ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಮಳೆಗೆ ಭೂಕುಸಿತ ಶಂಕೆ: ಜನರಿಗೆ ಎಚ್ಚರಿಕೆ

|
Google Oneindia Kannada News

ತಿರುವನಂತಪುರಂ, ಆಗಸ್ಟ್‌. 2: ಕೇರಳದ ಕಣ್ಣೂರು ಜಿಲ್ಲೆಯ ಕನ್ನವಂ ಅರಣ್ಯದಲ್ಲಿ ಭೂಕುಸಿತ ಸಂಭವಿಸುವ ಶಂಕೆ ಇದ್ದು, ನಾಗರಿಕರು ಎಚ್ಚರಿಕೆಯಿಂದ ಇರುವಂತೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಂಗಳವಾರ ಸೂಚಿಸಿದ್ದಾರೆ.

ಕೇರಳದಲ್ಲಿ ನಿರಂತರ ಮಳೆಯಿಂದಾಗಿ ಕಣ್ಣೂರು ಜಿಲ್ಲೆಯ ನೆಡುಂಪೊಯಿಲ್ ಪಟ್ಟಣದಲ್ಲಿ ಕಾಡಿನಲ್ಲಿರುವ ಪರ್ವತಗಳಿಂದ ನೀರು ಒಮ್ಮೆಲೆ ಬಂದಿದೆ. ನಂತರ ಕಂಜಿರಪುಳ ಮತ್ತು ನೆಲ್ಲನಿಕಲ್ ನದಿಗಳು ಉಕ್ಕಿ ಹರಿಯುತ್ತಿವೆ. ಆದ್ದರಿಂದ ಅರಣ್ಯದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಆಡಳಿತವು ಶಂಕಿಸಿದೆ.

ಕೇರಳದಲ್ಲಿ ಸಂಕಷ್ಟ ತಂದ ಮಳೆ; 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೇರಳದಲ್ಲಿ ಸಂಕಷ್ಟ ತಂದ ಮಳೆ; 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಅರಣ್ಯದ ಗಡಿ ಪ್ರದೇಶದ ಸಮೀಪ ಚೆಕ್ಯೇರಿ ಕಾಲೋನಿಯಲ್ಲಿ ನಾಲ್ಕು ಕುಟುಂಬಗಳು ಸಿಕ್ಕಿಹಾಕಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಮೂಲಕ ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದೆ. ಕುತ್ತುಪರಂಬ ವೈನಾಡು ರಸ್ತೆಯಲ್ಲಿ ನೀರು ನಿಂತಿದ್ದರಿಂದ ನೆಡುಂಪೊಯಿಲ್ ಪಟ್ಟಣದ ಸಂಚಾರವೂ ಅಸ್ತವ್ಯಸ್ತಗೊಂಡಿದೆ.

ಏತನ್ಮಧ್ಯೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ್ದು, "ಕೇರಳದಲ್ಲಿ ಭಾರಿ ಮಳೆಯಿಂದಾಗಿ ಆರು ಸಾವುಗಳು ಸಂಭವಿಸಿವೆ. ರಾಜ್ಯದ ಹಲವು ಭಾಗಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್‌ಗಳನ್ನು ನೀಡಲಾಗಿದ್ದು, ಜನರು ಜಾಗರೂಕರಾಗಿರಲು ಕರೆ ನೀಡಿದರು. ನಾವು 24 ಗಂಟೆಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆಯ ನಿರೀಕ್ಷೆಯಲ್ಲಿದ್ದೇವೆ. ಇದು ದಿನಗಟ್ಟಲೆ ಮುಂದುವರಿದರೆ ಕಷ್ಟವಾಗುತ್ತದೆ. ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಎರಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇದೆ," ಎಂದಿದ್ದಾರೆ.

