ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಗರ್ಭಗುಡಿ ಪ್ರವೇಶಿಸಿದರೇ 46 ವರ್ಷದ ಶ್ರೀಲಂಕಾ ಮಹಿಳೆ?

|
Google Oneindia Kannada News

Recommended Video

ಶಬರಿಮಲೆ ಗರ್ಭಗುಡಿ ಪ್ರವೇಶಿಸಿದರೇ ಶ್ರೀಲಂಕಾ ಮಹಿಳೆ? | Oneindia Kannada

ತಿರುವನಂತಪುರಂ, ಜನವರಿ 04: ಕೇರಳದ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿ ಸಾಕಷ್ಟು ವಿವಾದ ಸೃಷ್ಟಿಯಾದ ನಂತರ 46 ವರ್ಷ ವಯಸ್ಸಿನ ಶ್ರೀಲಂಕಾ ಮಹಿಳೆಯೊಬ್ಬರು ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಶ್ರೀಲಂಕಾ ಪಾಸ್ ಪೋರ್ಟ್ ಅನ್ನು ಹೊಂದಿದ್ದ ಶಶಿಕಲಾ ಎಂಬ ಮಹಿಳೆ, ಸಂಪ್ರದಾಯದಂತೆ ಶಬರಿಮಲೆ ದೇವಾಲಯದ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಘಟನೆಯ ಸಿಸಿಟಿವಿ ಫೂಟೇಜ್ ಲಭ್ಯವಾಗಿದ್ದು, ಶಶಿಕಲಾ ಅವರು ದೇವಾಲಯ ಪ್ರವೇಶಿಸಿದ್ದು ಸತ್ಯ ಎಂದು ಪೊಲೀಸರೇ ಖಚಿತಪಡಿಸಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಕೇರಳ ಬಂದ್‌: ಶಬರಿಮಲೆ ಬೂದಿ ಮುಚ್ಚಿದ ಕೆಂಡಹಿಂಸಾಚಾರಕ್ಕೆ ತಿರುಗಿದ ಕೇರಳ ಬಂದ್‌: ಶಬರಿಮಲೆ ಬೂದಿ ಮುಚ್ಚಿದ ಕೆಂಡ

ಗುರುವಾರ ರಾತ್ರಿ 9:30 ರ ಸಮಯಕ್ಕೆ ಅಯ್ಯಪ್ಪನ ದರ್ಶನ ಪಡೆದ ಶಶಿಕಲಾ ಸುಮಾರು 11 ಗಂಟೆಯ ಹೊತ್ತಿಗೆ ಸುರಕ್ಷಿತವಾಗಿ ಪಂಪಾಕ್ಕೆ ಹಿಂದಿರುಗಿದ್ದಾರೆ ಎನ್ನಲಾಗಿತ್ತು.

Media report says a Sri Lankan woman enters sanctum in Sabarimala temple, She denies

10 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಅವರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.

ಬೇಕಿದ್ದರೆ ಶಬರಿಮಲೆ ಮುಖ್ಯ ಅರ್ಚಕ ರಾಜೀನಾಮೆ ನೀಡಲಿ: ಕೇರಳ ಸಿಎಂಬೇಕಿದ್ದರೆ ಶಬರಿಮಲೆ ಮುಖ್ಯ ಅರ್ಚಕ ರಾಜೀನಾಮೆ ನೀಡಲಿ: ಕೇರಳ ಸಿಎಂ

ಕನಕಗದುರ್ಗಾ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಿದ ನಂತರ ದೇವಾಲಯವನ್ನು ಮುಚ್ಚಿ ಶುದ್ಧೀಕರಣ ಕಾರ್ಯ ಮಾಡಲಾಗಿತ್ತು. ಇದೀಗ ಶಶಿಕಲಾ ಎಂಬ ಮಹಿಳೆಯೂ ದೇವಾಲಯ ಪ್ರವೇಶಿಸಿದ್ದಾರೆ. ಆದರೆ ಅವರು ತಮಗೆ ಋತುಬಂಧವಾಗಿದ್ದು, ಅದರ ವೈದ್ಯಕೀಯ ಪ್ರಮಾಣಪತ್ರವೂ ಇದೆ. ತಾನು ಋತುಮತಿಯಾಗುತ್ತಿಲ್ಲವಾದ್ದರಿಂದ ದೇವಾಲಯಕ್ಕೆ ಆಗಮಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ವರದಿ ತಳ್ಳಿಹಾಕಿದ ಶಶಿಕಲಾ

ಆದರೆ ಈ ವರದಿಯನ್ನು ಶಶಿಕಲಾ ತಳ್ಳಿಹಾಕಿದ್ದು, ತಾವು ಗರ್ಭಗುಡಿ ಪ್ರವೇಶಿಸುವುದಕ್ಕೆಂದು ಬಂದಿದ್ದು ಸತ್ಯ. ಅದೂ ಅಲ್ಲದೆ, ವೈದ್ಯಕೀಯ ವರದಿಯನ್ನೂ ನಾನು ನೀಡಿದ್ದೆ. ಆದರೆ ಪೊಲೀಸರು ನನ್ನನ್ನು ತಡೆದು, ವಾಪಸ್ ಕಳಿಸಿದರು ಎಂದು ಅವರು ಸ್ಪಷ್ಟನೆ ನೀಡಿದ್ದರು.

English summary
Some media report said, a 46-year-old Sri Lankan woman offered prayers at the sanctum in Sabarimala temple on late Thursday. But She denied the news, and told police stopped her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X