ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಇರುವುದು ಇಂಥ ಮೂರೇ ವಿಮಾನ ನಿಲ್ದಾಣಗಳು...

|
Google Oneindia Kannada News

ಕೋಳಿಕ್ಕೋಡ್, ಆಗಸ್ಟ್ 7: ಕಲ್ಲಿಕೋಟೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈಗ ಎಲ್ಲೆಡೆ ಸುದ್ದಿಯಲ್ಲಿದೆ. ಇದನ್ನು ಕರಿಪುರ್ ವಿಮಾನ ನಿಲ್ದಾಣ ಅಂತಲೂ ಕರೆಯಲಾಗುತ್ತದೆ. ಕೇರಳದ ಕೋಳಿಕ್ಕೋಡ್ ಮತ್ತು ಮಲಪ್ಪುರಂ ನಗರಗಳಿಗೆ ಈ ವಿಮಾನ ನಿಲ್ದಾಣದಿಂದ ಅನುಕೂಲ ಆಗುತ್ತದೆ.

Recommended Video

ಗಾಣಗಪುರದ ದತ್ತನ ದರ್ಶನವೇ ಡಿಕೆ ಶಿವಕುಮಾರ್ ಗೆ ಮುಳುವಾಯ್ತಾ? | Oneindia Kannada

ಅಂದ ಹಾಗೆ, ಈ ಕರಿಪುರ್ ವಿಮಾನ ನಿಲ್ದಾಣವು ಮಲಪ್ಪುರಂಗೆ 25 ಕಿ.ಮೀ ಹಾಗೂ ಕೋಳಿಕ್ಕೋಡ್ ನಿಂದ 28 ಕಿ.ಮೀ. ದೂರದಲ್ಲಿದೆ. ಭಾರತದಲ್ಲಿನ ಮೂರು ಟೇಬಲ್ ಟಾಪ್ ರನ್ ವೇ ಇರುವ ವಿಮಾನ ನಿಲ್ದಾಣದಲ್ಲಿ ಇದೂ ಒಂದು. ಇಲ್ಲಿ ವಿಮಾನವನ್ನು ಕೆಳಗೆ ಇಳಿಸುವುದು ಎಂಥ ನುರಿತ ಹಾಗೂ ಅನುಭವಿ ಪೈಲಟ್ ಗೂ ಸವಾಲಿನ ಸಂಗತಿ.

 ಮಂಗಳೂರಿನ ವಿಮಾನ ದುರಂತ ನೆನಪಿಸಿದ ಕೋಳಿಕ್ಕೋಡ್ ಅವಘಡ: ಏನಿದು ಟೇಬಲ್ ಟಾಪ್ ರನ್ ವೇ ಮಂಗಳೂರಿನ ವಿಮಾನ ದುರಂತ ನೆನಪಿಸಿದ ಕೋಳಿಕ್ಕೋಡ್ ಅವಘಡ: ಏನಿದು ಟೇಬಲ್ ಟಾಪ್ ರನ್ ವೇ

ಕರಿಪುರ್ ವಿಮಾನ ನಿಲ್ದಾಣದಲ್ಲಿ ಮೂರು ಕಡೆ ಕಣಿವೆ ಇದ್ದು, ಮಧ್ಯದಲ್ಲಿ ಬೆಟ್ಟ ಇದೆ. ನಿಮಗೆ ನೆನಪಿದ್ದರೆ, 2010ರಲ್ಲಿ ಮಂಗಳೂರಿನಲ್ಲಿ ನಡೆದ ವಿಮಾನ ದುರಂತವನ್ನು ನೆನಪಿಸಿಕೊಳ್ಳಿ. ಅದು ಕೂಡ ಟೇಬಲ್ ಟಾಪ್ ರನ್ ವೇ. ಮತ್ತೊಂದು ಮಿಜೋರಾಂನಲ್ಲಿ ಇದೆ. ಎರಡು ಬದಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್ ವೇ ಇದ್ದರೆ ಅದನ್ನು ಟೇಬಲ್ ಟಾಪ್ ರನ್ ವೇ ಎಂದು ಕರೆಯಲಾಗುತ್ತದೆ.

 Kozhikode 1 In Only 3 Such Tabletop Airports In India

ಕರಿಪುರ್ ವಿಮಾನ ದುರಂತ: ಸಂತ್ರಸ್ತರಿಗೆ ಸಹಾಯವಾಣಿ ಪ್ರಕಟ ಕರಿಪುರ್ ವಿಮಾನ ದುರಂತ: ಸಂತ್ರಸ್ತರಿಗೆ ಸಹಾಯವಾಣಿ ಪ್ರಕಟ

ಈ ಹಿಂದೆ ಕರ್ನಾಟಕದ ಮಂಗಳೂರಿನಲ್ಲಿ ವಿಮಾನ ದುರಂತ ಸಂಭವಿಸಿದಾಗಲೇ ದೇಶದ ಉಳಿದ ಎರಡು ಕಡೆಯ ಟೇಬಲ್ ಟಾಪ್ ರನ್ ವೇಗಳಲ್ಲಿ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ಮಾಡಿದ್ದರು.

English summary
Kozhikode is one in 3 such tabletop airports operating in India. Here is the details and specialties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X