ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಪಿಎಂ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದ ಕೊಡಿಯೇರಿ

|
Google Oneindia Kannada News

ತಿರುವನಂತಪುರಂ, ನ. 13: ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಕೇರಳ ಸಿಪಿಎಂ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಶುಕ್ರವಾರದಂದು ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ್ದು, ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಕೇರಳದಿಂದ ಹೊರಗಡೆ ಇರಬೇಕಾಗುತ್ತದೆ, ಹೀಗಾಗಿ ಈ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಎಲ್ ಡಿ ಎಫ್ ಸಂಚಾಲಕ ಎ ವಿಜಯರಾಘವನ್ ಅವರು ಕೊಡಿಯೇರಿ ಅವರ ಹುದ್ದೆಯನ್ನು ಸಂಭಾಳಿಸಲಿದ್ದಾರೆ. ಹೊಸಬರನ್ನು ಹುದ್ದೆ ಆಯ್ಕೆ ಮಾಡಬೇಕಾಗುತ್ತದೆ.

ಡ್ರಗ್ಸ್ ಕೇಸ್: ಸಿಪಿಐಎಂ ಕಾರ್ಯದರ್ಶಿ ಪುತ್ರ ಬಿನೀಶ್ ಬಂಧನಡ್ರಗ್ಸ್ ಕೇಸ್: ಸಿಪಿಐಎಂ ಕಾರ್ಯದರ್ಶಿ ಪುತ್ರ ಬಿನೀಶ್ ಬಂಧನ

ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಡ್ರಗ್ಸ್ ಹಾಗೂ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಮನಿ ಲಾಂಡ್ರಿಂಗ್ ಕಾಯ್ದೆ ಸೆಕ್ಷನ್ 19(1) ಅನ್ವಯ ಬಿನೀಶ್ ಬಂಧಿಸಿರುವ ಜಾರಿ ನಿರ್ದೇಶನಾಲಯವು ವಿಚಾರಣೆ ಮುಂದುವರೆಸಿದೆ.

Kodiyeri Balakrishnan steps down as CPM Kerala state secretary

ಬೆಂಗಳೂರಿನ ಡ್ರಗ್ಸ್ ಪೆಡ್ಲರ್ ಮೊಹಮ್ಮದ್ ಅನೂಪ್ ಜೊತೆಗೂಡಿ ಡ್ರಗ್ಸ್ ಹಾಗೂ ಮನಿ ಲಾಂಡ್ರಿಂಗ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ನವೆಂಬರ್ 25ರ ತನಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರಬೇಕಾಗಿದ್ದು, ಇತ್ತೀಚೆಗೆ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಬಿನೀಶ್ ದೆಸೆಯಿಂದ ಕೊಡಿಯೇರಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರೂ ಅನಾರೋಗ್ಯದ ನೆಪ ಹೇಳಿದ್ದಾರೆ.

ಡ್ರಗ್ಸ್ ಕೇಸ್: ''ಇಡಿ'' ಮುಂದೆ ಕೈಕಟ್ಟಿ ನಿಂತ ಕೇರಳದ ಪ್ರಭಾವಿ ಬಿನೀಶ್ಡ್ರಗ್ಸ್ ಕೇಸ್: ''ಇಡಿ'' ಮುಂದೆ ಕೈಕಟ್ಟಿ ನಿಂತ ಕೇರಳದ ಪ್ರಭಾವಿ ಬಿನೀಶ್

ಕೇರಳ ಹಾಗೂ ಕರ್ನಾಟಕದ ನಟ, ನಟಿಯರು, ಸೆಲೆಬ್ರಿಟಿಗಳು, ಉದ್ಯಮಿಗಳ ಸಂಪರ್ಕ ಹೊಂದಿದ್ದ ಅನೂಪ್ ಪೆಡ್ಲರ್ ಆಗಿ ಎಲ್ ಎಸ್ ಡಿ, ಎಂಡಿಎಂಎ, ಕೊಕೈನ್ ಮಾರಾಟ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ. ಅನೂಪ್ ಹಾಗೂ ಬಿನೀಶ್ ನಡುವಿನ ಆರ್ಥಿಕ ವ್ಯವಹಾರ ವಿದೇಶಕ್ಕೂ ವ್ಯಾಪಿಸಿದ್ದು, ಈ ಬಗ್ಗೆ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.

English summary
Kerala CPM secretary Kodiyeri Balakrishnan has stepped from his post due to healt issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X