ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈನಾಡಿನಲ್ಲಿ ರಾಹುಲ್‌ ಗಾಂಧಿ ದಾಖಲೆ ಮುನ್ನಡೆ, ಅಮೇಥಿಯಲ್ಲಿ ಹಿನ್ನಡೆ

|
Google Oneindia Kannada News

ವೈನಾಡು, ಮೇ 23: ಕೇರಳದ ವೈನಾಡು ಲೋಕಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ದಾಖಲೆ ಪ್ರಮಾಣದ ಮುನ್ನಡೆ ದೊರೆತಿದೆ.

ಕೆಲವೇ ಸುತ್ತಿನ ಎಣಿಕೆ ಬಾಕಿ ಇರುವ ವೇಳೆಗೆ ರಾಹುಲ್ ಗಾಂಧಿ ಅವರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇದು ಕೇರಳದಲ್ಲಿ ಈವರೆಗಿನ ದಾಖಲೆ ಮುನ್ನಡೆ ಆಗಿದೆ.

ಮಹಾಘಟಬಂಧನಕ್ಕೆ ಕೈಕೊಟ್ಟ ಜಾತಿ ಲೆಕ್ಕಾಚಾರ: ಬಿಜೆಪಿಗೆ ಜಾಟ್ ಬೆಂಬಲ ಮಹಾಘಟಬಂಧನಕ್ಕೆ ಕೈಕೊಟ್ಟ ಜಾತಿ ಲೆಕ್ಕಾಚಾರ: ಬಿಜೆಪಿಗೆ ಜಾಟ್ ಬೆಂಬಲ

ರಾಹುಲ್ ಗಾಂಧಿ ಅವರು ಒಟ್ಟು 441277 ಮತಗಳನ್ನು ಗಳಿಸಿದ್ದರೆ, ಅವರ ಸಮೀಪ ಪ್ರತಿಸ್ಪರ್ಧಿ ಸಿಪಿಐನ ಪಿಪಿ.ಸುನೀರ್ ಅವರು 166806 ಮತಗಳನ್ನು ಗಳಿಸಿಕೊಂಡಿದ್ದಾರೆ.

vaLok Sabha election results 2019: Wayanad constituency updates

ಕೇರಳದಲ್ಲಿ ಈ ಹಿಂದೆ ದಿವಂಗತ ಇ ಮೊಹಮ್ಮದ್ ಅವರು 1.94 ಮತಗಳ ಅಂತರದ ಗೆಲುವು ಸಾಧಿಸಿದ್ದೇ ಈವರೆಗಿನ ಅತಿ ದೊಡ್ಡ ಅಂತರದ ಜಯವಾಗಿತ್ತು, ಆದರೆ ರಾಹುಲ್ ಗಾಂಧಿ ಈಗಾಗಲೇ ಆ ಅಂತರವನ್ನು ದಾಟಿ ದಾಖಲೆ ನಿರ್ಮಿಸಿದ್ದಾರೆ.

ಆದರೆ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರು ಅಲ್ಪ ಹಿನ್ನಡೆ ಅನುಭವಿಸಿದ್ದು, ಎದುರಾಳಿ ಬಿಜೆಪಿಯ ಸ್ಮೃತಿ ಇರಾನಿ ಅವರು 4000 ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ.

English summary
Lok Sabha election results 2019: In Gujrath's Gandhinagar BJP president Amit Shah leading by 1.5 lakh votes. he may win by very big margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X