಾರು ಆರಂಭಕ್ಕೆ ಮತ್ತು ಅದರ ಉತ್ತರದ ಚಲನೆಗೆ ಅನುಕೂಲಕರವಾಗಿದೆ ಎಂದು ಹವಾಮಾನ ತಜ್ಞರು ಸೂಚಿಸಿದರು.

ರಾಜ್ಯದ 8 ಕಡೆಗಳಲ್ಲಿ 2.4 ಎಂಎಂ ಮಳೆ

ರಾಜ್ಯದ 8 ಕಡೆಗಳಲ್ಲಿ 2.4 ಎಂಎಂ ಮಳೆ

ಹವಾಮಾನ ಸಂಸ್ಥೆ ನಿಗಪಡಿಸಿದ ಮಾನದಂಡಗಳನ್ನು ಪೂರೈಸಿದ ನಂತರ ಭಾರತೀಯ ಹವಾಮಾನ ಇಲಾಖೆಯು ಕೇರಳದ ಮೇಲೆ ಮಾನ್ಸೂನ್ ಆಗಮನವನ್ನು ಘೋಷಿಸುತ್ತಿತ್ತು. ಮಾನದಂಡಗಳ ಪ್ರಕಾರ, ಕೇರಳ ಮತ್ತು ಕರ್ನಾಟಕದಲ್ಲಿನ 14 ನಿಗದಿತ ಸ್ಥಳಗಳಲ್ಲಿ ಕನಿಷ್ಠ 8 ಎರಡು ದಿನಗಳಲ್ಲಿ 2.4 mm ಗಿಂತ ಹೆಚ್ಚಿನ ಮಳೆಯನ್ನು ಆಗಲಿದೆ. ನಿರ್ದಿಷ್ಟ ವ್ಯಾಪ್ತಿಯ ಭೂ ತಾಪಮಾನ ಮತ್ತು ಗಾಳಿಯ ವೇಗವನ್ನು ಹೊಂದಿರುತ್ತದೆ.

ಮಾನ್ಸೂನ್ ಸಾಮಾನ್ಯವಾಗಿ ಆರಂಭವಾಗುವುದು ಯಾವಾಗ?

ಮಾನ್ಸೂನ್ ಸಾಮಾನ್ಯವಾಗಿ ಆರಂಭವಾಗುವುದು ಯಾವಾಗ?

ಸಾಮಾನ್ಯವಾಗಿ ಮಾನ್ಸೂನ್ ಜೂನ್ 1ರ ಸುಮಾರಿಗೆ ಕೇರಳಕ್ಕೆ ಆಗಮಿಸುತ್ತದೆ. ಜುಲೈ ಮಧ್ಯದ ವೇಳೆಗೆ ಭಾರತದ ಉಳಿದ ಭಾಗಗಳನ್ನು ಆವರಿಸುತ್ತದೆ, ರಾಜ್ಯದಲ್ಲಿ ಸುಮಾರು 204 ಸೆಂ.ಮೀ ವಾರ್ಷಿಕ ಮಳೆಯನ್ನು ತರುತ್ತದೆ, ಆದರೆ ಈಶಾನ್ಯ ಮಾನ್ಸೂನ್ ಕೇರಳದಲ್ಲಿ ಸುಮಾರು 49 ಸೆಂ.ಮೀ ಮಳೆಯನ್ನು ನೀಡುತ್ತದೆ. ಇದರ ಮಧ್ಯೆ, ರಾಜ್ಯವು ಬೇಸಿಗೆ ಕಾಲದಲ್ಲಿ ಶೇ.69 ಹೆಚ್ಚುವರಿ ಮಳೆಯನ್ನು ದಾಖಲಿಸಿದೆ. ಮಾರ್ಚ್ 1 ರಿಂದ ಮೇ 12 ರವರೆಗಿನ ದೀರ್ಘಾವಧಿಯ ಸರಾಸರಿ 20.09 cm ಗೆ 33.88 cm ಮಳೆ ಆಗುತ್ತದೆ.

English summary
Monsoon onset over Andaman likely on May 15, may reach Kerala early. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X