• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್‌ ನಿಂದ ನನ್ನ ಕ್ಷೇತ್ರದಲ್ಲಿ ಕೊವಿಡ್ ಪ್ರಕರಣ ಕಡಿಮೆಯಾಗಿಲ್ಲ: ತರೂರ್

|

ತಿರುವನಂತಪುರಂ, ಜುಲೈ 28: ಕೊರೊನಾ ಸೋಂಕಿಗೆ ಲಾಕ್‌ಡೌನ್‌ನಿಂದ ಕಡಿವಾಣ ಹಾಕಬಹುದು ಎನ್ನುವ ಮಾತು ಸುಳ್ಳಾಗಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಲಾಕ್‌ಡೌನ್‌ನಿಂದಾಗಿ ನನ್ನ ಕ್ಷೇತ್ರ ತಿರುವನಂತಪುರಂನಲ್ಲಿ ಕೊವಿಡ್ 19 ನಿಯಂತ್ರಣಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು'ಕೇರಳ ಮುಖ್ಯ ಕಾರ್ಯದರ್ಶಿ ವಿಶ್ವ ಮೆಹ್ತಾ ಅವರ ಬಳಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಮಾತನಾಡಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಸಾಕಷ್ಟು ವಿಧಾನಸಭಾಕ್ಷೇತ್ರದಲ್ಲಿ ಮೂರು ವಾರಗಳ ಲಾಕ್‌ಡೌನ್‌ನಿಂದಾಗಿ ಕೊರೊನಾ ಸೋಂಕಿನ ಪ್ರಮಾಣ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬ ವಿಷಯ ತಿಳಿದುಬಂದಿದೆ' ಎಂದಿದ್ದಾರೆ.

ಸಂಪೂರ್ಣ ಲಾಕ್‌ಡೌನ್‌ ಬೇಡ ಎಂದ ಕೇರಳ ಕ್ಯಾಬಿನೆಟ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಲಾಕ್‌ಡೌನ್ ಸಡಿಲಿಕೆಯ ನಿಯಮವನ್ನು ಸಮಿತಿ ಪರಿಶೀಲಿಸುತ್ತಿದೆ ಎಂದಿದ್ದಾರೆ.ತಿರುವನಂತಪುರಂನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ನಿಯಮಗಳಲ್ಲಿ ಕೆಲವು ಸಡಿಲಿಕೆಗಳಿರಲಿವೆ.

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 702 ಹೊಸ ಪ್ರಕರಣಗಳು ಪತ್ತೆಯಾಗಿವೆ. 24 ದಿನ ಹಾಗೂ 13 ದಿನಗಳಿಗೆ ಹೋಲಿಸಿದರೆ ದುಪ್ಪಟ್ಟಾಗಿದೆ.

ಕೇರಳದಲ್ಲಿ ಒಟ್ಟು 19,727 ಪ್ರಕರಣಗಳಿವೆ 63 ಮಂದಿ ಸಾವನ್ನಪ್ಪಿದ್ದಾರೆ. 9611 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10,049 ಮಂದಿ ಗುಣಮುಖರಾಗಿದ್ದಾರೆ. 1.55 ಮಂದಿಯ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

English summary
The lockdown could not stem the rapid growth of coronavirus cases in Thiruvananthapuram; thus, people should be allowed to return to work, Congress MP Shashi Tharoor tweeted on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X