ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ದೇಶಕನಿಂದ ಜೀವ ಬೆದರಿಕೆ ಇದೆ: ಸ್ಟಾರ್ ನಟಿಯಿಂದ ದೂರು

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 22: 'ಒಡಿಯನ್' ಚಿತ್ರದ ನಿರ್ದೇಶಕ ಹಾಗೂ ಪತ್ರಕರ್ತರೊಬ್ಬರ ಮೇಲೆ ಸ್ಟಾರ್ ನಟಿಯೊಬ್ಬರು ಬೆದರಿಕೆ ಹಾಗೂ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಮಲಯಾಳಂ ಚಿತ್ರರಂಗದ ನಟಿ ಮಂಜು ವಾರಿಯರ್ ಅವರು ಕೇರಳದ ಡಿಜಿಪಿ ಲೋಕನಾಥ್ ಬೆಹರಾ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ಒಡಿಯನ್ ಚಿತ್ರ ನಿರ್ದೇಶಕ ವಿ.ಎ.ಶ್ರೀಕುಮಾರ ಮೆನನ್, ತೆಹೆಲ್ಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತ ಮ್ಯಾಥ್ಯೂ ಸ್ಯಾಮುಯಲ್ ಅವರಿಂದ ನನಗೆ ಜೀವ ಬೆದರಿಕೆಯಿದೆ ಎಂದು ದೂರಿನಲ್ಲಿ ಮಂಜು ಹೇಳಿದ್ದಾರೆ. ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ನಟ ದಿಲೀಪ್ ಮಾಜಿ ಪತ್ನಿ, ಸೂಪರ್ ಸ್ಟಾರ್ ನಟಿ ಚುನಾವಣಾ ಕಣಕ್ಕೆನಟ ದಿಲೀಪ್ ಮಾಜಿ ಪತ್ನಿ, ಸೂಪರ್ ಸ್ಟಾರ್ ನಟಿ ಚುನಾವಣಾ ಕಣಕ್ಕೆ

2018ರ ಡಿಸೆಂಬರ್ ನಲ್ಲಿ ತೆರೆ ಕಂಡಿದ್ದ ಒಡಿಯನ್ ಚಿತ್ರದ ನಿರ್ದೇಶಕ ಶ್ರೀಕುಮಾರ್ ಅವರು ಸೈಬರ್ ಮಂಜು ವಾರಿಯರ್ ಫೌಂಡೇಶನ್ ಹೆಸರಿನ ಲೆಟರ್ ಪ್ಯಾಡ್ ಹಾಗೂ ಬ್ಲಾಂಕ್ ಚೆಕ್ ಗಳನ್ನು ದುರುಪಯೋಗ ಮಾಡಿದ್ದಾರೆ.

Manju warrier files Complaint against Director Shrikumar Menon

ಶ್ರೀಕುಮಾರ್ ಅವರು ವ್ಯವಸ್ಥಿತವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಅದಕ್ಕೆ ತಕ್ಕ ಸಾಕ್ಷಿ ಒದಗಿಸಿದ್ದಾರೆ. ಆಡಿಯೋ ಕ್ಲಿಪ್ಪಿಂಗ್, ಮೊಬೈಲ್ ಕರೆ ರೆಕಾರ್ಡಿಂಗ್,

ಶಿವಕುಮಾರ್ ಮೆನನ್ ನಿರ್ದೇಶನದ ಒಡಿಯನ್ ಚಿತ್ರವಲ್ಲದೆ, ಕಲ್ಯಾಣ್ ಜ್ಯುವೆಲ್ಲರಿ ಜಾಹೀರಾತಿನಲ್ಲೂ ಮಂಜು ನಟಿಸಿದ್ದಾರೆ. ಮೆನನ್ ಹಾಗೂ ಪತ್ರಕರ್ತ ಮ್ಯಾಥ್ಯೂ ಅವರು ಸಂಚು ಮಾಡಿ ತಮ್ಮ ವೆಬ್ ತಾಣದಲ್ಲಿ ವ್ಯವಸ್ಥಿತವಾಗಿ ಸೈಬರ್ ದಾಳಿ ನಡೆಸಿದ್ದಾರೆ ಎಂದು ಮಂಜು ಹೇಳಿದ್ದಾರೆ.

