ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವತ್ತೇಳು ವರ್ಷ ಕುಟುಂಬದಿಂದ ದೂರವಿದ್ದ ವ್ಯಕ್ತಿಯನ್ನು ಒಗ್ಗೂಡಿಸಿದ ಫೇಸ್ ಬುಕ್

|
Google Oneindia Kannada News

ಕೋಳಿಕ್ಕೋಡ್ (ಕೇರಳ), ಮೇ 17: ಫೇಸ್ ಬುಕ್ ಪೋಸ್ಟ್ ವೊಂದು ವ್ಯಕ್ತಿಯೊಬ್ಬರು ತಮ್ಮ ಕುಟುಂಬದ ಜತೆ ಸೇರಲು ನೆರವಾದ ಘಟನೆ ಇದು. ನಾಲ್ಕು ದಶಕದ ನಂತರ ತಮ್ಮ ಕುಟುಂಬ ಸದಸ್ಯರ ಜತೆಗೆ ಒಂದಾಗಿರುವ ಈ ವ್ಯಕ್ತಿಯ ಹೆಸರು ವಯಲಪಿಡಿಯಲ್ ಮೊಹ್ಮದ್. ಅವರು ಮೂಲತಃ ಮದವೂರಿನವರು.

ಮೂವತ್ತೇಳು ವರ್ಷದ ಹಿಂದೆ ಮೊಹಮ್ಮದ್ ಕೊನೆ ಬಾರಿಗೆ ಕಂಡಿದ್ದು ಮದವೂರಿನಲ್ಲಿ. ಆ ನಂತರ ಅವರನ್ನು ಹಲವು ಸ್ಥಳಗಳಲ್ಲಿ ಹುಡುಕಲಾಗಿತ್ತು. ಅದರೆ ಏನೂ ಪ್ರಯೋಜನ ಆಗಿರಲಿಲ್ಲ. ಆಗ ಅವರ ಮಕ್ಕಳ ಜತೆಗೆ ಪತ್ನಿ ಏಳು ತಿಂಗಳ ಗರ್ಭಿಣಿ. ಕೆಲವು ತಿಂಗಳ ನಂತರ ಆ ಕುಟುಂಬಕ್ಕೆ ಮೊಹ್ಮದ್ ಜತೆ ಸಂಪರ್ಕವೇ ಇಲ್ಲದಂತಾಯಿತು.

29 ವರ್ಷದ ನಂತರ ಕಾಶ್ಮೀರಕ್ಕೆ ಹಿಂತಿರುಗಿದ ರೋಶನ್ ಗೆ ಭರ್ಜರಿ ಸ್ವಾಗತ29 ವರ್ಷದ ನಂತರ ಕಾಶ್ಮೀರಕ್ಕೆ ಹಿಂತಿರುಗಿದ ರೋಶನ್ ಗೆ ಭರ್ಜರಿ ಸ್ವಾಗತ

ಕರ್ನಾಟಕದ ಹುಬ್ಬಳ್ಳಿ ಸೇರಿ ನಾನಾ ಕಡೆ ಹುಡುಕಾಡಿದರೂ ಯಾವ ಮಾಹಿತಿಯೂ ಸಿಗಲಿಲ್ಲ. ವರ್ಷಗಳು ಉರುಳಿತು. ಮೊಹ್ಮದ್ ರ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಯಿತು. ಈಗಂತೂ ಅವರ ಮೊಮ್ಮಕ್ಕಳಿಗೂ ಮದುವೆ ಆಗಿದೆ. ಈ ಕುಟುಂಬ ಎಲ್ಲ ಸಂತಸದ ಕ್ಷಣಗಳಲ್ಲೂ ಮೊಹ್ಮದ್ ಇರಬೇಕಿತ್ತು ಎಂದು ಹಳಹಳಿಸಿದೆ.

