ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತರಿಗಾಗಿ ಸ್ಪೆಷಲ್ ಆಸ್ಪತ್ರೆ ರೆಡಿ!

|
Google Oneindia Kannada News

ತಿರುವನಂತಪುರಂ, ಮಾರ್ಚ್.23: ಕೇರಳದಲ್ಲಿ ಕೊರೊನಾ ವೈರಸ್ ಎಂಬ ಮಹಾಮಾರಿ ವಿರುದ್ಧ ಸಮರೋಪಾದಿಯಲ್ಲಿ ಹೋರಾಟ ನಡೆಸಲಾಗುತ್ತಿದೆ. ಡೆಡ್ಲಿ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗೆ ನೂತನ ಆಸ್ಪತ್ರೆಯೇ ಸಜ್ಜುಗೊಂಡಿದೆ.

ಎರ್ನಾಕುಲಂನಲ್ಲಿ ಇರುವ ಮೆಡಿಕಲ್ ಕಾಲೇಜ್ ನ್ನು ಕೊರೊನಾ ವೈರಸ್ ಸೋಂಕಿತರ ತಪಾಸಣೆ ಮತ್ತು ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಲಾಗಿದೆ. ಇದುವರೆಗೂ ತುರ್ತು ಹೊರರೋಗಿಗಳು ಮತ್ತು ಸಾಮಾನ್ಯ ರೋಗಿಗಳನ್ನು ಮಾತ್ರ ಇಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿತ್ತು.

ನಮ್ಮದು ಬಡವರ ರಾಷ್ಟ್ರ ಎಂದಿದ್ದೇಕೆ ಪಾಕಿಸ್ತಾನ ಪ್ರಧಾನಮಂತ್ರಿ?ನಮ್ಮದು ಬಡವರ ರಾಷ್ಟ್ರ ಎಂದಿದ್ದೇಕೆ ಪಾಕಿಸ್ತಾನ ಪ್ರಧಾನಮಂತ್ರಿ?

ಮಹಿಳಾ ಮತ್ತು ಮಕ್ಕಳ ಹೊರರೋಗಿಗಳ ವಿಭಾಗವನ್ನು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 12 ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. 23 ಮಂದಿ ಸೋಂಕಿತರನ್ನು ಐಸೋಲೇಟೆಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, 3961 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ.

Keralas Ernakulam Medical College Is Special Center For Coronavirus Treatment

ಕೇರಳದಲ್ಲಿ 52 ಮಂದಿ ಕೊರೊನಾ ವೈರಸ್ ಸೋಂಕಿತರು:

ಇನ್ನು, ಕೇರಳದಲ್ಲಿ ಭಾನುವಾರ 12 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದ್ದು, ಈ ಪೈಕಿ ಕಣ್ಣೂರು ಜಿಲ್ಲೆಯಲ್ಲಿ 3, ಕಾಸರಗೂಡಿನಲ್ಲಿ 6 ಹಾಗೂ ಎರ್ನಾಕುಲಂ ಜಿಲ್ಲೆಯಲ್ಲಿ 3 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ಈವರೆಗೂ ಜಿಲ್ಲೆಯಲ್ಲಿ 52 ಮಂದಿ ಕೊರೊನಾ ವೈರಸ್ ಸೋಂಕಿತರು ಇದ್ದಾರೆ ಎಂದು ತಿಳಿದು ಬಂದಿದೆ.

English summary
Kerala's Ernakulam Medical College Is Special Center For Coronavirus Treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X