ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವನಂತಪುರಂನಲ್ಲಿ ಕೋವಿಡ್ - 19 ಹೆಚ್ಚಳ; ಮತ್ತೆ ಲಾಕ್ ಡೌನ್

|
Google Oneindia Kannada News

ತಿರುವನಂತಪುರಂ, ಜುಲೈ 20 : ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ತಿರುವನಂತಪುರಂನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಪುಲುವಿಲ್ಲಾ ಸೇರಿದಂತೆ ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಕೇರಳ ಸರ್ಕಾರ ಶುಕ್ರವಾರ ಹೇಳಿತ್ತು.

ತಿರುವನಂತಪುರಂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಜುಲೈ 28ರ ಮಧ್ಯರಾತ್ರಿ ತನಕ ಲಾಕ್ ಡೌನ್ ಜಾರಿಯಲ್ಲಿರಲಿದೆ. ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ವಾಣಿಜ್ಯ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ

ಕೇರಳದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 12,481. ಇವುಗಳಲ್ಲಿ ತಿರುವನಂತಪುರಂನಲ್ಲಿಯೇ 2143 ಪ್ರಕರಗಳಿವೆ. ಭಾನುವಾರ ನಗರದಲ್ಲಿ 222 ಹೊಸ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ, ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ.

ಕರಾವಳಿ ಭಾಗದಲ್ಲಿ ಸಮುದಾಯಕ್ಕೆ ಹರಡಿದ ಕೋವಿಡ್ ಸೋಂಕು ಕರಾವಳಿ ಭಾಗದಲ್ಲಿ ಸಮುದಾಯಕ್ಕೆ ಹರಡಿದ ಕೋವಿಡ್ ಸೋಂಕು

Lockdown In Thiruvananthapuram Corporation In Kerala

ಕೇರಳ ಸರ್ಕಾರ ಪುಲುವಿಲ್ಲಾ ಸೇರಿದಂತೆ ತಿರುವನಂತರಪುರಂ ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಹೇಳಿತ್ತು. ಶುಕ್ರವಾರ 791 ಹೊಸ ಪ್ರಕರಣ ದಾಖಲಾಗಿದ್ದವು. ಇವುಗಳಲ್ಲಿ 532 ಪ್ರಕರಣಗಳು ಸ್ಥಳೀಯರಿಂದಲೇ ಹಬ್ಬಿತ್ತು.

ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ' ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ'

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾತನಾಡಿದ್ದರು. "ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗುತ್ತದೆ" ಎಂದು ಹೇಳಿದ್ದರು.

Lockdown In Thiruvananthapuram Corporation In Kerala

ತಿರುವನಂತಪುರಂ ನಗರ ಮತ್ತು ನಗರಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಗಳನ್ನು ಮೂರು ಝೋನ್‌ ಆಗಿ ವಿಂಗಡನೆ ಮಾಡಲಾಗಿದೆ. ಪ್ರತಿ ಝೋನ್‌ಗೆ ಹಿರಿಯ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

English summary
Entire Thiruvananthapuram Corporation in Kerala under strict lockdown up to 28th July. Covid-19 community spread confirmed in the coastal areas of Thiruvananthapuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X