ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿ ಮೇಲೆ ಜೂಡೋ ಚಾಂಪಿಯನ್‌ನಿಂದ ಅತ್ಯಾಚಾರಕ್ಕೆ ಯತ್ನ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 27: ಇತ್ತೀಚಿಗೆ ಕೇರಳದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಸದ್ಯ ಕೇರಳದ ಕೊಂಡೊಟ್ಟಿಯಲ್ಲಿ ಮತ್ತೊಂದು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ಬೆಳಕಿಗೆ ಬಂದಿದೆ. 23 ವರ್ಷದ ಯುವತಿಯನ್ನು ಹಿಂಬಾಲಿಸಿ ಜಮೀನಿಗೆ ಎಳೆದೊಯ್ದ 15 ವರ್ಷದ ಬಾಲಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದು ಪೊಲೀಸರ ಅತಿಥಿಯಾಗಿದ್ದಾನೆ.

ಯುವತಿಯ ಹಿಂಬಾಲಿಸಿದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ನಿರಾಕರಿಸಿದಾಗ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಆಕೆಯ ಮೇಲಂಗಿಯನ್ನು ಬಳಸಿ ಆಕೆಯ ಕೈಗಳನ್ನು ಕಟ್ಟಿದ್ದಾನೆ. ಆದರೆ ಯುವತಿ ಆತನ ಹಿಡಿತದಿಂದ ಬಿಡಿಸಿಕೊಂಡು ಸಮೀಪದ ಮನೆಗೆ ಓಡಿದ್ದಾಳೆ. ಮನೆಯಲ್ಲಿದ್ದ ಮಹಿಳೆ ನೆರೆಹೊರೆಯವರನ್ನು ಕರೆದಿದ್ದಾಳೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ರಾಜ್ಯ ಮಟ್ಟದ ಜೂಡೋ ಚಾಂಪಿಯನ್ ಆಗಿದ್ದಾನೆ. ಯುವತಿ ನೀಡಿದ ವಿವರಣೆ ಮತ್ತು ಸಿಸಿಟಿವಿ ದೃಶ್ಯಗಳಿಂದ ಆತನನ್ನು ಗುರುತಿಸಲಾಗಿದೆ. ಮಂಗಳವಾರ ಆತನನ್ನು ಬಂಧಿಸಲಾಗಿದ್ದು, ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.

ನಡೆದಿದ್ದೇನು?

ಸೋಮವಾರ ಯುವತಿ ತನ್ನ ಮನೆಯಿಂದ ಕೊಟ್ಟುಕ್ಕರ ಜಂಕ್ಷನ್ ಕಡೆಗೆ ತಾನು ಓದುತ್ತಿರುವ ಕೊಂಡೊಟ್ಟಿಯಲ್ಲಿರುವ ಕಂಪ್ಯೂಟರ್ ಸೆಂಟರ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಹುಡುಗ ಅವಳನ್ನು ಹಿಂಬಾಲಿಸಿ ಹಿಂದಿನಿಂದ ಹಿಡಿದು ಹೊಲಕ್ಕೆ ಎಳೆದೊಯ್ದನು. ಆಕೆ ವಿರೋಧಿಸಿದಾಗ ಆಕೆಯ ಮುಖಕ್ಕೆ ಕಲ್ಲಿನಿಂದ ಹೊಡೆದಿದ್ದಾನೆ.

Kondatty: A 15 year old boy attempts rape on a 23-year-old young woman

"ಹಲ್ಲೆಯಿಂದ ಹುಡುಗಿಯ ಮುಖ ಊದಿಕೊಂಡಿದೆ. ದಾಳಿಕೋರ ಆಕೆಯ ಉಡುಪನ್ನು ಹರಿದು ಹಾಕಿ ಅದರಿಂದ ಯುವತಿಯ ಕೈ ಕಟ್ಟಿದ್ದಾನೆ. ಗಾಯಾಳು ಯುವತಿಗೆ ಪ್ರಥಮ ಚಿಕಿತ್ಸೆ ನೀಡಿ ಕೊಂಡೊಟ್ಟಿ ತಾಲೂಕು ಆಸ್ಪತ್ರೆಗೆ ಮತ್ತು ನಂತರ ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಿದೆವು ಎಂದು ಕೊಂಡೊಟ್ಟಿ ಪುರಸಭೆಯ ಕೊಟ್ಟುಕ್ಕರ ವಾರ್ಡ್ ಕೌನ್ಸಿಲರ್ ಉಮ್ಮರ್ ಫಾರೂಕ್ ಸ್ಥಳೀಯ ಮಾದ್ಯಮಕ್ಕೆ ತಿಳಿಸಿದ್ದಾರೆ. ಯುವತಿಯ ಸಾಮಾನ್ಯ ದಿನಚರಿಯನ್ನು ವಿವರಿಸಿದ ಕೊಟ್ಟುಕ್ಕರ ವಾರ್ಡ್ ಕೌನ್ಸಿಲರ್, ಯುವತಿ ಕಂಪ್ಯೂಟರ್ ಸೆಂಟರ್‌ಗೆ ಹೋಗಲು ಜಂಕ್ಷನ್‌ನಿಂದ ನಿಯಮಿತವಾಗಿ ಬಸ್‌ನಲ್ಲಿ ಹೋಗುತ್ತಿದ್ದರು. ಜಂಕ್ಷನ್ ಅವಳ ಮನೆಯಿಂದ 1 ಕಿ.ಮೀ ದೂರದಲ್ಲಿದೆ. ಜಂಕ್ಷನ್ ತಲುಪಲು ಅವಳು ಭತ್ತದ ಗದ್ದೆಯ ಮೂಲಕ ಶಾರ್ಟ್‌ಕಟ್ ತೆಗೆದುಕೊಳ್ಳುತ್ತಾಳೆ. ಈ ವೇಳೆ ಬಾಲಕ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

ಚಾಲಾಕಿ ಬಾಲಕ ಮನೆಯಲ್ಲಿ ಹೇಳಿದ್ದು ಹೀಗೆ..

