ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಎಲ್‌ಬಿ ಪದವಿ ಪಡೆಯದೆಯೇ ಬಾರ್‌ ಕೌನ್ಸಿಲ್‌ ಚುನಾವಣೆ ಗೆದ್ದ ಮಹಿಳೆ! ಈಗ ಪರಾರಿ

|
Google Oneindia Kannada News

ತಿರುವನಂತಪುರಂ, ಜು.24: ಕೇರಳದ ಆಲಪ್ಪುಳ ಜಿಲ್ಲೆಯ ಮಹಿಳೆಯು ಎಲ್‌ಎಲ್‌ಬಿ ಪದವಿ ಪಡೆಯದೆಯೇ ಹಾಗೂ ರಾಜ್ಯ ಬಾರ್ ಕೌನ್ಸಿಲ್‌ಗೆ ಸೇರ್ಪಡೆಗೊಳ್ಳದೆಯೇ ಎರಡು ವರ್ಷಗಳ ಕಾಲ ವಕೀಲೆಯಾಗಿ ವಕೀಲೆಯಾಗಿರುವ ಮೂಲಕ ಸಂಪೂರ್ಣ ಕಾನೂನು ವ್ಯವಸ್ಥೆಯನ್ನು ಮೋಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಸ್ ಮಿನಿಟ್‌ನ ವರದಿಯ ಪ್ರಕಾರ, ಈ ವರ್ಷ ಆ ಮಹಿಳೆ ಬಾರ್ ಅಸೋಸಿಯೇಷನ್ ​​ಚುನಾವಣೆಗೆ ಸ್ಪರ್ಧಿಸಿ ಗ್ರಂಥಪಾಲಕರಾಗಿ ಆಯ್ಕೆಯಾದರು.

ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ಕಾನೂನು ವ್ಯಾಪ್ತಿ ಬದಲಾವಣೆಗೆ ಲಕ್ಷದ್ವೀಪ ಆಡಳಿತ ಪ್ರಸ್ತಾಪಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ಕಾನೂನು ವ್ಯಾಪ್ತಿ ಬದಲಾವಣೆಗೆ ಲಕ್ಷದ್ವೀಪ ಆಡಳಿತ ಪ್ರಸ್ತಾಪ

ಘಟನೆಯನ್ನು ವರದಿ ಮಾಡಿದ ಲೈವ್ ಲಾ ಪ್ರಕಾರ, ಮಹಿಳೆ ಅಲಪ್ಪುಳದಲ್ಲಿರುವ ಪ್ರಸಿದ್ಧ ವಕೀಲರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡುವ ಮೂಲಕ ಬಾರ್ ಕೌನ್ಸಿಲ್‌ ಅನ್ನು ಮೋಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Kerala Woman Wins Bar Elections Without Law Degree, Now Absconding

ಇದಕ್ಕೂ ಮೊದಲು ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಈ ಮಹಿಳೆಯು ಅದೇ ವಕೀಲರೊಂದಿಗೆ ಇಂಟರ್ನ್‌ಶಿಪ್ ಮಾಡಿದ್ದರು. ನಂತರ ಆಕೆ ತಾನು ಬಾರ್‌ ಕೌನ್ಸಿಲ್‌ಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಆಲಪ್ಪುಳ ಬಾರ್ ಅಸೋಸಿಯೇಷನ್‌ಗೆ ಪ್ರವೇಶಿಲು ಅರ್ಜಿ ಕೂಡಾ ಸಲ್ಲಿಸಿದ್ದರು.

ಮಹಿಳೆ ಯಾವುದೇ ಕಾನೂನು (ಎಲ್‌ಎಲ್‌ಬಿ) ಪದವಿ ಪಡೆದಿಲ್ಲ ಅಥವಾ ದಾಖಲಾತಿ ಪ್ರಮಾಣಪತ್ರವನ್ನು ಹೊಂದಿಲ್ಲ ಜುಲೈನಲ್ಲಿ, ಬಾರ್ ಅಸೋಸಿಯೇಷನ್ ​​ಅನಾಮಧೇಯ ಪತ್ರವೊಂದು ಎಚ್ಚರಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಇದರ ಸತ್ಯಾಂಶ ತಿಳಿದುಬಂದಿದ್ದು, ಸಂಘವು ಜಿಲ್ಲಾ ಮುಖ್ಯ ನ್ಯಾಯಾಧೀಶರನ್ನು ಎಚ್ಚರಿಸಿ ಆಲಪ್ಪುಳ ಉತ್ತರ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದೆ.

ಲಕ್ಷದ್ವೀಪ ಆಡಳಿತ ಸುಧಾರಣೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್ಲಕ್ಷದ್ವೀಪ ಆಡಳಿತ ಸುಧಾರಣೆ ಪ್ರಶ್ನಿಸಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್

ಬಾರ್‌ನ ಸದಸ್ಯರಾಗಲು, ಎಲ್‌ಎಲ್‌ಬಿ ಪದವಿ ಹೊಂದಿರುವವರು ಯಾವುದೇ ಬಾರ್ ಕೌನ್ಸಿಲ್‌ಗಳೊಂದಿಗೆ ದಾಖಲಾಗಬೇಕು. ದಾಖಲಾತಿ ಸಂಖ್ಯೆ ಮತ್ತು ಪ್ರಮಾಣಪತ್ರವನ್ನು ಪಡೆಯಬೇಕು. ಈ ಮಹಿಳೆಯು ಅರ್ಹತೆ ಇಲ್ಲದ ಕಾರಣ ಕೇರಳ ರಾಜ್ಯ ಬಾರ್ ಕೌನ್ಸಿಲ್‌ಗೆ ದಾಖಲಾಗಲು ಸಾಧ್ಯವಾಗಲಿಲ್ಲ. ಆದರೆ ಆಕೆ ತಿರುವನಂತಪುರಂನ ಇನ್ನೊಬ್ಬ ವಕೀಲರಿಗೆ ಸೇರಿದ ದಾಖಲಾತಿ ಸಂಖ್ಯೆಯನ್ನು ಕೊಟ್ಟಿದ್ದಾಳೆ ಎಂದು ಹೇಳಲಾಗಿದೆ.

ಜುಲೈ 23 ರ ಗುರುವಾರ, ಶರಣಾಗತಿ ಮತ್ತು ಜಾಮೀನು ಪಡೆಯಲು ಮಹಿಳೆಯು ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ. ಆದಾಗ್ಯೂ ಆಲಪ್ಪುಳ ಪೊಲೀಸರು ಜಾಮೀನು ರಹಿತ ವಿಭಾಗಗಳಾದ 420 (ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯನ್ನು ವಿತರಿಸಲು ಪ್ರೇರೇಪಣೆ) ಕೂಡ ಸೇರಿಸಿದ್ದರು. ಜಾಮೀನು ರಹಿತ ಅಪರಾಧಗಳ ಅಡಿಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದ ನಂತರ ಮಹಿಳೆಯು ನ್ಯಾಯಾಲಯದಿಂದ ಪರಾರಿಯಾಗಿದ್ದಾಳೆಂದು ವರದಿಯಾಗಿದೆ. ವರದಿಗಳ ಪ್ರಕಾರ, ಈವರೆಗೆ ಆಕೆಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.

Recommended Video

ಜೋಗ ಜಲಪಾತವನ್ನು ಈ ಸಮಯದಲ್ಲಿ ನೋಡಲು ಎರಡು ಕಣ್ಣು ಸಾಲದು | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Kerala Woman Wins Bar Elections Without Law Degree, Now Absconding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X