ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಚ್ಚಿ: ಒಂದು ಮತದ ಅಂತರದಲ್ಲಿ ಬಿಜೆಪಿಗೆ ಅಚ್ಚರಿ ಜಯ

|
Google Oneindia Kannada News

ಕೊಚ್ಚಿ, ಡಿ. 16: ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಕೊಚ್ಚಿ ಕಾರ್ಪೊರೇಷನ್ ಚುನಾವಣೆಯ ಮತ ಎಣಿಕೆ ಕಾರ್ಯ ಜಾರಿಯಲ್ಲಿದ್ದು, ಯುಡಿಎಫ್ ಆರಂಭಿಕ ಹಿನ್ನಡೆ ಅನುಭವಿಸಿದೆ. ಬಿಜೆಪಿ ಏಕೈಕ ಮತ ಅಂತರದಿಂದ ವಾರ್ಡ್ ಗೆದ್ದು ಅಚ್ಚರಿ ಫಲಿತಾಂಶ ನೀಡಿದೆ.

ಕೊಚ್ಚಿ ಕಾರ್ಪೊರೇಷನ್ ನಾರ್ಥ್ ಐಲ್ಯಾಂಡ್ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ, ಮೇಯರ್ ಹುದ್ದೆ ಆಕಾಂಕ್ಷಿ ಎನ್ ವೇಣುಗೋಪಾಲ್ ಅವರನ್ನು ಬಿಜೆಪಿಯ ಅಭ್ಯರ್ಥಿ ಒಂದು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕಳೆದ 10 ವರ್ಷಗಳಿಂದ ಕೊಚ್ಚಿ ಕಾರ್ಪೊರೇಷನ್ ಕಾಂಗ್ರೆಸ್-ಯುಡಿಎಫ್ ಹಿಡಿತದಲ್ಲಿದೆ. ಪ್ರಮುಖ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಸಮಯ 10ಗಂಟೆಯ ಟ್ರೆಂಡ್ ನಂತೆ ಕಾಂಗ್ರೆಸ್ ಬಣ 46, ಎಡಪಕ್ಷ 37 ಹಾಗೂ ಎನ್ಡಿಎ 6ರಲ್ಲಿ ಮುನ್ನಡೆ ಪಡೆದುಕೊಂಡಿವೆ.

Kochi corporation result 2020: UDF candidate Venugopal loses to BJP by 1 vote

ಸ್ಥಳೀಯ ಸಂಸ್ಥೆ ಚುನಾವಣೆ:
941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಿತದೃಷ್ಟಿಯಿಂದ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಲ್ಲದೆ ಬಿಜೆಪಿ ನೇತೃತ್ವದ ಎನ್ಡಿಎ ಸೆಣಸಾಡುತ್ತಿವೆ.

English summary
Kochi corporation result 2020:UDF faced a setback for as counting of votes for the Kerala local body elections 2020 is under way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X