ಯುವತಿ ತನ್ನ ಮೇಲಿನ ದಾಳಿಯನ್ನು ಪೊಲೀಸರಿಗೆ ವಿವರಿಸಿದ್ದಾಳೆ. ಈ ಹಿಂದೆಯೂ ಈ ಪ್ರದೇಶದಲ್ಲಿ ಬಾಲಕನನ್ನು ಕೆಲವು ಬಾರಿ ನೋಡಿದ್ದೇನೆ ಎಂದು ಯುವತಿ ಹೇಳಿದ್ದಾರೆ. ಯುವತಿ ಅತ್ಯಾಚಾರದ ಪ್ರಯತ್ನವನ್ನು ವಿರೋಧಿಸಿದ್ದರಿಂದ ಬಾಲಕನ ಕೈ, ಕುತ್ತಿಗೆ ಮತ್ತು ತುಟಿಗಳ ಮೇಲೆ ಯುವತಿಯ ಉಗುರುಗಳಿಂದ ಗುರುತುಗಳಿವೆ ಎಂದು ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುಜಿತ್ ದಾಸ್ ಹೇಳಿದ್ದಾರೆ. 'ಚಾಲಾಕಿ ಬಾಲಕ ಮನೆಗೆ ತೆರಳಿ ತನ್ನ ಪೋಷಕರಿಗೆ ನಾಯಿ ಬೆನ್ನಟ್ಟಿ ಬಿದ್ದು ಗಾಯಗಳಾಗಿವೆ ಎಂದು ಹೇಳಿಕೊಂಡಿದ್ದನು. ವಿಸ್ತೃತ ವಿಚಾರಣೆ ವೇಳೆ ತಾನು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ' ಎಂದು ಹೇಳಿದರು. ಬಾಲಕ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲು ಯತ್ನಿಸಿರುವ ಬಗ್ಗೆ ಪೊಲೀಸರು ವರದಿ ಸಲ್ಲಿಸಲಿದ್ದಾರೆ ಎಂದು ಕೊಂಡೊಟ್ಟಿ ಇನ್ಸ್‌ಪೆಕ್ಟರ್ ಪ್ರಮೋದ್ ಎಂಸಿ ತಿಳಿಸಿದ್ದಾರೆ.

ಕೇರಳದಲ್ಲಿ ಅತ್ಯಾಚಾರ ಪ್ರಕರಣಗಳು

ದೇಶದಲ್ಲಿಯೇ ಏಕೈಕ ಸಂಪೂರ್ಣ ಸಾಕ್ಷರತರ ರಾಜ್ಯ ಎನಿಸಿರುವ ಕೇರಳದಲ್ಲಿ 2021ರ ಮೊದಲ ಐದು ತಿಂಗಳಲ್ಲಿಯೇ 627 ಮಕ್ಕಳ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಸಂಗತಿಯನ್ನು ಪೊಲೀಸರ ದಾಖಲೆಗಳು ಬಹಿರಂಗಪಡಿಸಿದೆ. 2016-2020ರ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ 2021ರ ಜನವರಿ 1 ರಿಂದ ಮೇ 31ರವರೆಗೆ ಪ್ರತಿ ತಿಂಗಳು ವರದಿಯಾಗುವ ಸರಾಸರಿ ಶಿಶು ಅತ್ಯಾಚಾರ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿದೆ. ಅತಿ ಹೆಚ್ಚಿನ ಶಿಶು ಅತ್ಯಾಚಾರ ಪ್ರಕರಣಗಳು 2019ರಲ್ಲಿ ದಾಖಲಾಗಿದ್ದವು. ರಾಜ್ಯದಲ್ಲಿ ಆಗ ಒಟ್ಟು 1,313 ಪ್ರಕರಣಗಳು ವರದಿಯಾಗಿದ್ದವು. 2016ರಲ್ಲಿ 958 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ 1,143 ಪ್ರಕರಣಗಳು ವರದಿಯಾಗಿದ್ದವು.ಈ ವರ್ಷದ ಮೊದಲ ಐದು ತಿಂಗಳಲ್ಲಿ ಮಕ್ಕಳ ಮೇಲಿನ ಅಪರಾಧ ಕೃತ್ಯಗಳ 1,639 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 15 ಕೊಲೆ, 89 ಅಪಹರಣ, 6 ಪರಿತ್ಯಜಿಸುವಿಕೆ, 5 ಬಾಲ್ಯವಿವಾಹ ಹಾಗೂ 897 ಇತರೆ ಪ್ರಕರಣಗಳು ವರದಿಯಾಗಿವೆ.

English summary
A 15-year-old boy has been detained by the police for allegedly trying to rape a 23-year-old woman after he stalked her and dragged her to a farm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X