ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಯಾಳ ಚಿತ್ರರಂಗದ ಯುವ ನಿರ್ದೇಶಕಿ ಶವವಾಗಿ ಪತ್ತೆ

|
Google Oneindia Kannada News

ತಿರುವನಂತಪುರಂ (ಕೇರಳ), ಫೆಬ್ರವರಿ 25: ಮಲಯಾಳಂ ಚಿತ್ರರಂಗದ ಯುವ ನಿರ್ದೇಶಕಿ ಕೇರಳದ ತಿರುವನಂತಪುರಂನಲ್ಲಿ ಇರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ಇಪ್ಪತ್ತೆಂಟು ವರ್ಷದ ನಯನಾ ಸೂರ್ಯನ್ ಮಲಯಾಳಂ ಚಿತ್ರರಂಗದ ಹಲವಾರು ಹೆಸರಾಂತ ನಿರ್ದೇಶಕರ ಜತೆಗೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.

ಅವರಿದ್ದ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರವೇ ಕಾರಣ ಗೊತ್ತಾಗಲಿದೆ. ಕಳೆದ ಕೆಲ ಸಮಯದಿಂದ ಡಯಾಬಿಟೀಸ್ (ಮಧುಮೇಹ) ಚಿಕಿತ್ಸೆ ಪಡೆಯುತ್ತಿದ್ದರು. ನಯನಾ ತಾಯಿ ಹಲವು ಬಾರಿ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆದರೆ ಅದನ್ನು ಸ್ವೀಕರಿಸಿದಿದ್ದಾಗ ಆಕೆಯ ಸ್ನೇಹಿತರಿಗೆ ತಿಳಿಸಿದ್ದಾರೆ. ಅಪಾರ್ಟ್ ಮೆಂಟ್ ನ ಬೆಡ್ ರೂಮ್ ನಲ್ಲಿ ಶವ ಪತ್ತೆಯಾಗಿದೆ.

ಕಾಸರಗೋಡು ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ:CPM ಮುಖಂಡ ಪೊಲೀಸ್ ವಶಕ್ಕೆಕಾಸರಗೋಡು ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ:CPM ಮುಖಂಡ ಪೊಲೀಸ್ ವಶಕ್ಕೆ

'ಕ್ರಾಸ್ ವರ್ಡ್' ಎಂಬ ಸಿನಿಮಾದ ಮೂಲಕ ನಯನಾ ಅವರು ಸ್ವತಂತ್ರ ನಿರ್ದೇಶಕಿ ಆದರು. ಹತ್ತು ಕತೆಗಳನ್ನು ಒಳಗೊಂಡಿದ್ದ ಆ ಸಿನಿಮಾದಲ್ಲಿ 'ಪಕ್ಷಿಕಳುದೆ ಮನನಂ' ಎಂಬುದಕ್ಕೆ ಚಿತ್ರಕತೆ ಮಾಡಿಕೊಂಡು, ನಿರ್ದೇಶನ ಮಾಡಿದ್ದರು. ಅದಕ್ಕೂ ಮುನ್ನ ಲೆನಿನ್ ರಾಜೇಂದ್ರನ್, ಕಮಲ್, ಜೀತು ಜೋಸೆಫ್ ಹಾಗೂ ಡಾ.ಬಿಜುರಂಥ ಹೆಸರಾಂತ ನಿರ್ದೇಶಕರಿಗೆ ಸಹ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದರು.

 Malayalam Young filmmaker Nayana Sooryan dies

ನಯನಾ ಅವರು ಹಲವು ಜಾಹೀರಾತು ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ದೇಶದ ಹೊರಗೂ ನಿರ್ದೇಶಿಸಿದ್ದರು. ನಯನಾ ಅವರ ಆಪ್ತ ಮೂಲಗಲ ಪ್ರಕಾರ, ಜನವರಿ ಹದಿನಾಲ್ಕರಂದು ಅನಾರೋಗ್ಯದಿಂದ ನಿರ್ದೇಶಕ ಲೆನಿನ್ ರಾಜೇಂದ್ರನ್ ದಿಢೀರ್ ಸಾವನ್ನಪ್ಪಿದ್ದು ಆಕೆ ಮನಸಿನ ಮೇಲೆ ಪರಿಣಾಮ ಬೀರಿತ್ತು. ರಾಜೇಂದ್ರನ್ ಅವರಿಗೆ ಸಹಾಯಕಿಯಾಗಿ ಚಿತ್ರರಂಗಕ್ಕೆ ನಯನಾ ಪದಾರ್ಪಣೆ ಮಾಡಿದ್ದರು.

English summary
A young Malayalam filmmaker was found dead at her home in Kerala's Thiruvananthapuram, police said on Monday. Nayana Sooryan, who had assisted several prominent directors in the industry, was found dead at her apartment yesterday. Sooryan's exact cause of death will be found only after her autopsy report is ready, police said. She was 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X