ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೈವಿಕ ಅಸ್ತ್ರ' ಆರೋಪ: ಲಕ್ಷದ್ವೀಪ ನಟಿ ವಿರುದ್ಧ ದೇಶದ್ರೋಹ ಪ್ರಕರಣ

|
Google Oneindia Kannada News

ತಿರುವನಂತಪುರಂ, ಜೂನ್ 11: ಕೇಂದ್ರ ಸರ್ಕಾರ 'ಜೈವಿಕ ಅಸ್ತ್ರ' ಪ್ರಯೋಗ ಮಾಡಿರುವುದಾಗಿ ಆರೋಪಿಸಿದ್ದ ಲಕ್ಷದ್ವೀಪ ಸಿನೆಮಾ ನಟಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಲಕ್ಷದ್ವೀಪದ ಸಿನೆಮಾ ನಟಿ, ರೂಪದರ್ಶಿ ಆಯಿಷಾ ಸುಲ್ತಾನಾ ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿರುವುದಾಗಿ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಮುಖ್ಯಸ್ಥರ ದೂರಿನ ಆಧಾರದಲ್ಲಿ ದೇಶದ್ರೋಹ ಮತ್ತು ದೋಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ವಿರುದ್ಧ ನೀರಿನೊಳಗೆ ಭಿತ್ತಿಪತ್ರ ಹಿಡಿದು ವಿಭಿನ್ನ ಪ್ರತಿಭಟನೆ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ವಿರುದ್ಧ ನೀರಿನೊಳಗೆ ಭಿತ್ತಿಪತ್ರ ಹಿಡಿದು ವಿಭಿನ್ನ ಪ್ರತಿಭಟನೆ

ಪ್ರಾದೇಶಿಕ ಚಾನೆಲ್ ಒಂದರ ಚರ್ಚೆಯಲ್ಲಿಪಾಲ್ಗೊಂಡಿದ್ದ ಆಯಿಷಾ , ಪ್ರಫುಲ್ ಪಟೇಲ್ ನೇತೃತ್ವದ ಸರ್ಕಾರ ದ್ವೀಪ ರಾಷ್ಟ್ರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಟೀಕಿಸಿದ್ದರು.
ಕೇಂದ್ರ ಸರ್ಕಾರ ಲಕ್ಷದ್ವೀಪದ ವಿರುದ್ಧ ಜೈವಿಕ ಶಸ್ತ್ರಾಸ್ತ್ರ ಬಳಸಿದೆ ಎಂದು ಆರೋಪಿಸಿದ್ದರು .

Lakshadweep Filmmaker Named In Sedition FIR For Her ‘Biological Weapon’ Remark

ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್, ಲಕ್ಷದ್ವೀಪದ ಚೆತಿಯಾತ್ ದ್ವೀಪ ನಿವಾಸಿ ಆಯೆಷಾ ಸುಲ್ತಾನಾ ವಿರುದ್ಧ ದೂರು ದಾಖಲಿಸಿದ್ದಾರೆ ಕವರತ್ತಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಅನ್ವಯ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ನಿರ್ಮಾಪಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಲಕ್ಷದ್ವೀಪ ಪ್ರವೇಶಿಸಿದ ವ್ಯಕ್ತಿಗಳಿಗೆ ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ಗೆ ಗುರಿಪಡಿಸಲಾಗುವುದು ಎಂದು ವರದಿ ಹೇಳಿದೆ. ಲಕ್ಷದ್ವೀಪದಲ್ಲಿ ಕೋವಿಡ್ 19 ಪ್ರಕರಣ ಶೂನ್ಯವಾಗಿದ್ದವು.

ಈಗ ದಿನಂಪ್ರತಿ ನೂರು ಪ್ರಕರಣಗಳು ವರದಿಯಾಗುತ್ತಿವೆ, ಇದು ಕೇಂದ್ರ ಸರ್ಕಾರ ಹರಡಿಸಿರುವ ಜೈವಿಕ ಅಸ್ತ್ರವಾಗಿದೆ. ಈ ಜೈವಿಕ ಅಸ್ತ್ರವನ್ನು ಕೇಂದ್ರ ಸರ್ಕಾರವೇ ಕಳುಹಿಸಿರುವುದಾಗಿ ಆರೋಪಿಸಿದ್ದರು.

English summary
Lakshadweep Police has booked filmmaker Ayesha Sulthana on sedition charges following a complaint by a BJP leader over her ‘biological weapon’ remark during a television debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X