ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಕೇರಳದಲ್ಲಿ ಹೋಟೆಲ್ ಬುಕಿಂಗ್ ಸ್ಥಗಿತ

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 4: ಕೇರಳದಲ್ಲಿ 3 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಬುಕಿಂಗ್ ಸ್ಥಗಿತಗೊಳಿಸಿದ್ದಾರೆ.

ಕೇರಳ ಸರ್ಕಾರವು ರಾಜ್ಯ ವಿಪತ್ತು ಘೋಷಿಸಿದ ಬಳಿಕ ರಾಜ್ಯ ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಈ ನಿರ್ಧಾರ ಪ್ರಕಟಿಸಿದ್ದಾರೆ.

ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ

ಸಾಮಾನ್ಯವಾಗಿ ಫೆಬ್ರವರಿ ಮಾರ್ಚ್‌ನಲ್ಲಿ ಕೇರಳಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಎರಡು ತಿಂಗಳು ಹೋಟೆಲ್‌ ಬುಕಿಂಗ್ ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

Mass Cancellation Of Hotel Bookings In Kerala

ಕೇರಳದಲ್ಲಿ ನಿಪಾಹ್, ಪ್ರವಾಹದ ನಂತರ ಇದೀಗ ಕೊರೊನಾ ವೈರಸ್ ಲಗ್ಗೆ ಇಟ್ಟಿದೆ.ಕೇರಳದಲ್ಲಿ ಇದುವರೆಗೆ 3 ಪ್ರಕರಣಗಳು ದೃಢಪಟ್ಟಿವೆ. 84 ಜನರ ಆರೋಗ್ಯದ ಮೇಲೆ ಕಣ್ಗಾವಲು ಇಡಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ರಾಜ್ಯ ವಿಪತ್ತು ಎಂದು ಘೋಷಣೆ ಮಾಡಿದೆ.

Mass Cancellation Of Hotel Bookings In Kerala

ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಕೊರೊನಾವನ್ನು ತಡೆಗಟ್ಟಲು ಬೇಕಾದ ತುರ್ತು ಕ್ರಮಗಳನ್ನು ಕೈಗೊಳ್ಳುವ ಉಸ್ತುವಾರಿಯನ್ನು ಈ ಸಮಿತಿಯೇ ನೋಡಿಕೊಳ್ಳುತ್ತಿದೆ.

English summary
A Day After the Kerala Government Declared the novel Coronavirus as State Calamity. Tourism Sector as hotel bookings have suffered Mass cancellation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X