ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಗೆಲುವಿನಲ್ಲೂ ಇತಿಹಾಸ ನಿರ್ಮಿಸಿದ ಕೆಕೆ ಶೈಲಜಾ

|
Google Oneindia Kannada News

ತಿರುವನಂತಪುರಂ, ಮೇ 03; ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಎಲ್‌ಡಿಎಫ್ 94 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದ್ದು, ಇತಿಹಾಸ ನಿರ್ಮಾಣ ಮಾಡಿದೆ.

ಕೇರಳದ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದವರು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ. ವಿಧಾನಸಭಾ ಚುನಾವಣೆಯಲ್ಲಿಯೂ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ.

ಕೇರಳ ಮತ್ತೆ ಪಿಣರಾಯಿ ನೇತೃತ್ವದ ಸರ್ಕಾರವನ್ನೇ ಬಯಸುತ್ತದೆ: ಕೆ ಶೈಲಜಾಕೇರಳ ಮತ್ತೆ ಪಿಣರಾಯಿ ನೇತೃತ್ವದ ಸರ್ಕಾರವನ್ನೇ ಬಯಸುತ್ತದೆ: ಕೆ ಶೈಲಜಾ

ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಕ್ಷೇತ್ರದಲ್ಲಿ ಶೈಲಜಾ ಟೀಚರ್ ಎಂದೇ ಕರೆಸಿಕೊಳ್ಳುವ ಕೆ. ಕೆ. ಶೈಲಜಾ 60,963 ಮತಗಳ ಅಂತರದಿಂದ ಗೆದ್ದಿದ್ದಾರೆ. ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಇಷ್ಟು ಅಂತರದಿಂದ ಗೆದ್ದವರು ಇವರೊಬ್ಬರೆ.

ಕೇರಳದಲ್ಲಿ ಕೊರೊನಾ ಸೋಂಕು ಗರಿಷ್ಠ ಮಟ್ಟ ತಲುಪಿಲ್ಲ: ಶೈಲಜಾ ಕೇರಳದಲ್ಲಿ ಕೊರೊನಾ ಸೋಂಕು ಗರಿಷ್ಠ ಮಟ್ಟ ತಲುಪಿಲ್ಲ: ಶೈಲಜಾ

KK Shailaja

64 ವರ್ಷದ ಶೈಲಜಾ ಅವರು ಕೋವಿಡ್ ಮತ್ತು ನಿಫಾ ವೈರಸ್ ಸಂದರ್ಭದಲ್ಲಿನ ಕಾರ್ಯ ನಿರ್ವಹಣೆ ವಿಚಾರದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ

ಕೇರಳ ವಿಧಾನಸಭೆ ಚುನಾವಣೆ 2021ರಲ್ಲಿ ಶೈಲಜಾ ಅವರು ಎಲ್‌ಡಿಎಫ್‌ನ ಸ್ಟಾರ್ ಕ್ಯಾಂಪೇನರ್ ಆಗಿದ್ದರು. 23 ವರ್ಷಗಳ ಕಾಲ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿದ ಶೈಲಜಾ ಅವರು 2004ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು.

ಶೈಲಜಾ ಅವರು ಸಿಪಿಐ(ಎಂ)ನ ಯುವ ಘಟಕವಾದ ಡಿವೈಎಫ್‌ಐನ ನಿವೃತ್ತ ಸದಸ್ಯರಾಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಚುನಾವಣೆ ಗೆದ್ದ ಅವರು ಸಚಿವರಾದರು. ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸರ್ಕಾರ ರಚನೆಗೊಂಡಿತು.

Recommended Video

ದೇವರನಾಡಲ್ಲಿ ಪಿಣರಾಯಿ ವಿಜಯನ್ ಗೆ ಒಲಿದ ವಿಜಯಲಕ್ಷ್ಮಿ

English summary
Health minister of Kerala KK Shailaja who is fondly called Shailaja teacher won from the Mattannur constituency in Kerala assembly election 2021 with a margin of over 60,963 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X