Facebook

ಪಟ್ಟಂಬಿಯ ರಯೀಜ್ ಎಂಬುವರು ಕರ್ನಾಟಕದ ಬೆಳಗಾವಿಯಲ್ಲಿ ಬೇಕರಿ ನಡೆಸುತ್ತಾರೆ. ಅವರಿಗೆ ಮೊಹ್ಮದ್ ರ ಹಿಂದಿನ ಬದುಕಿನ ಬಗ್ಗೆ ಗೊತ್ತಾಗಿದೆ. ನಾನು ಮತ್ತೆ ನಿಮ್ಮ ಕುಟುಂಬದ ಜತೆ ಒಂದು ಮಾಡುತ್ತೇನೆ ಎಂದು ಹೇಳಿದ್ದಾರೆ. ಮೊಹ್ಮದ್ ರ ಬದುಕಿನ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದು, ಹಾಕಿದ್ದಾರೆ. ಲೋಕತಾಂತ್ರಿಕ ಯುವ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಸಲೀಂ ಮದವೂರು ಮೂಲಕ ಮೊಹ್ಮದ್ ಕುಟುಂಬವನ್ನು ಹುಡುಕಲು ಸಾಧ್ಯವಾಗಿದೆ.

ಮೊಹ್ಮದ್ ರ ಮಕ್ಕಳು, ಸೋದರರನ್ನು ಸಲೀಮ್ ಬೆಳಗಾವಿಗೆ ಕರೆತಂದಿದ್ದಾರೆ. ಇಷ್ಟು ವಯಸ್ಸಾದ ಮೇಲೆ, ಇಷ್ಟು ವರ್ಷ ಆದ ಮೇಲೆ ತನ್ನ ಕುಟುಂಬದವರು ಸ್ವೀಕಾರ ಮಾಡುತ್ತಾರಾ ಎಂಬ ಗೊಂದಲದಲ್ಲಿದ್ದ ಮೊಹ್ಮದ್ ಗೆ ಅಚ್ಚರಿಯ ಅನುಭವ ಆಗಿದೆ. ಸದ್ಯಕ್ಕೆ ಗಲ್ಫ್ ನಲ್ಲಿರುವ ಮೊಹ್ಮದ್ ರ ಮಗ ಫೈಸಲ್ ಕೂಡ ಫೋನ್ ನಲ್ಲಿ ಮಾತನಾಡಿದ್ದಾರೆ.

27 ವರ್ಷದ ನಂತರ ಕೋಮಾ ಸ್ಥಿತಿಯಿಂದ ಎದ್ದ ಮಹಿಳೆ, ನೆನಪಿದ್ದಿದ್ದು ಮಗನ ಹೆಸರೊಂದೆ!27 ವರ್ಷದ ನಂತರ ಕೋಮಾ ಸ್ಥಿತಿಯಿಂದ ಎದ್ದ ಮಹಿಳೆ, ನೆನಪಿದ್ದಿದ್ದು ಮಗನ ಹೆಸರೊಂದೆ!

ಈ ನಾಲ್ಕು ದಶಕದ ಅಲೆದಾಟದಲ್ಲಿ ಮೊಹ್ಮದ್ ಹಲವಾರು ಸ್ಥಳಗಳನ್ನು ಕಂಡಿದ್ದಾರೆ. ಒಂಬತ್ತು ಭಾಷೆಗಳನ್ನು ಸುಲಭವಾಗಿ ಮಾತಾಡುತ್ತಾರೆ. ತನ್ನ ತವರು ರಾಜ್ಯದ ಬಗ್ಗೆ ಸದ್ಯಕ್ಕೆ ಅಷ್ಟೇನೂ ಗೊತ್ತಿಲ್ಲದ ಮೊಹ್ಮದ್ ಮತ್ತೆ ಹೊಸ ಬದುಕನ್ನು ಆರಂಭಿಸುವ ಉಮೇದಿನಲ್ಲಿದ್ದಾರೆ.

English summary
Man re unite with family after 37 years by face book. Here is the story of Mohammad Madavoor who separated from family 37 years ago. Now united with the help of face book. Know, how?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X