ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್‌ದೇವ್ ಬಳಿ ಯೋಗ ಕಲಿಯಿರಿ, ಪೆಟ್ರೋಲ್ ಬೆಲೆ 6 ಆಗುತ್ತದೆ: ತರೂರ್ ವ್ಯಂಗ್ಯ

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 17: ತೈಲ ಬೆಲೆಗಳ ಸತತ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ದೇಶದಾದ್ಯಂತ ಪೆಟ್ರೋಲ್ ಬೆಲೆ ಶತಕದ ಸಮೀಪ ಬಂದಿದೆ. ಕೆಲವು ರಾಜ್ಯಗಳಲ್ಲಿನ ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಈಗಾಗಲೇ 100 ರೂ ತಲುಪಿದೆ. ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಯೋಗ ಗುರು ಬಾಬಾ ರಾಮ್‌ದೇವ್ ಅವರ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡು ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಪೆಟ್ರೋಲ್ ಬಂಕ್ ಒಂದರ ಎದುರು ಬಾಬಾ ರಾಮ್‌ದೇವ್ ಅವರು ತಲೆಕೆಳಗಾಗಿ ಯೋಗಾಸನ ಮಾಡುತ್ತಿರುವ ವ್ಯಂಗ್ಯಚಿತ್ರವೊಂದನ್ನು ಶಶಿ ತರೂರ್ ಹಂಚಿಕೊಂಡಿದ್ದಾರೆ. ಅವರ ಎದುರಿನ ಫಲಕದಲ್ಲಿ ಲೀಟರ್‌ಗೆ 90 ರೂ ಎಂದು ಬರೆಯಲಾಗಿದೆ. ಈ ಚಿತ್ರದಲ್ಲಿ ಮಲಯಾಳಂ ಭಾಷೆಯಲ್ಲಿ ಅಡಿಶೀರ್ಷಿಕೆಯಿದ್ದು, ಅದನ್ನು ಶಶಿ ತರೂರ್ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದಾರೆ.

ಶತಕ ಮುಟ್ಟಿದ ಪೆಟ್ರೋಲ್ ಬೆಲೆ; ವೈರಲ್ ಆಯ್ತು ಈ ಫೋಟೊ...ಶತಕ ಮುಟ್ಟಿದ ಪೆಟ್ರೋಲ್ ಬೆಲೆ; ವೈರಲ್ ಆಯ್ತು ಈ ಫೋಟೊ...

'ಬಾಬಾ ರಾಮ್‌ದೇವ್ ಅವರಿಂದ ನೀವು ಯೋಗ ಪಾಠಗಳನ್ನು ಕಲಿತರೆ ನೀವು ಕೂಡ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ಕೇವಲ 6 ರೂಪಾಯಿಯಂತೆ ನೋಡಬಹುದು' ಎಂದು ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.

Learn Yoga Lessons From Baba Ramdev, You Could See Petrol Prices At Rs 06: Tharoor

ದೇಶದಲ್ಲಿ ಸತತ ಒಂಬತ್ತನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 26 ಪೈಸೆಯಷ್ಟು ತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು 2014ರಲ್ಲಿ ಆಡಳಿತ ನಡೆಸುತ್ತಿದ್ದಾಗ ಮತ್ತು ಈಗಿನ ಬಿಜೆಪಿ ಸರ್ಕಾರ ಅವಧಿಯಲ್ಲಿನ ತೈಲದ ಮೇಲಿನ ಕೇಂದ್ರ ಸುಂಕದ ವ್ಯತ್ಯಾಸವನ್ನು ತೋರಿಸಿದ್ದಾರೆ. 2014ರಲ್ಲಿ ಪೆಟ್ರೋಲ್ ಮೇಲೆ 10.7 ರೂ ಇದ್ದರೆ, ಡೀಸೆಲ್ ಮೇಲೆ 4.9 ರೂ ಕೇಂದ್ರ ಸುಂಕವಿತ್ತು. ಈಗ 2021ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಕೇಂದ್ರ ಸುಂಕ 32.9 ರೂ ಇದ್ದರೆ, ಡೀಸೆಲ್ ಸುಂಕ 31.8ರಷ್ಟಿದೆ ಎಂದು ಅವರು ತಿಳಿಸಿದ್ದಾರೆ.

English summary
Congress leader Shashi Tharoor on fuel price said, learn yoga lessons from Baba Ramdev, you too could see petrol prices at 06 rupees a litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X