ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಗುಣಮುಖನಾದ ವ್ಯಕ್ತಿ ಆತ್ಮಹತ್ಯೆಗೆ ಶರಣು!

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 26: ಕೋವಿಡ್‌ನಿಂದ ಗುಣಮುಖನಾಗಿದ್ದ ವ್ಯಕ್ತಿ ಡಿಸ್ಚಾರ್ಜ್ ಆಗಬೇಕಾದ ದಿನವೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ಸಹೋದರ ಸಾವಿನಿಂದ ನೊಂದಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

38 ವರ್ಷದ ವ್ಯಕ್ತಿ ತಿರುವನಂತಪುರಂನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋವಿಡ್‌ನಿಂಗ ಚೇತರಿಸಿಕೊಂಡಿದ್ದ ವ್ಯಕ್ತಿಯನ್ನು ಭಾನುವಾರ ಡಿಸ್ಚಾರ್ಜ್ ಮಾಡಬೇಕಿತ್ತು.

ಕೇರಳ, ತಮಿಳುನಾಡಿನಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ: ಸಿ.ಟಿ ರವಿ ಕೇರಳ, ತಮಿಳುನಾಡಿನಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ: ಸಿ.ಟಿ ರವಿ

ಅಕ್ಟೋಬರ್ 3ರಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ. ಶುಕ್ರವಾರ ಮನೋ ವೈದ್ಯರು ಚಿಕಿತ್ಸೆ ನೀಡಲು ಬಂದಾಗ ಬಾತ್‌ ರೂಂನಲ್ಲಿ ಅಡಗಿ ಕುಳಿತಿದ್ದ. ಭಾನುವಾರವೂ ಬಾತ್‌ ರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು; 63 ದಿನ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತ ಮಹಿಳೆ ಬೆಂಗಳೂರು; 63 ದಿನ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತ ಮಹಿಳೆ

Man Recovered From COVID Commits Suicide

ಬಿಜೈ ಎಂಬ ರೋಗಿ ಆಸ್ಪತ್ರೆಗೆ ದಾಖಲಾಗುವ ಎರಡು ದಿನಗಳ ಹಿಂದೆ ಸಹೋದರನನ್ನು ಕಳೆದುಕೊಂಡಿದ್ದ. ಇದರಿಂದ ಆತ ಆಘಾತಗೊಂಡಿದ್ದ. ಕೋವಿಡ್ ಸೋಂಕು ತಗುಲಿದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೋವಿಡ್ ಭೀತಿಯ ನಡುವೆ ಫ್ಲೂ ಲಸಿಕೆ ಪಡೆದುಕೊಳ್ಳಲು ಜನರ ದೌಡು ಕೋವಿಡ್ ಭೀತಿಯ ನಡುವೆ ಫ್ಲೂ ಲಸಿಕೆ ಪಡೆದುಕೊಳ್ಳಲು ಜನರ ದೌಡು

ಇದುವರೆಗೂ ತಿರುವನಂತಪುರಂನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕೋವಿಡ್ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Recommended Video

Rishab Pant ಅವರನ್ನು ODI ಹಾಗು T20 ಇಂದ ಕೈ ಬಿಟ್ಟ BCCI | Oneindia Kannada

ಕೇರಳದಲ್ಲಿ ಸೋಮವಾರ 4,287 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 93,747.

English summary
38 year old man who recovered from COVID 19 committed suicide in Thiruvananthapuram medical college hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X