ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕೇರಳದಲ್ಲಿ ಕುಸ್ತಿ, ದೆಹಲಿಯಲ್ಲಿ ದೋಸ್ತಿ; ರಾಹುಲ್ ಇದೇನು ನಿಮ್ಮ ಕಥೆ?"

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 23: ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ ಹಲವು ರಾಜ್ಯಗಳು ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದು, ಈ ಸಂದರ್ಭ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಡಪಕ್ಷಗಳನ್ನು ಟೀಕಿಸಿದ್ದಾರೆ.

ಕಾಂಗ್ರೆಸ್ ಹಾಗೂ ಎಡಪಕ್ಷಗಳದ್ದು ಬೂಟಾಟಿಕೆ ಎಂದಿರುವ ಅವರು, ಈ ಎರಡೂ ಪಕ್ಷಗಳು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಸ್ನೇಹಿತರು. ಆದರೆ ಕೇರಳದಲ್ಲಿ ಕಣದಲ್ಲಿವೆ. ಎಲ್‌ಡಿಎಫ್ ಹಾಗೂ ಯುಡಿಎಫ್ ಕೇರಳದಲ್ಲಿ ಪ್ರತಿಸ್ಪರ್ಧಿಗಳಾಗಿವೆ. ಈ ಪಕ್ಷಗಳಿಗೆ ನೀತಿ ಎಂಬುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮುಂದೆ ಓದಿ...

"ಇಲ್ಲಿ ಕುಸ್ತಿ, ಅಲ್ಲಿ ದೋಸ್ತಿ"

ಕಾಂಗ್ರೆಸ್‌ ಹಾಗೂ ಎಡಪಕ್ಷದ್ದು ಕೇರಳದಲ್ಲಿ "ಕುಸ್ತಿ"ಯಾದರೆ, ದೆಹಲಿ ಹಾಗೂ ಇನ್ನಿತರ ಕಡೆಗಳಲ್ಲಿ "ದೋಸ್ತಿ". ಇದೇ ಈ ಎರಡು ಪಕ್ಷಗಳ ಬೂಟಾಟಿಕೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ದೆಹಲಿಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಅಲ್ಲ. ಕಾಂಗ್ರೆಸ್ ವಿವಿಧ ಪ್ರಾದೇಶಿಕ ಪಕ್ಷಗಳ ಮೇಲೆ ಅವಲಂಬಿತವಾಗಿದೆ ಎಂದರು.

ರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠ

"ರಾಹುಲ್ ಗಾಂಧಿಯವರೇ ನಿಮ್ಮ ನಂಬಿಕೆ ಯಾವುದರಲ್ಲಿದೆ?"

"ಈ ಎಡಪಕ್ಷ ಕೂಡ ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಬೆಂಬಲಿಸುತ್ತದೆ. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಎರಡೂ ಪಕ್ಷಗಳು ಮೈತ್ರಿಯಲ್ಲಿವೆ. ಆದರೆ ಕೇರಳದಲ್ಲಿ ಹೀಗಿಲ್ಲ. ರಾಹುಲ್ ಗಾಂಧಿಯವರೇ ನಿಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆಯೇ ಅಥವಾ ಬೂಟಾಟಿಕೆಯಲ್ಲಿಯೇ ಎಂದು ಪ್ರಶ್ನಿಸಿದ್ದಾರೆ.

 ಒಂದೊಂದು ಕಡೆ ಒಂದೊಂದು ಮೈತ್ರಿ ಏಕೆ?

ಒಂದೊಂದು ಕಡೆ ಒಂದೊಂದು ಮೈತ್ರಿ ಏಕೆ?

ರಾಜಕೀಯ ಎಂಬುದು ಅಧಿಕಾರವನ್ನು ಬಳಸಿಕೊಳ್ಳುವುದಲ್ಲ. ಅಲ್ಲಿ ಒಂದು ಮೈತ್ರಿ, ಇಲ್ಲಿ ಒಂದು ಮೈತ್ರಿ ಮಾಡಿಕೊಂಡು ರಾಜಕೀಯ ಮಾಡುವುದಲ್ಲ. ಕಾಂಗ್ರೆಸ್ ಏಕೆ ಒಂದೊಂದು ಕಡೆ ಒಂದೊಂದು ಪಕ್ಷಗಳ ಜೊತೆ ಮೈತ್ರಿಯಲ್ಲಿದೆ ಎಂದು ರಾಹುಲ್ ಗಾಂಧಿಯನ್ನು ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ವಯನಾಡಿನಲ್ಲಿ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ‍್ಯಾಲಿವಯನಾಡಿನಲ್ಲಿ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ‍್ಯಾಲಿ

"ಪಂಜಾಬ್‌ನಲ್ಲಿ ನೀವೇ ರೈತ ವಿರೋಧಿ ಕಾನೂನು ತಂದಿದ್ದೀರಿ"

ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಗೆ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿರುವುದರ ಕುರಿತು ಮಾತನಾಡಿದ ಅವರು, "ಟ್ರ್ಯಾಕ್ಟರ್ ಮೇಲೆ ಆಕ್ಟರ್‌ನಂತಾಗಿದ್ದಾರೆ ರಾಹುಲ್. ಎಪಿಎಂಸಿ ಪರ ನೀವಿರುವುದಾದರೆ ಕೇರಳದಲ್ಲಿ ಏಕೆ ಎಪಿಎಂಸಿ ಇಲ್ಲ? ನಿಮ್ಮ ಸರ್ಕಾರವೇ ಪಂಜಾಬ್‌ ನಲ್ಲಿ ರೈತರ ವಿರುದ್ಧ ಕಾನೂನು ತಂದಿಲ್ಲವೇ" ಎಂದು ಕೇಳಿದ್ದಾರೆ.

English summary
Union minister and senior BJP leader pralhad joshi has accused congress and left parties as hypocrisy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X