ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

40 ವರ್ಷಗಳ ಬಳಿಕ ಮತ್ತೆ ಇತಿಹಾಸ ನಿರ್ಮಿಸಿದ ಪಿಣರಾಯಿ ವಿಜಯನ್

|
Google Oneindia Kannada News

ದೇವರ ನಾಡು ಎನಿಸಿಕೊಂಡಿರುವ ಕೇರಳದಲ್ಲಿ ಈ ಬಾರಿ ದೇವರ ಬಗ್ಗೆ ಭಾರಿ ಚರ್ಚೆಯಾಗಿತ್ತು. ಕೋವಿಡ್ 19 ನಿಯಂತ್ರಣ, ಶಬರಿಮಲೆ ನಡುವೆ ಸಂಭಾಳಿಸಲು ಹೆಣಗಾಡಿದ ಪಿಣರಾಯಿ ಸರ್ಕಾರ ಹಲವು ಹಗರಣಗಳ ಜಾಲದಲ್ಲೂ ಸಿಲುಕಿತ್ತು. ಆದರೆ, ಎಡಪಕ್ಷ ಸಿಪಿಐ(ಮಾರ್ಕ್ಸ್ ವಾದಿ) ಮತ್ತೊಮ್ಮೆ ಕೇರಳದೆಲ್ಲೆಡೆ ಕೆಂಪು ಬಾವುಟವನ್ನು ಹಾರಿಸುತ್ತಿದೆ. ಪಿಣರಾಯಿ ವಿಜಯನ್ ಅವರಿಗೆ ಗೆಲುವಿನ ಸುಳಿವು ಮಾರ್ಚ್ ಅಂತ್ಯಕ್ಕೆ ಸಿಕ್ಕಿತ್ತು ಎಂದರೆ ತಪ್ಪಾಗಲಾರದು.

ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ ಅಂತ್ಯಕ್ಕೆ ಎಲ್‌ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ಗುಪ್ತಚರ ವರದಿ ಬಂದಿದ್ದು, ಸಿಎಂ ಪಿಣರಾಯಿ ವಿಜಯನ್ ಗೆಲುವಿನ ನಗೆ ಬೀರುವ ಮುನ್ಸೂಚನೆ ನೀಡಿತ್ತು.

Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ

ಎಬಿಪಿಯ ಎರಡು ಸಮೀಕ್ಷೆ, ಟೈಮ್ಸ್ ನೌ- ಸಿ -ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಹಾಗೂ ಮನೋರಮಾ ವಿಎಂಆರ್ ನಡೆಸಿದ್ದ ಎರಡು ಸಮೀಕ್ಷೆಗಳು ಕೂಡಾ ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವರದಿ ಬಂದಿತ್ತು. ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು.

Assembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ

ಟ್ರೆಂಡ್ (ಮುನ್ನಡೆ) 140 ಸ್ಥಾನ, 71 ಮ್ಯಾಜಿಕ್ ನಂಬರ್

ಟ್ರೆಂಡ್ (ಮುನ್ನಡೆ) 140 ಸ್ಥಾನ, 71 ಮ್ಯಾಜಿಕ್ ನಂಬರ್

ಫಲಿತಾಂಶ ಮಧ್ಯಾಹ್ನದ 2 ಗಂಟೆ ವೇಳೆ ಟ್ರೆಂಡ್ (ಮುನ್ನಡೆ) 140 ಸ್ಥಾನ, 71 ಮ್ಯಾಜಿಕ್ ನಂಬರ್

ಸಿಪಿಐ(ಎಂ) 55
ಸಿಪಿಐ : 16
ಬಿಜೆಪಿ: 4
ಕಾಂಗ್ರೆಸ್: 25
ಮುಸ್ಲಿಂ ಲೀಗ್: 13
ಪಕ್ಷೇತರ: 8
ಕೇರಳ ಕಾಂಗ್ರೆಸ್: 4
ಕೇರಳ ಕಾಂಗ್ರೆಸ್ (ಎಂ): 5
ಎನ್ ಸಿಪಿ: 2
ಜೆಡಿಎಸ್ : 2
ಇತರೆ: 14

