ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷದ್ವೀಪ ಪ್ರವೇಶಕ್ಕೆ 8 ಸಂಸದರಿಗೆ ಅನುಮತಿ ನಕಾರ

|
Google Oneindia Kannada News

ಕೊಚ್ಚಿ, ಜುಲೈ 07: ಇತ್ತೀಚೆಗಷ್ಟೇ ಕಾಂಗ್ರೆಸ್ ಸಂಸದರಿಗೆ ಪ್ರವೇಶ ಅನುಮತಿ ನಿರಾಕರಿಸಿದ್ದ ಲಕ್ಷದ್ವೀಪ ಆಡಳಿತ ಇದೀಗ ಅದೇ ಕಾರಣವನ್ನು ನೀಡಿ ಕೇರಳದ ಎಡಪಕ್ಷಗಳ 8 ಮಂದಿ ಸಂಸದರಿಗೆ ಲಕ್ಷದ್ವೀಪ ಪ್ರವೇಶಿಸಲು ಅನುಮತಿ ನಿರಾಕರಿಸಿದೆ.

ಲೋಕಸಭಾ ಸದಸ್ಯ ಥಾಮಸ್ ಚಾಜಿಕದನ್ ಸೇರಿದಂತೆ 8 ಮಂದಿ ಸಂಸದರು ಲಕ್ಷದ್ವೀಪಕ್ಕೆ ತೆರಳಲು ಮುಂದಾಗಿದ್ದರು, ಆದರೆ, ಸಂಸದರ ಪ್ರವೇಶಕ್ಕೆ ತಡೆಯೊಡ್ಡಿರುವ ಲಕ್ಷದ್ವೀಪ ಜಿಲ್ಲಾಧಿಕಾರಿ ಆಸ್ಕರ್ ಅಲಿ, ಸಂಸದರು ರಾಜಕೀಯ ಚಟುವಟಿಕೆಗಳಿಗಾಗಿ ಲಕ್ಷದ್ವೀಪಕ್ಕೆ ಆಗಮಿಸುವುದು ಇಲ್ಲಿನ ಶಾಂತಿಯುವ ವಾತಾವರಣಕ್ಕೆ ಧಕ್ಕೆ ಆಗಲಿದೆ.

 'ಶಾಂತಿಗೆ ಭಂಗ ತರುವ ಯತ್ನ' ಎಂದು ಕೇರಳ ಕಾಂಗ್ರೆಸ್ ನಾಯಕರ ಪ್ರವೇಶಕ್ಕೆ ಲಕ್ಷದ್ವೀಪ ನಿರಾಕರಣೆ 'ಶಾಂತಿಗೆ ಭಂಗ ತರುವ ಯತ್ನ' ಎಂದು ಕೇರಳ ಕಾಂಗ್ರೆಸ್ ನಾಯಕರ ಪ್ರವೇಶಕ್ಕೆ ಲಕ್ಷದ್ವೀಪ ನಿರಾಕರಣೆ

ಕೇಂದ್ರಾಡಳಿತ ಪ್ರದೇಶದ ಹಿತಾಸಕ್ತಿ ಮತ್ತು ಭದ್ರತೆ ದೃಷ್ಟಿಯಿಂದ ಸಂಸದರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಪ್ರಫುಲ್ ಖೋಡಾ ಪಟೇಲ್ ಅವರು ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ.

Lakshadweep Denies Entry Permit To 8 LDF MPs

ಕೇಂದ್ರಾಡಳಿತ ಪ್ರದೇಶಕ್ಕೆ ಕಾಂಗ್ರೆಸ್ ಸಂಸದರು ಭೇಟಿ ನೀಡಿದರೆ ಶಾಂತಿಯುತ ವಾತಾವರಣ ಹಾಳಾಗಲಿದೆ ಎಂಬ ಕಾರಣ ನೀಡಿ ಲಕ್ಷದ್ವೀಪ ಆಡಳಿತ ಕಾಂಗ್ರೆಸ್ ಸಂಸದರಾದ ಹಿಬಿ ಈಡನ್ ಹಾಗೂ ಟಿ.ಎನ್.ಪ್ರತಾಪನ್ ಅವರ ಭೇಟಿ ಅರ್ಜಿಯನ್ನು ತಿರಸ್ಕರಿಸಿದೆ.

ಸಂಸದರ ಭೇಟಿ ಉದ್ದೇಶಪೂರ್ವಕವಾಗಿ ಶಾಂತಿಯನ್ನು ಕದಡುವ ಪ್ರಯತ್ನವಾಗಿದ್ದು, ಕೋವಿಡ್-19 ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಡಳಿತ ಸಮರ್ಥನೆ ನೀಡಿದೆ.

ಸಂಸದರ ಭೇಟಿಯ ಉದ್ದೇಶ, ದ್ವೀಪ ಜನರಿಗೆ ಹೊಸ ಆಡಳಿತದಿಂದ ಜನರ ಸಮಸ್ಯೆಗೆ ಆಲಿಸುವುದಕ್ಕಾಗಿಯಾಗಿದ್ದು, ಇದು ರಾಜಕೀಯ ಕ್ರಮ ಎಂದೆನಿಸುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ. ಕಳೆದ ತಿಂಗಳು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಜಾರಿಗೆ ತಂದಿದ್ದ ಸುಧಾರಣೆಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

English summary
Lakshadweep Administration has rejected the application of eight Left Democratic Front (LDP) MPs namely Elamaram Kareem, V Sivadasan, AM Ariff, Binoy Viswam, MV Shreyams Kumar, K Somaprasad, Thomas Chazhikadan and John Brittas for entry permit to the Union Territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X