'ನಟಿ ಮೇಲೆ ನಡೆದಿದ್ದು ವ್ಯವಸ್ಥಿತವಾದ ಹಲ್ಲೆ''ನಟಿ ಮೇಲೆ ನಡೆದಿದ್ದು ವ್ಯವಸ್ಥಿತವಾದ ಹಲ್ಲೆ'

ಒಡಿಯನ್ ಚಿತ್ರದ ವೈಫಲ್ಯಕ್ಕೆ ಮಂಜು ಕಾರಣ ಎಂಬಂತೆ ಶಿವಕುಮಾರ್ ಬಿಂಬಿಸಲು ಯತ್ನಿಸಲಾಯಿತು. ಮಂಜು ಅವರ ಮಾಜಿ ಪತಿ ದಿಲೀಪ್ ಅವರ ಮೇಲೂ ಆರೋಪ ಹೊರೆಸಲಾಯಿತು. 2017ರ ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲು ವಾಸಿಯಾಗಿದ್ದ ದಿಲೀಪ್ ಅವರು ತಮ್ಮ ಮಾಜಿ ಪತ್ನಿ ಮಂಜು ವಿರುದ್ಧ ಸೇಡು ತೀರಿಸಿಕೊಳ್ಳಲು ಒಡಿಯನ್ ಚಿತ್ರ ಸೋಲುವಂತೆ ಮಾಡಿದರು ಎಂದು ಕೂಡಾ ವಿಷಯ ಹರಡಿಸಲಾಯಿತು.

Manju warrier files Complaint against Director Shrikumar Menon

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಪರ ದನಿಯಾಗಿರುವ ಮಂಜು ಅವರು ಡಬ್ಲ್ಯೂಸಿಸಿ ಸಂಘಟನೆ ಸ್ಥಾಪಕರಲ್ಲಿ ಒಬ್ಬರು. ದಿಲೀಪ್ ಪರ ನಿಂತ ಅಲ್ಲಿನ ಚಿತ್ರರಂಗ ಮಂಡಳಿ (AMMA) ವಿರುದ್ಧ ಮಂಜು ಹೋರಾಟ ನಡೆಸಿದ್ದರು.

ಶ್ರೀಕುಮಾರ್ ಪ್ರತಿಕ್ರಿಯೆ:
"ಮಂಜು ಅವರು ತಾವು ನಡೆದ ಬಂದ ಹಾದಿ ಮರೆತ್ತಿದ್ದಾರೆ. ಚಿತ್ರರಂಗದಿಂದ ದೂರಾಗಿದ್ದ ಮಂಜು ಅವರಿಗೆ ಅವಕಾಶ ನೀಡಿದ್ದು ಯಾರು ಎಂಬುದು ನೆನಪಿಲ್ಲವೇ? ಮನೆ ತೊರೆದಾಗ 1,500 ರು ಮಾತ್ರ ನಿಮ್ಮ ಬಳಿ ಇತ್ತು. ಜಾಹೀರಾತಿನಲ್ಲಿ ನಟಿಸಲು 25 ಲಕ್ಷ ರು ಚೆಕ್ ನೀಡಿದೆ. ಸಂತೋಷದಿಂದ ಆಗ ಕಣ್ಣೀರಿಟ್ಟು, ದೇವರು ಕಳಿಸಿದ ದೇವದೂತ ಎಂದು ನನ್ನನ್ನು ಹೊಗಳಿದ್ದು ನೆನಪಿಲ್ಲವೇ?" ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

English summary
Manju warrier files Complaint with Kerala DGP Loknath Behera against Director VA Shrikumar Menon, journalist Mathew Samuel. Manju alleged threat and defame from duo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X