ಕೇರಳ ಚುನಾವಣೋತ್ತರ ಸಮೀಕ್ಷೆ

ಕೇರಳ ಚುನಾವಣೋತ್ತರ ಸಮೀಕ್ಷೆ

Times Now -C-voter:
-ಎಲ್‌ಡಿಎಫ್: 74; ಯುಡಿಎಫ್ : 65; ಎನ್‌ಡಿಎ+: 1; ಇತರೆ: 00
* Republic-CNX Exit Polls:
-ಎಲ್‌ಡಿಎಫ್: 76; ಯುಡಿಎಫ್ : 62; ಎನ್‌ಡಿಎ+: 2; ಇತರೆ: 00
* ABP C-Voter Exit Poll:
- ಎಲ್‌ಡಿಎಫ್: 71-77; ಯುಡಿಎಫ್ : 62-68; ಎನ್‌ಡಿಎ+: 0-2; ಇತರೆ: 00
Today's Chanakya:
- ಯುಡಿಎಫ್ : 102; ಎಲ್‌ಡಿಎಫ್: 71-77; ಎನ್‌ಡಿಎ+: 0-2; ಇತರೆ: 00
P-Marq:
- ಯುಡಿಎಫ್ :76; ಎಲ್‌ಡಿಎಫ್: 63; ಎನ್‌ಡಿಎ+:1; ಇತರೆ: 00
ಮೈ ಆಕ್ಸಿಸ್:
- ಯುಡಿಎಫ್ :111; ಎಲ್‌ಡಿಎಫ್: 28; ಎನ್‌ಡಿಎ+:1; ಇತರೆ: 00

ಸಮೀಕ್ಷೆಗಳ ಸಮೀಕ್ಷೆ: ಯುಡಿಎಫ್ : 88; ಎಲ್‌ಡಿಎಫ್: 51; ಎನ್‌ಡಿಎ+:2;

ಪಿಣರಾಯಿ ಕೈ ಸೇರಿದ ಗುಪ್ತಚರ ವರದಿ ಪ್ರಕಾರ

ಪಿಣರಾಯಿ ಕೈ ಸೇರಿದ ಗುಪ್ತಚರ ವರದಿ ಪ್ರಕಾರ

ಪಿಣರಾಯಿ ಕೈ ಸೇರಿದ ಗುಪ್ತಚರ ವರದಿ ಪ್ರಕಾರ, ಆಡಳಿತಾರೂಢ ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ (LDF) ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಸರಳ ಬಹುಮತ ಗಳಿಸಲಿದ್ದು 85 ಸ್ಥಾನ ಗಳಿಸಲಿದೆ. ಶೇ 42ರಷ್ಟು ಮತ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 46 ಸ್ಥಾನ ಗಳಿಸಬಹುದು, ಶೇ 34ರಷ್ಟು ಮತ ಗಳಿಕೆ ಇದೆ. ಹಾಗೂ ಬಿಜೆಪಿ 3-7 ಸ್ಥಾನ ಗೆಲ್ಲಬಹುದು ಮತ್ತು ಶೇ 18ರಷ್ಟು ಮತ ಗಳಿಕೆ ಹೊಂದಲಿದೆ ಎಂದು ಸಮೀಕ್ಷೆ ಹೇಳಿದೆ.

ಶೇಕಡಾವಾರು ಮತ ಗಳಿಕೆ ಮಧ್ಯಾಹ್ನ 2 ಗಂಟೆಗೆ

ಶೇಕಡಾವಾರು ಮತ ಗಳಿಕೆ ಮಧ್ಯಾಹ್ನ 2 ಗಂಟೆಗೆ

ಬಿಜೆಪಿ: 11.74%
ಸಿಪಿಐ: 6.81%
ಸಿಪಿಐ (ಎಂ) : 26.33%
ಕಾಂಗ್ರೆಸ್: 24.58%
ಮುಸ್ಲಿಂ ಲೀಗ್: 7.31%
ಜೆಡಿಎಸ್: 1.29%
ಕೇರಳ ಕಾಂಗ್ರೆಸ್ (ಎಂ): 3.93%
ಎನ್‌ಸಿಪಿ: 0.93%
ನೋಟಾ: 0.48%
ಆರ್‌ಎಸ್‌ಪಿ: 1.30%
ಇತರೆ: 15.05%

English summary
Kerala Election results 2021: LDF set to sweer Kerala, Pinarayi Vijayan creates history as party returns to second term first time in 40 years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X