• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಡೆಲ್‌, ನಟಿ ಸಹನಾ ಸಜದ್‌ ಅನುಮಾನಾಸ್ಪದ ರೀತಿಯಲ್ಲಿ ಸಾವು

|
Google Oneindia Kannada News

ತಿರುವನಂತಪುರ ಮೇ 11: ಕೇರಳದ ಕೊಯಿಕ್ಕೋಡ್‌ನ ಪರಂಬಿಲ್‌ ಬಜಾರ್‌ನ ಬಾಡಿಗೆ ಮನೆಯೊಂದರಲ್ಲಿ ಕಾಸರಗೋಡಿನ ಮಾಡೆಲ್‌, ನಟಿ ಸಹನಾ ಸಜದ್‌(21) ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿಇಂದು (ಶುಕ್ರವಾರ) ಪತ್ತೆಯಾಗಿದೆ. ಪ್ರಕರಣ ಸಂಬಂಧ ಸಹನಾ ಅವರ ಪತಿ ಸಜದ್‌ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಸಹನಾ ಪೋಷಕರು ಕೊಲೆಯ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಸಜದ್‌ ವಿರುದ್ಧ ಕೊಯಿಕ್ಕೋಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುರುವಾರ ರಾತ್ರಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ತನಿಖೆ ನಂತರ ಪ್ರಕರಣದ ಸತ್ಯಾಂಶ ಹೊರಬೀಳಬೇಕಿದೆ.

ಕಾಸರಗೋಡು ಜಿಲ್ಲೆಯ ಸಹನಾ ಮಾಡೆಲ್‌ ಕ್ಷೇತ್ರದಲ್ಲಿ ಮಿಂಚಿದ್ದರು. ತಮಿಳು ಸಿನಿಮಾ ಲೋಕದಲ್ಲಿ ಉದಯೋನ್ಮುಖ ನಟಿಯಾಗಿ ಇತ್ತೀಚೆಗಷ್ಟೇ ಕಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.

ಸಹನಾ ಒಂದೂವರೆ ವರ್ಷಗಳ ಹಿಂದೆ ಸಜದ್‌ ಜತೆಗೆ ಮದುವೆಯಾಗಿದ್ದರು. ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಲವು ಬಾರಿ ಸಹನಾ ಅವರನ್ನು ಕೊಲೆ ಮಾಡುವುದಾಗಿ ಪತಿ ಸಜದ್‌ ಬೆದರಿಕೆ ಹಾಕಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM

English summary
Model, actor Sahana Sajad found dead Kozhikode, husband taken into custody
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X