ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲವ್ ಜಿಹಾದ್'ನಿಂದ ನಮ್ಮ ಯುವತಿಯರ ರಕ್ಷಿಸಿ: ಕೇರಳ ಕ್ರೈಸ್ತರ ಮೊರೆ

|
Google Oneindia Kannada News

ತಿರುವನಂತಪುರ, ಜನವರಿ 16: 'ಲವ್ ಜಿಹಾದ್' ಇರುವುದು ಸತ್ಯ, ಕ್ರೈಸ್ತ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿ ಅವರ ಮತಾಂತರ ಮಾಡಿ ಇಸ್ಲಾಂ ಭಯೋತ್ಪಾದನೆಗೆ ಕಳಿಸಲಾಗುತ್ತಿದೆ ಎಂದು ಕೇರಳದ ಕ್ರೈಸ್ತ ಸಂಘಟನೆ ಆರೋಪಿಸಿದೆ.

ಸಿರೋ-ಮಲಬಾರ್ ಚರ್ಚ್‌ ಹೀಗೊಂದು ಹೇಳಿಕೆ ನೀಡಿದ್ದು, ಕಳೆದ ಎರಡು ವರ್ಷದಲ್ಲಿ ಕೇರಳದಿಂದ ಹೋಗಿ ಐಎಸ್‌ಐಎಸ್ ಭಯೋತ್ಪಾದನಾ ಸಂಘಟನೆ ಸೇರಿರುವ 21 ಮಂದಿ ಮಹಿಳೆಯರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕ್ರೈಸ್ತ ಯುವತಿಯರೇ ಆಗಿದ್ದಾರೆ ಎಂದು ಸಿರೋ-ಮಲಬಾರ್ ಚರ್ಚ್‌ ನ ಕಾರ್ಡಿನಲ್ ಜಾರ್ಜ್‌ ಅಲನ್ ಚೇರಿ ಹೇಳಿದ್ದಾರೆ.

ಮತ್ತೆ ಲವ್‌ ಜಿಹಾದ್ ಸದ್ದು: ಸಿಎಂ ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆಮತ್ತೆ ಲವ್‌ ಜಿಹಾದ್ ಸದ್ದು: ಸಿಎಂ ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆ

'ಕೇರಳದಲ್ಲಿ ಲವ್ ಜಿಹಾದ್ ಇದೆ ಹಾಗೂ ಅದು ಸತ್ಯವಾಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಕೇರಳದಲ್ಲಿ ಹಲವು ಕ್ರಿಶ್ಚಿಯನ್ ಹೆಣ್ಣು ಮಕ್ಕಳನ್ನು ಕೊಲ್ಲಲಾಗಿದೆ, ಅಥವಾ ಐಸಿಸ್‌ಗೆ ಸೇರ್ಪಡೆಗೊಳಿಸಲಾಗಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Love Jihad Is Real, Save Our Girls: Kerala Cristian Community

ಪೊಲೀಸರು ಈ ವಿಷಯದ ಬಗ್ಗೆ ಗಮನವಹಿಸಿಲ್ಲ, ನಾವು ಈ ಬಗ್ಗೆ ದೂರುಗಳನ್ನು ನೀಡಿದ್ದರೂ ಸಹ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಕಾರ್ಡಿನಲ್ ಆರೋಪಿಸಿದ್ದಾರೆ.

ಕೇರಳ: ಬಿಜೆಪಿ ಸೇರಿದ ಹಾದಿಯಾ ತಂದೆ ಅಶೋಕನ್ಕೇರಳ: ಬಿಜೆಪಿ ಸೇರಿದ ಹಾದಿಯಾ ತಂದೆ ಅಶೋಕನ್

ಕ್ರೈಸ್ತ ಸಂಘಟನೆಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇರಳ ಮುಸ್ಲಿಂ ಸಂಘಟನೆಗಳು ಮತ್ತು ಪಿಎಫ್‌ಐ, 'ಸಿಎಎ ವಿರುದ್ಧ ಸಂಘಟಿತ ಹೋರಾಟಕ್ಕೆ ಈ ರೀತಿಯ ಹೇಳಿಕೆಗಳು ಮಾರಕ' ಎಂದು ಹೇಳಿವೆ.

English summary
Kerala christian community said 'love jihad' is real. save our young girls from love jihad. He alleged that police not doing anything in this matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X