ಕೇರಳದಲ್ಲಿ ಭಾರಿ ಮಳೆ: ಏಳು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಕೇರಳದಲ್ಲಿ ಭಾರಿ ಮಳೆ: ಏಳು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 ಮಳೆಯಿಂದಾಗಿ ಆರು ಸಾವು

ಮಳೆಯಿಂದಾಗಿ ಆರು ಸಾವು

ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಕೇರಳದಲ್ಲಿ ಮಳೆಯಿಂದಾಗಿ ಆರು ಸಾವುಗಳು ವರದಿಯಾಗಿವೆ. ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ. ಮಳೆಗೆ ಐದು ಮನೆಗಳು ನಾಶವಾಗಿವೆ. 55 ಮನೆಗಳು ಭಾಗಶಃ ನಾಶವಾಗಿವೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ಪಡೆಗಳ ತುರ್ತು ನಿಯಂತ್ರಣ ಕೊಠಡಿಯ ಯುನೈಟೆಡ್ ತುರ್ತು ಕೋಶವನ್ನು ಸಿದ್ಧಪಡಿಸಿದೆ. ರಾಜ್ಯ ಸರ್ಕಾರವು ಎಲ್ಲಾ ತಾಲ್ಲೂಕುಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

 ಕೆಲವು ವಾರಗಳಿಂದ ಭಾರಿ ಮಳೆ

ಕೆಲವು ವಾರಗಳಿಂದ ಭಾರಿ ಮಳೆ

ಇಡುಕ್ಕಿ, ಕೋಝಿಕ್ಕೋಡ್, ತ್ರಿಶೂರ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಶೀಘ್ರದಲ್ಲೇ ಕೇರಳ ತಲುಪಲಿದೆ ಎಂದು ಸಿಎಂ ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಕೇರಳದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ನಡುವೆ, ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿರುವನಂತಪುರದಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿತು.

 ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ

ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ

ಸೋಮವಾರ ಮತ್ತು ಮಂಗಳವಾರ ತಿರುವನಂತಪುರದಲ್ಲಿ ಐಎಂಡಿ ರೆಡ್ ಅಲರ್ಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಅವರು ಮಂಗಳವಾರ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಆದರೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಕೊಟ್ಟಾಯಂ, ಪತ್ತನಂತಿಟ್ಟ, ಇಡುಕ್ಕಿ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಲವೆಡೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹಲವು ಹೊಳೆಗಳು ತುಂಬಿ ಹರಿದಿವೆ.

 ನದಿಗಳ ನೀರಿನ ಮಟ್ಟ ಏರಿಕೆ

ನದಿಗಳ ನೀರಿನ ಮಟ್ಟ ಏರಿಕೆ

ಈ ತಿಂಗಳ ಆರಂಭದಲ್ಲಿ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಕಾಸರಗೋಡಿನ ನದಿಗಳು ತುಂಬಿ ಹರಿಯುತ್ತಿವೆ. ಕಣ್ಣೂರಿನಲ್ಲಿ ಮಳೆ ನೀರು ನುಗ್ಗಿದ್ದರಿಂದ ಹಲವಾರು ಮನೆಗಳು ಕುಸಿದು ಭಾಗಶಃ ಹಾನಿಗೀಡಾಗಿವೆ. ಅತಿವೃಷ್ಟಿಯಿಂದಾಗಿ ಒಂದು ಕುಟುಂಬವನ್ನು ಪಯನ್ನೂರು ಪುರಸಭೆ ವ್ಯಾಪ್ತಿಯಿಂದ ಸ್ಥಳಾಂತರಿಸಬೇಕಾಯಿತು. ಕಡಲುಂಡಿ (ಮಲಪುರಂ), ಭರತಪುಳ (ಪಾಲಕ್ಕಾಡ್), ಶಿರಿಯಾ (ಕಾಸರಗೋಡು), ಕರವನ್ನೂರ್ (ತ್ರಿಶೂರ್) ಮತ್ತು ಗಾಯತ್ರಿಪುಳ (ತ್ರಿಶೂರ್) ನದಿಗಳ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟವನ್ನು ತಲುಪಿದೆ.

English summary
Disaster management officials on Tuesday advised citizens to be alert as a landslide is suspected in Kannavam forest in Kerala's Kannur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X